Monday, January 28, 2013

ಮಂಜೇಶ್ವರದಲ್ಲಿ ಎಲ್ಲೆಡೆ ಕುಡಿಯುವ ನೀರಿಗೆ ಬರ:ನಾಗರಿಕರು ಸಂಕಷ್ಟದಲ್ಲಿ



ಮಂಜೇಶ್ವರ:ಮಂಜೇಶ್ವರ ಗ್ರಾ.ಪಂ.ವ್ಯಾಪ್ತಿಯ ಹೊಸಬೆಟ್ಟು,ಬಂಗ್ರಮಂಜೇಶ್ವರ,ಉದ್ಯಾವರಗುಡ್ಡೆ,ಗೇರುಕಟ್ಟೆ,ತೂಮಿನಾಡು ಉದ್ಯನಗರ,ಹಿಲ್ಟಾಪ್ ನಗರ,ಅಡ್ಕಪಲ್ಲ ಮುಂತಾದ ಸ್ಥಳಗಳಲ್ಲಿ ಬೇಸಿಗೆಯ ಬೇಗೆ ಆರಂಭಗೊಳ್ಳುತ್ತಿರುವಂತೆಯೇ ಕುಡಿಯುವ ನೀರಿನ ಸಮಸ್ಯೆ ತಲೆದೋರತೊಡಗಿದೆ.
 ಕುಂಜತ್ತೂರು ತೂಮಿನಾಡು ನಿವಾಸಿಗಳಿಗೆ ಕೇರಳ ವಾಟರ್ ಅಥೋರಿಟಿಯಿಂದ ಸಮರ್ಪಕವಾದ ರೀತಿಯಲ್ಲಿ ನೀರು ಪೈಪ್ ಲೈನ್ ಗಳಲ್ಲಿ ಸಿಗುತ್ತಿಲ್ಲವೆಂಬುದಾಗಿ ನಾಗರಿಕರಿಂದ ವ್ಯಾಪಕವಾದ ಆಕ್ರೋಶ ವ್ಯಕ್ತವಗುತಿದ್ದರೂ ಕೇರಳ ವಾಟರ್ ಅಥೋರಿಟಿ ಅಧಿಕೃತರು ಗ್ರಾಮಸ್ಥರ ಸಮಸ್ಯೆಯನ್ನು ಪರಿಗಣಿಸಿದೆ ಗಾಢವಾದ ನಿದ್ರೆಯಲ್ಲಿರುವುದಾಗಿ ಇಲ್ಲಿಯ ನಾಗರಿಕರು ಆರೋಪಿಸಿದ್ದು ಈ ಬಗ್ಗೆ ಮಂಜೇಶ್ವರ ಗ್ರಾಹಕರ ವೇದಿಕೆಯ ಪಧಾಧಿಕಾರಿಗಳು ಕಾಲನಿಗಳಿಗೆ ಬೇಟಿ ನೀಡಿ ಜಲನಿಗಮದ ಅಧಿಕಾರಿಗಳನ್ನು ನಿದ್ರೆಯಿಂದ ಎಬ್ಬಿಸಲು ಗ್ರಾಹಕರಿಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಲು ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.ಕೆಲವೊಂದು ದಿನಗಳಲ್ಲಿ ದಿನವಿಡೀ ನೀರು ಬಾರದೆ ಇದ್ದು ಮರುದಿವಸ ಕೇವಲ ಕೆಲವೇ ಸಮಯ ನೀರು ಬಂದು ಮಾಯವಾಗುತ್ತಿದೆ.ಇದರ ಬಗ್ಗೆ ನಾಗರಿಕರು ಓಪರೇಟರ್ ರತ್ತಿರ ವಿಚಾರಿಸಿದರೆ ಮೋಟಾರ್ ಸರಿ ಇಲ್ಲ ವೆಂಬ ಒಂದೇ ಉತ್ತರ. ಇದೇ ರೀತಿ ಹೊಸಬೆಟ್ಟು,ಬ.ಮಂಜೇಶ್ವರ,ಉದ್ಯಾವರಗುಡ್ಡೆ,ಗೇರುಕಟ್ಟೆ ಮುಂತಾದ ಸ್ಥಳಗಲಲ್ಲಿ ಬಾವಿಗಳಲ್ಲಿ ನೀರು ಈಗಾಗಲೇ ಬತ್ತಿಹೋಗಿದ್ದು ಈ ಪರಿಸರವಾಸಿಗಳು ಪೈಪ್ ಲೈನ್ ನೀರಿಗಾಗಿ ಇಡೀ ದಿನ ಕಾಯುವಂತ ಪರಿಸ್ಥಿತಿ ಬಂದೊದಗಿರುವುದಾಗಿಯೂ ತಿಳಿದು ಬಂದಿದೆ.
ಮಂಜೇಶ್ವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಜನರು ನೀರಿಗಾಗಿ ಅನುಭವಿಸುತ್ತಿರುವ ಸಂಕಷ್ಟವನ್ನು ಪಂಚಾಯತ್ ಅಧಿಕೃತರು ಗಮನಹರಿಸಬೇಕಾಗಿದೆ.ಮಾತ್ರವಲ್ಲದೆ ಮಂಜೇಶ್ವರದ ಕೆಲವೊಂದು ಸ್ಥಳಗಳಲ್ಲಿ ಪ್ರದರ್ಶನ ವಸ್ತುವಾಗಿ ಉಳಿದಿರುವ ಕೊಳವೆ ಬಾವಿಗಳ ಮೋಟಾರ್ ಗಳನ್ನು ಸರಿಪಡಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.ಮಾತ್ರವಲ್ಲದೆ ಪಂಚಾಯತ್ ಅಧಿಕೃತರು ಪ್ರತಿಯೊಂದು ಕಾಲನಿಗಳಿಗೂ ಬೇಟಿ ನೀಡಿ ಜನರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಕೂಡಲೇ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿಕೊಡಲು ಇಲ್ಲಿಯ ನಾಗರಿಕರು ಆಗ್ರಹಿಸಿದ್ದಾರೆ.

No comments:

Post a Comment