Thursday, January 10, 2013

ಪ್ರವಾದಿ ಮುಹಮ್ಮದ್(ಸ)ರ ಕುರಿತು ಬೃಹತ್ ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆ



 ಜನವರಿ -10-2013

ಹತ್ತು ಲಕ್ಷ ರೂ. ಮೌಲ್ಯದ ಬಹುಮಾನಗಳು 
ಮಂಗಳೂರು: ಭಟ್ಕಳದ ಮೌಲಾನಾ ಅಬುಲ್ ಹಸನ್ ಇಸ್ಲಾಮಿಕ್ ಅಕಾಡಮಿಯ ಪ್ರಾಯೋ ಜಕತ್ವದಲ್ಲಿ ಮಂಗಳೂರಿನ ಮಾಧ್ಯಮ ಕೇಂದ್ರ ‘ಬನ್ನಿ, ಇವರನ್ನು ಅರಿಯೋಣ- ಪ್ರವಾದಿ ಮುಹಮ್ಮದ್(ಸ) ಶಾಂತಿಯ ದೂತ’ ಎಂಬ ಶೀರ್ಷಿಕೆಯಡಿ ಬೃಹತ್ ಅಂತಾರಾಷ್ಟ್ರೀಯ ಪ್ರಬಂಧ ಸ್ಪರ್ಧೆ ಯೊಂದನ್ನು ಘೋಷಿಸಿದೆ. ಈ ವಿಶಿಷ್ಟ ಪ್ರಬಂಧ ಸ್ಪರ್ಧೆಯ ವಿಜೇತರಿಗೆ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಬಹು ಮಾನಗಳನ್ನು ಸಂಸ್ಥೆ ಪ್ರಕಟಿಸಿದೆ.
ಸ್ಪರ್ಧೆಯ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಿಗಳಿಗೆ ಕ್ರಮ ವಾಗಿ 5,00,000 ರೂ.ಗಳು (10,000 ಅಮೆರಿಕನ್ ಡಾಲರ್), 3,00,000 ರೂ.ಗಳು (6,000 ಡಾಲರ್) ಹಾಗೂ 2,00,000 ರೂ.ಗಳು (4,000 ಡಾಲರ್) ನಗದು ಬಹುಮಾನ ಸಿಗಲಿದೆ. ಜೊತೆಗೆ ಹಲವು ಉಪ ವಿಭಾಗಗಳಲ್ಲಿ ನೂರಾರು ಇತರ ಬಹುಮಾನಗಳೂ ಇವೆ. ವಿಶೇಷ ಅಂತಾರಾಷ್ಟ್ರೀಯ ಸಮಾವೇಶ ವೊಂದರಲ್ಲಿ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಗುವುದು. ಸ್ಪರ್ಧೆಯ ನೋಂದಣಿಗೆ ಮಾರ್ಚ್ 15 ಕೊನೆಯ ದಿನವಾಗಿದ್ದು, ಪ್ರಬಂಧ ಸಲ್ಲಿಸಲು ಎಪ್ರಿಲ್ 15 ಕೊನೆಯ ದಿನವಾಗಿರುತ್ತದೆ.
www.madhyamakendra.org ಸ್ಪರ್ಧೆಯ ಸಂಪೂರ್ಣ ವಿವರಗಳು ಅಥವಾ www.facebook.com/letusknowthisman madhyamakendra1@ gmail.com ಗಳಲ್ಲಿ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಅಥವಾ madhyamakendra2 @gmail.com ಗಳನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

No comments:

Post a Comment