Friday, January 18, 2013

ಯುವಕನನ್ನು ತಡೆದು ಹಲ್ಲೆ:ಇಬ್ಬರ ವಿರುದ್ದ ಕೇಸು



ಮಂಜೇಶ್ವರ:ಆಟೋದಲ್ಲಿ ಸಂಚರಿಸುತಿದ್ದ ವ್ಯಕ್ತಿಯನ್ನು ತಡೆದು ಹಲ್ಲೆಗೈದ ಪ್ರಕರಣಕ್ಕೆ ಸಂಭಂಧಿಸಿ ಇಬ್ಬರ ವಿರುದ್ದ ಪೊಲೀಸರು ಕೇಸು ದಾಖಲಿಸಿರುತ್ತಾರೆ
ಹಲೆಗೊಳಗಾದ ವ್ಯಕ್ತಿ ಪಾವೂರು ಬಾಕಿಮಾರು ನಿವಾಸಿ ಹಮೀದ್ ಎಂಬವರ ಪುತ್ರ ಅಬ್ದುಲ್ ರವೂಫ್(೨೧) ಎಂಬವನಾಗಿದ್ದಾನೆ.
ಕಳೆದ ದಿವಸ ಅಬ್ದುಲ್ ರವೂಫ್ ಕುಂಜತ್ತೂರಿನಲ್ಲಿ ರಿಕ್ಷಾದಲ್ಲಿ ಸಂಚರಿಸುತಿದ್ದ ವೇಳೆ ಕುಂಜತ್ತೂರು ನಿವಾಸಿಗಳಾದ ಸಿದ್ದೀಖ್ ಹಾಗು ತಮ್ಮಿ ಜತೆಯಾಗಿ ಸೇರಿ ರಿಕ್ಷಾವನ್ನು ತಡೆದು ನಿಲ್ಲಿಸಿ ಹಲ್ಲೆಗೈಯಲಾಗಿದೆಂದು ದೂರಲಾಗಿದೆ.ರವೂಫ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ತಮ್ಮಿ ಹಾಗು ಸಿದ್ದೀಖ್ ಎಂಬವರ ವಿರುದ್ದ ಕೇಸು ದಾಖಲಿಸಿರುತ್ತಾರೆ.

No comments:

Post a Comment