Tuesday, January 22, 2013

ಮಂಜೇಶ್ವರದಲ್ಲಿ ಪ್ರಚಾರ ಗಿಟ್ಟಿಸುತ್ತಿರುವ ಪೊಲೀಸರಿಂದಲೂ ಪತ್ತೆಹಚ್ಚಲು ಸಾದ್ಯವಾಗದ ಬ್ಲ್ಯಾಕ್ ಮ್ಯಾನ್


*ರಹಿಮಾನ್ ಉದ್ಯಾವರ

ಮಂಜೇಶ್ವರ:ತಿರುವನಂತಪುರ,ಕಣ್ಣೂರು ಹಾಗು ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಾರವನ್ನು ಗಿಟ್ಟಿಸಿದ ಬ್ಲ್ಯಾಕ್ ಮ್ಯಾನ್ ಕಾಟ ಇದೀಗ ಮಂಜೇಶ್ವರಕ್ಕೂ ತಲುಪಿದೆ. ಇದೀಗ ಮಂಜೇಶ್ವರಕ್ಕೆ ಸಮೀಪದ ಬಾಯಾರು ಹಾಗು ಬಂದಿಯೋಡ್ ಪ್ರದೇಶಗಳಲ್ಲಿ ಅಜಾನುಬಾಹು ಹಾಗು  ಆರೂವರೆ ಅಡಿಗಿಂತ ಎತ್ತರದ ಕಪ್ಪು ಮೈ ಬಣ್ಣ ಮತ್ತು ಭಯಾನಕ ರೂಪ ಹೊಂದಿರುವ ವ್ಯಕ್ತಿ ಎಂದು ಬಿಂಬಿಸಲಾಗುತ್ತಿರುವ ಬ್ಲ್ಯಾಕ್ ಮ್ಯಾನ್ ನನ್ನು ಕಂಡಿರುವುದಾಗಿ ಎಂಬ ಸುದ್ದಿ ಹರಡತೊಡಗಿದೆ.ಬಂದಿಯೋಡ್ ನ ಒಂದು ಫ್ಲಾಟ್ ನಲ್ಲಿ ಒಂದು ಮಹಿಳೆಗೆ ಕಂಡಿರುವುದಾಗಿ ಸುದ್ದಿ ಹರಡಿದರೆ ಬಾಯಾರಿನಲ್ಲಿ ರಾತ್ರಿ ವೇಳೆ ಒಂದು ಮಜ್ಲಿಸ್ ಸ್ವಲಾತ್ ಮುಗಿಸಿ ವಾಹನದಲ್ಲಿ ಬರುತಿದ್ದ ಮಹಿಳೆಗೆ ಹಾಗು ಚಾಲಕನಿಗೆ ರಸ್ತೆಯ ಮದ್ಯೆ ಪ್ರತ್ಯಕ್ಷಗೊಂಡಿರುವುದಾಗಿ ಸುದ್ದಿ ಹರಡುತಿದ್ದು ಇದರಿಂದಾಗಿ ಈ ಪ್ರದೇಶಗಳಲ್ಲಿ ಸಂಜೆಯಾದೊಡನೆ ಹೆಂಗಸರು ಹಾಗು ಮಕ್ಕಳು ಮನೆಯಿಂದ ಹೊರಗೆ ಇಳಿಯಲು ಹೆದರುತ್ತಿರುವ ದೃಶ್ಯ ಗೋಚರವಾಗುತ್ತಿದೆ. ನಿರ್ಜನ ಪ್ರದೇಶಗಳಲ್ಲಿ ಹಾಗು ರಾತ್ರಿ ವೇಳೆಗಳಲ್ಲಿ ಮಾತ್ರ ಈ ಬ್ಲ್ಯಾಕ್ ಮ್ಯಾನ್ ಪ್ರತ್ಯಕ್ಶಗೊಳ್ಳುತ್ತಿರುವುದಾಗಿ ಪ್ರಚಾರವನ್ನು ಗಿಟ್ಟೀಸುತ್ತಿರುವ ಈ ಬ್ಲ್ಯಾಕ್ ಮ್ಯಾನ್ ಕಥೆ ಈಗ ಮಂಜೇಶ್ವರದ ಜನ್ತೆಯನ್ನು ಭೀತಿಗೊಳಪಡಿಸಿದೆ.
ಪ್ರತಿ ವರ್ಷಗಳ ಕೊನೆಯ ತಿಂಗಳಿನಲ್ಲಿ ಹಾಗು ವರ್ಷದ ಮೊದಲಿನ ತಿಂಗಳಿನಲ್ಲಿ ಮಾತ್ರವಾಗಿ ಸಣ್ಣ ಸಣ್ಣ ಕಳ್ಳತನಮಾಡುತ್ತಿರುವ ತಂಡವೊಂದು ರಾಜ್ಯದ ಹಲವು ಸ್ಥಳಗಳಲ್ಲಿ ಠಿಕಾಣಿ ಹೂಡಿದ್ದು ಈ ತಂಡ ತಮ್ಮ ಕಾರ್ಯವನ್ನು ಸಾಧಿಸಲು ಮಾರು ವೇಷದಲ್ಲಿ ರಾತ್ರಿಯಿಂದ ತೊಡಗಿ ಮುಂಜಾನೆ ತನಕ ತಮ್ಮ ಕಾರ್ಯಚಟುವಟಿಗಳಲ್ಲಿ ತೊಡಗಿಸಿ ಕೊಂಡರೆ ಕೆಲವರು ಸ್ವಲ್ಪ ಬೇಗನೆ ತಮ್ಮ ಕಳವು ಕೆಲಸಗಳಲ್ಲಿ ನಿರತರಾಗುತ್ತಿರುವುದು ಕಂಡು ಬರುತ್ತಿದೆ.