Thursday, January 3, 2013

ಮಂಜೇಶ್ವರ: ಕೋಟಿ ರೂ ಮೌಲ್ಯದ ಮಾದಕ ವಸ್ತು ವಶ :ಇಬ್ಬರ ಸೆರೆ


Jan-03-2013
ಮಂಜೇಶ್ವರ: ಒಂದು ಕೋಟಿ ರೂ ಮೌಲ್ಯದ ಏಳು ಟನ್ ಮಾದಕ ವಸ್ತುವನ್ನು ಹೇರಿಕೊಂಡು ಹೋಗುತಿದ್ದ ಲಾರಿಯನ್ನು ವಾಮಂಜೂರು ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಲಾರಿ ಚಾಲಕ ಹರ್ಯಾಣದ ಹರ್ಷಾದ್(34) ಹಾಗು ಕ್ಲೀನರ್ ತಾಯಿರ್(24) ಎಂಬವರನ್ನು ಪೊಲೀಸರು ಬಂಧಿಸಿ ಜತೆಯಾಗಿ ಎಚ್.ಆರ್.74/1079 ನಂಬ್ರದ ಲಾರಿ ಸಮೇತ ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಈ ಲಾರಿಯಲ್ಲಿ  7 ಟನ್ ತೂಕದ ಮಾದಕ ವಸ್ತು ಉತ್ಪನ್ನಗಳನ್ನು 305 ಪೆಟ್ಟಿಗೆಗಳಲ್ಲಿ ತುಂಬಿಸಿ ಇಡಲಾಗಿತ್ತು.ಇದು 1 ಕೋಟಿ ರೂ ಮೌಲ್ಯದ ಮಾದಕ ವಸ್ತು ಆಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಸಂಪೂರ್ಣ ತನಿಖಾ ವರದಿ ಸಿಕ್ಕಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುದೆಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.

No comments:

Post a Comment