Tuesday, January 8, 2013

ನಕಲಿ ಅಂಕಪಟ್ಟಿ ಜಾಲ: ಇಬ್ಬರು ಆರೋಪಿಗಳ ಸೆರೆ


ನಕಲಿ ಅಂಕಪಟ್ಟಿ ಜಾಲ: ಇಬ್ಬರು ಆರೋಪಿಗಳ ಸೆರೆ


 ಜನವರಿ -08-2013

ಮಂಗಳೂರು ನಕಲಿ ಅಂಕಪಟ್ಟಿ ತಯಾ ರಿಕಾ ಜಾಲವೊಂದನ್ನು ಭೇದಿಸಿರುವ ಪಾಂಡೇಶ್ವರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ದ್ದಾರೆ. ಬಂಧಿತರಿಂದ ಕಂಪ್ಯೂಟರ್, ಪ್ರಿಂಟರ್ ಸಹಿತ ಸುಮಾರು ಒಂದು ಲಕ್ಷ ರೂ. ವೌಲ್ಯದ ಸೊತ್ತು ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೆಪ್ಪುಬಪ್ಪಾಲಿನ ನಿವಾಸಿ ನವಾಝ್ ಮುಹಮ್ಮದ್ ಮತ್ತು ಬಿಜೈಯ ರವೀಂದ್ರ ನಾಯಕ್ ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ನಕಲಿ ಪದವಿ ಪ್ರಮಾಣ ಪತ್ರ ಮತ್ತು ನಕಲಿ ಅಂಕಪಟ್ಟಿ ಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಜ.6ರಂದು ಸಂಜೆ 4:30ರ ಸುಮಾರಿಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನವಾಝ್ ನನ್ನು ಸುಭಾಶ್ ನಗರದಿಂದ ಬಂಧಿಸಿದ್ದಾರೆ. ಆತ ನೀಡಿದ ಮಾಹಿತಿಯನ್ನಾಧರಿಸಿ ಬಳಿಕ ರವೀಂದ್ರ ನಾಯಕ್‌ನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ಕೆಲವು ನಕಲಿ ಅಂಕಪಟ್ಟಿ ಮತ್ತು ಪದವಿ ಪತ್ರ ಗಳನ್ನು ಸ್ಕೂಟರ್‌ನಲ್ಲಿ ತೆಗೆದುಕೊಂಡು ಬರುತ್ತಿ ದ್ದಾಗ ಸುಭಾಷ್ ನಗರ ಜಂಕ್ಷನ್ ಬಳಿ, ನವಾಝ್ ನನ್ನು ಬಂಧಿಸಿ, ಅವನ ಬಳಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಇ. ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ವಿಭಾಗದ 5, 6, 7, ಮತ್ತು 8ನೆ ಸೆಮಿಸ್ಟರ್‌ನ ನಕಲಿ ಅಂಕಪಟ್ಟಿ ಮತ್ತು ಜಯ ಪ್ರಕಾಶ್ ಬಿ.ಎಸ್. ಎಂಬವರ ಹೆಸರಿನಲ್ಲಿದ್ದ ಮಂಗಳೂರು ವಿವಿಯ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪ್ರಮಾಣ ಪತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನವಾಝ್ ಅಹ್ಮದ್‌ನ ಪತ್ನಿ ರೇಶ್ಮಾ, ಚಿಕ್ಕಪ್ಪಅಬ್ಬಾಸ್ ಎಂಬವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧನ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಟಿ.ಆರ್.ಜಗನ್ನಾಥ್, ಮಂ. ದಕ್ಷಿಣ ಠಾಣಾ ಇನ್‌ಸ್ಪೆಕ್ಟರ್ ದಿವಾಕರ್ ಸಿ.ಎನ್. ಮತ್ತು ಪಿಎಸ್‌ಐಗಳಾದ ಎಚ್. ಎನ್.ಪೂವಪ್ಪ ಮತ್ತು ಶಿವರುದ್ರಪ್ಪ ಮೇಠಿ, ಎಎಸ್ಸೈ ಪ್ರಕಾಶ್, ಪಿಸಿಗಳಾದ ಸಂತೋಷ್ ಪಡೀಲ್, ವಿಶ್ವನಾಥ್, ಜಯಪ್ರಕಾಶ್, ಭರಣಿ ಮತ್ತು ಶರತ್ ಭಾಗವಹಿಸಿದ್ದರು

No comments:

Post a Comment