ಮಹಿಳೆಯರು ಹಾಗು ಮಕ್ಕಳು ಮಾತ್ರ ಇರುವ ಮನೆಯನ್ನು ಆಯ್ಕೆ ಮಾಡಿ ಅಂತವರ ಮನೆಗೆ ತೆರೆದ ಕಿಟಿಕಿ ಮೂಲಕ ಕೈ ಹಾಕುವುದು ನಿದ್ರಿಸುತ್ತಿರುವ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗುವುದು ಈ ತುಂಡು ಕಳ್ಳರ ಧಂಧೆಯಾಗಿದೆ.ಇಂತಹ ಕಳ್ಳರು ತಮ್ಮ ಪರಿಚಯವನ್ನು ಮರೆಮಾಚಲು ಕಪ್ಪು ಬಣ್ಣ ಧರಿಸಿ ಮುಖಕ್ಕೆ ಬ್ಲ್ಯಾಕ್ ಮ್ಯಾನ್ ತರ ದ ಮುಖವಾಡ ಧರಿಸಿ ಬಂದಾಗ ಇದನ್ನು ಕಂಡ ಕೆಲವರು ಬ್ಲ್ಯಾಕ್ ಮ್ಯಾನ್ ಆಗಿರಬಹುದೆಂದು ಭಾವಿಸಿ ಹೆದರುತ್ತಿರಬಹುದೆಂಬುದಾಗಿ ಪೊಲೀಸರು ಶಂಶಯವನ್ನು ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲದೆ ಮಂಜೇಶ್ವರದ ಸಮೀಪವಿರುವ ಇದೀಗ ಬ್ಲ್ಯಾಕ್ ಮ್ಯಾನ್ ಪ್ರಚಾರಗಿಟ್ಟಿಸಿಕೊಂಡ ಬಾಯಾರು ಹಾಗು ಬಂದಿಯೋಡ್ ಪ್ರದೇಶಗಳಲ್ಲಿ ರಾತ್ರಿ ಸಮಯಗಳಲ್ಲಿ ಅದೆಷ್ಟೋ ಮಾನಸಿಕ ರೋಗಿಗಳಿದ್ದು ಇದರಲ್ಲಿ ಹಲವು ವಿಧದ ರೋಗಿಗಳಿದ್ದು ಕೆಲವರು ಜನರನ್ನು ಕಂಡು ಹೆದರಿದರೆ ಕೆಲವರು ಹೆಂಗಸರು ಹಾಗು ಮಕ್ಕಳನ್ನು ಕಂಡರೆ ಹೆದರಿಸುವ ಮನೋ ರೋಗಿಗಳು ಕೂಡಾ ಇದ್ದಾರೆ ಇದರಿಂದಲೂ ಬ್ಲ್ಯಾಕ್ ಮ್ಯಾನ್ ಪ್ರಚಾರಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತು ಮಂಜೇಶ್ವರದ ಹೆಚ್ಚಿನ ಪ್ರದೇಶಗಳಲ್ಲಿ ಸಲಿಂಗ ಕಾಮಿಗಳು ವಿಕೃತ ಕಾಮಿಗಳ ಉಪಟಲ ಮೊದಲಿನಿಂದಲೇ ಅತಿಯಾಗಿದ್ದು ಇಂತವರು ಇದೀಗ ಬ್ಲ್ಯಾಕ್ ಮ್ಯಾನ್ ನ ಹೆಸರಿನಲ್ಲಿ ಮನೆಯ ಬೆಡ್ ರೂಂ ಗಳಲ್ಲಿ ಇಣುಕಿ ನೋಡುವುದು ಹಾಗು ಬಾತ್ ರೂಂ ಗಳ ಮೂಲಕ ಇಣುಕಿ ನೋಡುವುದು ಇಂತಹ ಸಂದರ್ಭಗಳಲ್ಲಿ ಪತ್ತೆ ಹಚ್ಚಲು ಸಾದ್ಯವಾಗದ ರೀತಿಯಲ್ಲಿ ಮುಖವಾಡ ಧರಿಸಿ ಇರುತ್ತಾರೆ ಇಂತವರನ್ನು ಕಂಡರೆ ಮಹಿಳೆಯರು ಅಥವಾ ಮಕ್ಕಳು ಬ್ಲ್ಯಾಕ್ ಮ್ಯಾನ್ ಗಳೆಂದು ಊಹಿಸಿ ಬೆಚ್ಚಿ ಬೀಳುವವರೂ ಇದ್ದಾರೆ.
