Friday, January 4, 2013

ಜೆಟ್ ಏರ್‌ವೇಸ್‌ನ ಮಂಗಳೂರು- ದುಬೈ ಯಾನಕ್ಕೆ ಚಾಲನೆ


ಜೆಟ್ ಏರ್‌ವೇಸ್‌ನ ಮಂಗಳೂರು- ದುಬೈ ಯಾನಕ್ಕೆ ಚಾಲನೆ


 ಜನವರಿ -04-2013

ಮಂಗಳೂರು,: ವಿದೇಶದಲ್ಲಿ ಉದ್ಯೋಗಕ್ಕೆ ತೆರಳುವ ಕಾರ್ಮಿಕ ವರ್ಗದ ಜನರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಪ್ರೊಟೆಕ್ಟರ್ ಆಫ್ ಇಮಿಗ್ರಂಟ್ಸ್ (ಪಿಒಇ) ಕಚೇರಿ ಯನ್ನು ಕರ್ನಾಟಕದಲ್ಲಿ ತೆರೆಯಲು ಪ್ರಯತ್ನ ನಡೆಯುತ್ತಿದ್ದು, ಸಚಿವಾಲ ಯದ ಮುಂದೆ ಪ್ರಸ್ತಾವನೆ ಮಂಡಿಸಲಾ ಗಿದೆ ಎಂದು ಉಡುಪಿ ಸಂಸದ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.
ಬಜ್ಪೆಯ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಜೆಟ್ ಏರ್‌ವೇಸ್‌ನಿಂದ ಮಂಗಳೂರು- ದುಬೈ ನಡುವೆ ಪ್ರಥಮ ಖಾಸಗಿ ನೇರ ವಿಮಾನ ಯಾನ ಚಾಲನಾ ಸಮಾರಂ ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕೆಲಸವನ್ನರಸಿ ವಿದೇಶಗಳಿಗೆ ಹೋಗ ಬಯಸುವ ಕಾರ್ಮಿಕ ವರ್ಗವು ಇಮಿಗ್ರೇಶನ್ ವ್ಯವಸ್ಥೆಗಾಗಿ ಪ್ರಸ್ತುತ ತಿರುವನಂತಪುರ, ಮುಂಬೈ ಅಥವಾ ಚೆನ್ನೈನಲ್ಲಿರುವ ಪಿಒಇ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಇದು ತೀರಾ ದುಬಾರಿಯಾಗಿರುವ ಕಾರಣ ರಾಜ್ಯ ದಲ್ಲೇ ಈ ಕಚೇರಿಯನ್ನು ಆರಂಭಿಸಲು ಸರಕಾರದ ಗಮನ ಸೆಳೆಯಲಾಗಿದೆ ಎಂದು ಹೆಗ್ಡೆ ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಮಂಗಳೂರು ವಿಮಾನ ನಿಲ್ದಾಣದ ನಿಕಟಪೂರ್ವ ನಿರ್ದೇಶಕ ಎಂ.ಆರ್. ವಾಸುದೇವ ಮಾತನಾಡಿ, ಖಾಸಗಿ ವಿಮಾನ ಸಂಸ್ಥೆಯಿಂದಾಗಿ ಇದೀಗ ಸ್ಪರ್ಧೆ ಏರ್ಪಟ್ಟಿದ್ದು, ಪ್ರಯಾಣಿಕರ ಬೇಡಿಕೆಗಳನ್ನು ಪೂರೈಸುವಲ್ಲಿ ಈ ಸ್ಪರ್ಧೆ ಪೂರಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ರಾಧಾಕೃಷ್ಣ, ಕಾರ್ಪೊರೇಶನ್ ಬ್ಯಾಂಕ್‌ನ ಅಧ್ಯಕ್ಷ ಅಜಯ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಉಪಾಧ್ಯಕ್ಷ (ವಾಣಿಜ್ಯ) ಗೌರಂಗ್ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಪ್ರಧಾನ ವ್ಯವಸ್ಥಾಪಕ ಯು.ಎಚ್. ಶೆಣೈ ವಂದಿಸಿದರು

No comments:

Post a Comment