Thursday, January 24, 2013

ಪವಿತ್ರ ಮಕ್ಕಾ ಯಾತ್ರೆಯಲ್ಲಿ ಉಪ್ಪಳ ನಿವಾಸಿಯ ನಿಧನ



ಮಂಜೇಶ್ವರ:ಕುಟುಂಬದೊಂದಿಗೆ ಉಮ್ರಾ ನಿರ್ವಹಿಸಲು ಪವಿತ್ರ ಮಕ್ಕಾ ಕ್ಕೆ ತೆರಳಿದ ವ್ಯಕ್ತಿಯೊಬ್ಬರು ಪ್ರಾರ್ಥಣೆಯಲ್ಲಿ ಪಾಲ್ಗೊಂಡ ವೇಳೆ ಕುಸಿದು ಬಿದ್ದು ಮೃತ ಪಟ್ಟ ಘಟನೆ ಇಲ್ಲಿಗೆ ಸಮೀಪದ ಉಪ್ಪಳದಿಂದ ವರದಿಯಾಗಿದೆ
ಮೃತ ಪಟ್ಟ ವ್ಯಕ್ತಿ ಉಪ್ಪಳ ಹೇರೂರು ಚಿನ್ನಮೊಗರು ಬದ್ರಿಯಾ ನಗರ ನಿವಾಸಿ ಮಹಮ್ಮದ್ ಪಂಚಮ್(೬೨) ಎಂಬವರಾಗಿದ್ದಾರೆ.ಈ ತಿಂಗಳ ೧೯ ರಂದು ರಾತ್ರಿ ಅಲ್ ಫಲಿಹ್ ಉಂರಾ ಟೂರ್ ನವರ ನೇತೃತ್ವದಲ್ಲಿ ಮಹಮ್ಮದ್ ಪಂಚಂ ಪತ್ನಿ ಹಾಗು ಮಕ್ಕಳು ಮಕ್ಕಾಗೆ ಯಾತ್ರೆ ಗೈದಿದ್ದರು.ಕುಟುಂಬದೊಂದಿದೆ ಉಮ್ರಾ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಸಮಯದಲ್ಲಿ ಎದೆ ನೋವಿನಲ್ಲಿ ಕುಸಿದು ಬಿದ್ದು ಮರಣ ಸಮ್ಭವಿಸಿದೆ.

No comments:

Post a Comment