Saturday, January 12, 2013

ರಾಜ್ಯದಲ್ಲಿ ಹಗಲು ವಿದ್ಯುತ್ ನಿಯಂತ್ರಣಕ್ಕೆ ಚಾಲನೆಮಂಜೇಶ್ವರ:ರಾಜ್ಯದಲ್ಲಿ ಉದ್ಬವಿಸುತ್ತಿರುವ ವಿದ್ಯುತ್ ಕ್ಷಾಮವನ್ನು ಹಾಗು ಸಂದಿಗ್ದಾವಸ್ಥೆಯನ್ನು ನಿವಾರಿಸಲು ಹಗಲು ವೇಳೆ ವಿದ್ಯುತ್ ನಿಯಂತ್ರಣಕ್ಕೆ ಚಾಲನೆ ನೀಡಲು ಕೇರಳ ವಿದ್ಯುನ್ಮಂಡಳಿ ನಿರ್ಧರಿಸಿದೆ.
ಈ ತಿಂಗಳು ೧೫ ರಿಂದ ಹಗಲು ವೇಳೆ ವಿದ್ಯುತ್ ಫೀಡರ್ ಗಳನ್ನು ಹಾಗು ಲೈನ್ ಗಳನ್ನು ಆಫ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.ಅಂದಿನಿಂದ ರಾಜ್ಯದ ಎಲ್ಲಾ ವಿದ್ಯುತ್ ಲೈನ್,ಫೀಡರ್,ಹಾಗು ಸಬ್ ಸ್ಟೇಶನ್ ಗಳ ದುರಸ್ಥಿ ಕೆಲಸಗಳನ್ನು ಕೂಡಾ ಆರಂಭಿಸಲಾಗುವುದು ಆ ಮೂಲಕ ವಿದ್ಯುತ್ ವಿತರಣೆ ಹಾಗು ಪ್ರಸರನೆಯಲ್ಲಿ ಉಂಟಾಗುವ ಗರಿಶ್ಟ ಪ್ರಮಾಣದ ನಷ್ಟವನ್ನು ಹೊರತು ಪಡಿಸಲಾಗುವುದೆಂದು ವಿದ್ಯುನ್ಮಂಡಳಿ ತಿಳಿಸಿದೆ.ಇಂತಹ ಸಂದರ್ಭಗಳಲ್ಲಿ ಹಗಲು ವೇಳೆ ವಿದ್ಯುತ್ ಸರಬರಾಜನ್ನು ಪೂರ್ಣವಾಗಿ ನಿಲುಗಡೆಗೊಳಿಸಲಾಗುವುದಾಗಿ ಕೂಡಾ ತಿಳಿಸಿದೆ.ಈ ದುರಸ್ಥಿ ಕೆಲಸಗಳು ಮೇ ೩೧ ರ ತನಕ ಮುಂದುವರಿಯುವುದಾಗಿ ರಾಜ್ಯ ವಿದ್ಯುನ್ಮಂಡಳಿ ಚೇಯರ್ ಮ್ಯಾನ್ ಎಂ .ಶಿವಶಂಕರ್ ತಿಳಿಸಿರುತ್ತಾರೆ.
ಜನವರಿ ೧೫ ರಿಂದ ಬೆಳಿಗ್ಗೆ ೯ ರಿಂದ ಸಂಜೆ ೫ ರ ತನಕ ವಿದ್ಯುತ್ ದುರಸ್ಥಿ ಕೆಲಸಗಳು ನಡೆಯಲಿದ್ದು ದುರಸ್ಥಿ ವೇಳೆ ಯಾವುದೇ ಕಾರಣಕ್ಕೂ ವಿದ್ಯುತ್ ಪೂರೈಕೆ ನೀಡಲು ಸಾಧ್ಯವಿಲ್ಲವೆಂಬುದಾಗಿ ಗ್ರಾಹಕರಿಗೆ ತಿಳಿಸಿರುತ್ತಾರೆ.ಇದು ದುರಸ್ಥಿ ಕೆಲಸ ನಡೆಸುವ ಕಾರ್ಮಿಕರ ಸುರಕ್ಷೆಯ ಉದ್ದೇಶ ಕೂಡಾ ಆಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.ವಿದ್ಯುತ್ ದುರಸ್ಥಿ ವೇಳೆ ಕಳೆದೆಅ ವರ್ಷ ರಾಜ್ಯದಲ್ಲಿ ೩೨ ಕಾರ್ಮಿಕರು ವಿದ್ಯುತ್ ಶಾಕ್ ತಗಲಿ ಮೃತ ಪಟ್ಟಿದ್ದಾರೆ.ಅಂತಹ ಹಿನ್ನೆಯ ಕಾರಣವನ್ನು ಮುಂದಿಟ್ಟು ಮುಂಜಾಗೃತ ಕ್ರಮವನ್ನು ಕೈಗೊಳ್ಳುವುದಾಗಿ ಕೂಡಾ ತಿಳಿಸಿದ್ದಾರೆ.ಮಳೆಗಾಲ ಆರಂಭವಾಗುವ ಮೊದಲು ದುರಸ್ಥಿ ಕೆಲಸಗಳನ್ನು ಪೂರ್ತೀಕರಿಸಿ ಮಳೆಗಾಲದಲ್ಲಿ ಉಂಟಾಗುವ ವಿದ್ಯುತ್ ಅನಾಹುತಗಳನ್ನು ಕೂಡಾ ನಿಯಂತ್ರಿಸಲು ಕೈಕೊಂದಿರುವ ಕ್ರಮವೆಂಬುದಾಗಿ ತಿಳಿಸಿದ್ದಾರೆ.

No comments:

Post a Comment