Wednesday, January 16, 2013

ಹೊಸಂಗಡಿ ಫಿಷ್ ಮಾರ್ಕೆಟ್ ಸ್ಥಳ ಮಾರಾಟ:ಉನ್ನತ ತನಿಖೆಗಾಗಿ ಮಂಜೇಶ್ವರ ಕನ್ಸ್ಯೂಮರ್ ಸೊಸೈಟಿ ಆಗ್ರಹಕುಂಜತ್ತೂರು:ಮಂಜೇಶ್ವರದ ಹೊಸಂಗಡಿಯಲ್ಲಿ ಮೀನು ಮಾರ್ಕೆಟ್ ಗಾಗಿ ೧೯೯೬-೨೦೦೧ ರ ಆರಂಭದಲ್ಲಿ ಬ್ಲಾಕ್ ಪಂಚಾಯತ್ ವತಿಯಿಂದ ೨ ಲಕ್ಷ ರೂಪಾಯಿ ಮಂಜೂರಾಗಿದ್ದು  ಇದಕ್ಕೆ ಸಂಭಂಧಪಟ್ಟ ಭೂಮಿಯನ್ನು ಸ್ಥಳೀಯ ಓರ್ವ ವ್ಯಕ್ತಿ ದಾನವಾಗಿ ನೀಡಿದ್ದರು.ಅದೇ ರೀತಿ ಸದ್ರಿ ಮೀನು ಮಾರ್ಕೆಟ್ ನ ಕೆಲಸಕ್ಕಾಗಿ ಸಂಭಂಧ ಪಟ್ಟ ಕನ್ವೀನರ್ ನೊಬ್ಬ ಸುಮಾರು ೬೦ ಸಾವಿರ ರೂಪಾಯಿ ಮುಂಗಡ ಹಣ ಪಡೆದು ಪೌಂಡೇಶನ್ ಹಾಗು ಕಾಂಕ್ರಿಟ್ ಕಂಬಗಳ ಕೆಲಸ ಅರ್ಧಕ್ಕೆ ತಲುಪುವಾಗ ಸಮೀಪವಿರುವ ಆಸ್ಪತ್ರೆಯೊಂದರ ಡಾಕ್ಟರ್ ರೊಬ್ಬರು ಆಸ್ಪತ್ರೆಯ ಹತ್ತಿರ ಮೀನು ಮಾರ್ಕೆಟ್ ಬಂದರೆ ಸಂಪೂರ್ಣ ಮಲಿನವಾಗಬಹುದೆಂಬ ಉದ್ದೇಶವನ್ನಿಟ್ಟುಕೊಂಡು ಮೀನು ಮಾರ್ಕೆಟ್ ಮಾಡುವ ಮೊದಲು ಒಂದು ಚರಂಡಿಯ ವ್ಯವಸ್ಥೆ ಮಾಡಬೇಕೆಂದು ಕೋರಿ ಹೈಕೋರ್ಟ್ ಗೆ ಮೊರೆ ಹೋಗಿ ಮೀನು ಮಾರ್ಕೆಟ್ ನ ಕೆಲಸವನ್ನು ಸ್ಥಗಿತಗೊಳಿಸಿದ್ದರು.
ನಂತ್ರ ಬ್ಲಾಕ್ ಪಂಚಾಯತ್ ಅದರ ಬಗ್ಗೆ ಹೆಚ್ಚಿನ ಗಮನ ಹರಿಸದೆ ಮಾತ್ರವಲ್ಲದೆ ಅದಕ್ಕೊಂದು ಪರಿಹಾರವನ್ನು ಕೂಡಾ ಕಂಡು ಕೊಳ್ಳಲು ಸಾಧ್ಯವಾಗದೆ ಸದ್ರಿ ಭೂಮಿಯಲ್ಲಿ ಹಾಕಲಾಗಿದ್ದ ಪೌಂಡೇಶನ್ ಹಾಗು ಕಾಂಕ್ರೀಟ್ ಕಂಬಗಳು ಕೆಲವು ಸಮಯಗಳ ಕಾಲ ಹಾಗೇಯೇ ಪಾಲು ಬಿದ್ದಿದ್ದವು.ಇದೀಗ ಆ ಸ್ಥಳದಲ್ಲಿ ಹಾಕಲಾಗಿದ್ದ ಪೌಂಡೇಶನ್ ಹಾಗು ಕಂಬಗಳನ್ನು ಕೆಡವಿ ಭೂಮಿಯನ್ನು ನೆಲತಟ್ಟು ಮಾಡಿ ದಾನವಾಗಿ ನೀಡಿದ ವ್ಯಕ್ತಿಯೇ ಬೇರೊಬ್ಬರಿಗೆ ಮಾರಿರುವುದಾಗಿ ತಿಳಿದು ಬಂದಿದೆ.ಈ ವಿಷಯದ ಬಗ್ಗೆ ರಾಜಕೀಯ ಪಕ್ಷವೊಂದು ಹಕ್ಕು ಖಾಯಿದೆ ನಿಯಮ ಪ್ರಕಾರ ಬ್ಲಾಕ್ ಪಂಚಾಯತ್ ನಲ್ಲಿ  ವಿಚಾರಿಸಿದಾಗ ಬ್ಲಾಕ್ ಪಂಚಾಯತ್ ಫಿಶ್ ಮಾರ್ಕೆಟ್ ಗಾಗಿ ನಿರ್ಮಿಸಲಾಗಿದ್ದ ಪೌಂಡೇಶನ್ ಹಾಗು ಕಂಬಗಳನ್ನು ಕೆಡವಿ ಭೂಮಿಯನ್ನು ಮಾರಾಟ ಮಾಡಿದ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.ಈ ತನಿಖೆಯನ್ನು ವಿಳಂಭಗೊಳಿಸದೆ ಊರ್ಜಿತ ಗೊಳಿಸದಿದ್ದಲ್ಲಿ ಮಂಜೇಶ್ವರ ಗ್ರಾಹಕರ ವೇದಿಕೆ ಈ ದೂರನ್ನು ವಿಜಿಲೆನ್ಸ್ ಗೆ ನೀಡಲು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ.

No comments:

Post a Comment