ರಾಜ್ಯದ ಹಲವಡೆ ಹಾಗು ಮಂಜೇಶ್ವರದ ಕೆಲವು ಪ್ರದೇಶಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವುದಾಗಿ ಬಿಂಬಿಸುತ್ತಿರುವ ಈ ಬ್ಲ್ಯಾಕ್ ಮ್ಯಾನ್ ಯಾರಿಗೂ ಅಕ್ರಮ ನದೆಸಿದ ಬಗ್ಗೆ ವರದಿಯಾಗಿಲ್ಲ.ಮಂಜೇಶ್ವರದ ತೂಮಿನಾಡು,ಕುಂಜತ್ತೂರು ಮಂಜೇಶ್ವರ ಉಪ್ಪಳ ಪ್ರದೇಶಗಳಲ್ಲಿ ಮಾದಕ ದ್ರವ್ಯ ಸೇವನೆಯ ಅತ್ಯಧಿಕ ವ್ಯಸನಿಗಳು ಇದ್ದಾರೆ ಇವರಲ್ಲಿ ಹಲವರು ರಾತ್ರಿಯಲ್ಲಿ ಪದೇ ಪದೇ ಅಡಗಿ ನಿಂತು ಹೆದರಿಸುವವರು ಇದ್ದಾರೆ ಇಂತಹ ವ್ಯಕ್ತಿಗಳನ್ನು ಜನರು ಬ್ಲ್ಯಾಕ್ ಮ್ಯಾನ್ ಗಳೆಂದು ಬಿಂಬಿಸಿ ಸಂಜೆಯಾಗುವಾಗ ಭೀತಿಯಿಂದ ಮನೆಯಿಂದ ಹೊರಗಡೆ ಇಳಿಯದೆ ಭಯದ ವಾತಾವರಣವನ್ನು ಸೃಷ್ಟಿಸುವುದರಲ್ಲಿ ಏನಿದೆ ಅರ್ಥವೆಂದು ಪೊಲೀಸರ ಪ್ರಶ್ನೆ.ಮರಳು ಮಾಫಿಯಾಗಳು,ಜೈಲು ಹಾರಿದವರು,ಮಾದಕ ವಸ್ತು ಮಾರಾಟಗಾರರು,ಕಾಡುಗಳಲ್ಲಿ ವನ್ಯ ಜೀವಿಗಳ ಬೇಟೆ ಮಾಡುವವರು ಕಳ್ಳ ಭಟ್ಟಿ ಸಾರಾಯಿ ಧಂಧೆ ನಡೆಸುವವರು,ಉಗ್ರಗಾಮಿಗಳು,ನಕ್ಸಲೈಟುಗಳು,ಹಾಗು ಇತರ ಸಮಾಜ ಘಾತಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ತಮ್ಮ ಧಂಧೆಯನ್ನು ನಿರ್ಬೀತವಾಗಿ ನಡೆಸಲು ಹೊರಗಿನವರು ತಮ್ಮ ವ್ಯವಹಾರದಲ್ಲಿ ಕೈಹಾಕದೆ ಇರಲು ಮಾಯಾವಿ ಅಥವಾ ಬ್ಲ್ಯಾಕ್ ಮ್ಯಾನ್ ವೇಷದಲ್ಲಿ ಪ್ರಚಾರಗಿಟ್ಟಿಸಿ ಜನರನ್ನು ಭಯಬೀತರನ್ನಾಗಿ ಮಾಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.ಆದರೆ ಈ ಬ್ಲ್ಯಾಕ್ ಮ್ಯಾನ್ ಯಾರು? ಬ್ಲ್ಯಾಕ್ ಮ್ಯಾನ್ ನ ಕುರಿತಾದ ಕಥೆಗಳ ಸತ್ಯ ಸಮ್ಗತಿ ಎನೆಂಬುದನ್ನು ಪತ್ತೆ ಹಚ್ಚುವುದರಲ್ಲಿ ಪೊಲೀಸರು ಕೂಡಾ ವಿಪಲಗೊಂಡಿರುವ ಹಿನ್ನಲೆಯಲ್ಲಿ ದಿನದಿಂದ ದಿನಕ್ಕೆ ಕುತೂಹಲ ಭರಿತವಾದ ಬ್ಲ್ಯಾಕ್ ಮ್ಯಾನ್ ಸುದ್ದಿಯ ರಹಸ್ಯವನ್ನು ಬೇಧಿಸಲು ಇಲ್ಲಿಯ ಪೊಲೀಸರು ಶತಪ್ರಯತ್ನವನ್ನು ಮಾಡುತಿದ್ದಾರೆ.

No comments:

Post a Comment