Friday, January 4, 2013

ಮಂಜೇಶ್ವರ:ಪಾವೂರು ಲೈಂಗಿಕ ದೌರ್ಜನ್ಯ:ಆರೋಪಿಗಳಿಂದ ಮಾಹಿತಿ ಸಂಗ್ರಹ


Jan-04-2012
ಮಂಜೇಶ್ವರ:ಇಲ್ಲಿಗೆ ಸಮೀಪದ ಪಾವೂರಿನ 9 ನೇತರಗತಿ ವಿದ್ಯಾರ್ಥಿನಿ ಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಭಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಲೈಂಗಿಕ ಕಿರುಕುಳ ನೀಡಿದ ಸ್ಥಳಗಳಾದ ಬೆಂಗಳೂರು ಹಾಗು ಇತರ ಹಲವಡೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದರು.ಸ್ವಂತ ಸಹೋದರಿಗೆ ಲೈಂಗಿಕ ಕಿರುಕುಳ ನೀಡಲು ಒತ್ತಾಸೆ ನೀಡಿದ ವಿದ್ಯಾರ್ಥಿನಿಯ ಸಹೋದರ ಪಾವೂರು ನಿವಾಸಿ ಹಸೈನಾರ್ ಯಾನೆ ಅಷ್ರಫ್,ಹಾಗು ಇನ್ನೋರ್ವ ಆರೋಪಿ ಅಸಿಸ್(22) ಎಂಬಿಬ್ಬರನ್ನು ಪೊಲೀಸರು ಹಲವಡೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದರು.ಈ ಹಿಂದೆ ಬಂದಿತರಾಗಿದ್ದ ಇಬ್ಬರು ಆರೋಪಿಗಳನ್ನು ಬಳಿಕ ನ್ಯಾಯಂಗ ಬಂಧನದಲ್ಲಿರಿಸಲಾಗಿತ್ತು.ಬಳಿಕ ಪೊಲೀಸರು ಅವರಿಬ್ಬರನ್ನು ನ್ಯಾಯಾಲಯದ ಅನುಮತಿಯಂತೆ ಪುನಃ ವಶಕ್ಕೆ ತೆಗೆದು ಹಲವು ಸ್ಥಳಗಳಿಗೆ ಒಯ್ದು ಅವರ ಮೂಲಕವೇ ಮಾಹಿತಿ ಸಂಗ್ರಹಿಸಿದ ಬಳಿಕ ನಿನ್ನೆ ಪುನಃ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯ್ತು.ನಂತರ ಅವರನ್ನು ಮತ್ತೆ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಬಿಟ್ಟು ಕೊಡಲಾಯ್ತು.

No comments:

Post a Comment