Monday, January 7, 2013

ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಪೊಲೀಸರಿಂದ ಪೀಡನೆಯಾಗಬಾರದು


Jan-07-2013
ಮಂಜೇಶ್ವರ :ರಾಜ್ಯದಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಪೊಲೀಸರಿಂದ ಯಾವುದೇ ರೀತಿಯ ಅನ್ಯಾಯವಾಗಬಾರದಾಗಿ ಕೇರಳ ರಾಜ್ಯ ಪೊಲೀಸ್ ಮಹಾ ನಿರ್ಧೇಶಕರು ಎಚ್ಚರಿಕೆಯ ಕರೆಗಂಟೆ ನೀಡಿರುತ್ತಾರೆ.ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರ ಹೇಳಿಕೆಯನ್ನು ಪಡೆಯುವ ಸಂದರ್ಭ ಅವರನ್ನು ಠಾಣೆಗೆ ಕರೆಸಿ ವಿವಿಧೆಡೆಗೆ ಒಯ್ಯುವ ನೆಪದಲ್ಲಿ ಕಿರುಕುಳವನ್ನು ನೀಡುತ್ತಿರುವ ಪೊಲೀಸ್ ಇಲಾಖೆಗೆ ಕಡಿವಾಣ ಹಾಕಿರುತ್ತಾರೆ.
ಪೊಲೀಸ್ ಮಹಾ ನಿರ್ಧೆಶಕರ ಆದೇಶದಂತೆ ಅತೀ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯನ್ನು ವಿವಿಧ ಸ್ಥಳಗಳಲ್ಲಿ ಕರೆದೊಯ್ದು ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ.ಈ ಸಂದರ್ಭ  ಮಹಿಳೆಯರ ಮನೆಯ ಸದಸ್ಯರ ಜತೆಯಲ್ಲಿ ಮುಖವನ್ನು ಕಡ್ಡಾಯವಾಗಿ ಬಟ್ಟೆಯಿಂದ ಮುಚ್ಚಿ ಕೊಂಡು ಹೋಗಬೇಕಾಗಿದೆ.ಇದೆಲ್ಲದಕ್ಕೂ ಮೊದಲಾಗಿ ಮನೆಯವರ ಹಾಗು ಉನ್ನತ ಪೊಲೀಸ್ ಅಧಿಕಾರಿಯ ಅನುಮತಿಯನ್ನು ಕೂಡಾ ಪಡೆದಿರಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.ಕತ್ತಲು ಆವರಿಸಿದ ನಂತರ ಅಥವಾ ಸಮವಸ್ತ್ರದಲ್ಲಿ ಇಲ್ಲದ ಪೊಲೀಸರ ಜತೆಯಾಗಿ ಹೇಳಿಕೆಯನ್ನು ದಾಖಲಿಸಬಾರದಾಗಿದೆ.ಕಿರುಕುಳಕ್ಕೊಳಗಾದ ಮಹಿಳೆಗೆ ಮಾನಸಿಕವಾಗಿ ಯಾವುದೇ ತೊಂದರೆ ಬಾರದ ರೀತಿಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ಹಾಗು ಆಕೆಯ ವೈಯುಕ್ತಿಕ ಮಾಹಿತಿ ಹಾಗು ಅವಳ ಬಾವಚಿತ್ರವನ್ನು ಮಾದ್ಯಮಗಳಲ್ಲಿ ಪ್ರಕಟವಾಗದ ರೀತಿಯಲ್ಲಿ ಪೊಲೀಸರು ಕಾಯ್ದುಕೊಂಡು ಮಹಿಳೆಯ ಮೇಲೆ ಅನುಕಂಪ ಹಾಗು ಸಹಾನುಭೂತಿ ನಿಲುವು ವ್ಯಕ್ತಪಡಿಸಿ ಮಾನಸಿಕ ಆಘಾತವಾಗದ ರೀತಿಯಲ್ಲಿ ತನಿಖೆ ಮುಂದುವರಿಸಬೇಕಾಗಿದೆ.
ಕಿರುಕುಳಕ್ಕೊಳಗಾದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಿ ಅದೇ ವೇಳೆ ಗೋಪ್ಯತೆಯನ್ನು ಖಾತರಿಪಡಿಸಿ ಆಕೆ ಮತ್ತು ಆಕೆಯ ಸಂಭಂಧಿಕರ ಕುರಿತಾದ ಮಾಹಿತಿಯನ್ನು ಬಹಿರಂಗ ಗೊಳ್ಳದಂತೆ ಪೊಲೀಸರು ಕಾಪಾಡಿಕೊಂಡು ಬಂದು ಪೊಲೀಸ್ ತನಿಖೆ ಒಂದು ಪೀಡನೆಯಾಗಬಾರದಾಗಿ ಡಿಜಿಪಿ ತಮ್ಮ ಆದೇಶದಲ್ಲಿ ತಿಳಿಸಿರುತ್ತಾರೆ.

No comments:

Post a Comment