Friday, January 11, 2013

ಭಾರತ ದುಬೈ ಕಾನ್ಸುಲೇಟ್ ಕಚೇರಿ ಶೀಘ್ಹ್ರದಲ್ಲೇ ಕೇರಳದಲ್ಲಿ ಕಾರ್ಯಾರಂಭಮಂಜೇಶ್ವರ:ಭಾರತ ಹಾಗು ಯು.ಎ.ಇ.(ದುಬೈ) ಕಾನ್ಸುಲೇಟ್ ಕಛೇರಿ ಕೇರಳದಲ್ಲಿ ಶೀಘ್ಹ್ರವೇ ಕಾರ್ಯಾರಂಭಿಸಲಿದೆಯೆಂದು ಮುಖ್ಯ ಮಂತ್ರಿ ಉಮ್ಮನ್ ಚಾಂಡಿ ತಿಳಿಸಿದ್ದಾರೆ.
ಯು.ಎ.ಇ. ಯಲ್ಲಿ ಅತಿ ಹೆಚ್ಚು ಕೇರಳಿಯರು ಇರುವ ಸ್ಥಳವಾಗಿದ್ದು ಆ ದೇಶಕ್ಕೆ ಕೇರಳೀಯರು ನೀಡಿದ ಕೊಡುಗೆ ಅತೀ ಮಹತ್ವದಾಗಿದ್ದು ಮಾತ್ರವಲ್ಲದೆ ಯು.ಎ.ಇ ಯಲ್ಲಿರುವ ಕೇರಳಿಯರು ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುತಿದ್ದು ಇದಕ್ಕೆಲ್ಲಾ ಪರಿಹಾರದ ಮಾರ್ಗವಾಗಿ ನೂತನವಾಗಿ ಕೇರಳದಲ್ಲಿ ಆರಂಭಿಸಲಾಗುವ ಕನ್ಸುಲೇಟ್ ಕಛೇರಿಯಿಂದ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಕೇರಳದ ಆರ್ಥಿಕ ನೆಲೆಯಲ್ಲೂ ಪ್ರವಾಸಿಗಳ ಕೊಡುಗೆ ಅಪಾರವಾಗಿದ್ದು ಪ್ರತ್ಯೇಕವಾಗಿಯೂ ಯು.ಎ.ಇ ಯಲ್ಲಿ ರುವ ಕೇರಳಿಯರ ಪಾಲುದಾರಿಕೆ ತುಂಬಾ ನಿರ್ಣಾಯಕವೆಂದು ಅವರು ಅಭಿಪ್ರಾಯಪಟ್ಟರು.ಈ ಹಿನ್ನಲೆಯಲ್ಲಿ ಯು.ಎ.ಇ.ಯಲ್ಲಿ ಮಾತ್ರವಲ್ಲ ಇತರ ಕೊಲ್ಲಿ ರಾಷ್ಟ್ರಗಳಲ್ಲೂ ದುಡಿಯುವ ಕೇರಳ ಪ್ರವಾಸಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಲಬೇಕಾದದ್ದು ಅತೀ ಅಗತ್ಯವಾಗಿದ್ದು ಅದಕ್ಕಿರುವ ಎಲ್ಲಾ ಕ್ರಮಗಳನ್ನು ಕೇರಳ ಸರಕಾರ ಕೈಗೊಳ್ಳುತಿದ್ದು ಮಾತ್ರವಲ್ಲದೆ ಕೇರಳಿಯರಿಗಾಗಿ ಪ್ರತ್ಯೇಕ ರೀತಿಯ ಕಲ್ಯಾಣ ಯೋಜಣೆಗಳನ್ನು ಸರಕಾರ ಜ್ಯಾರಿಗೊಳಿಸಿರುವುದಾಗಿ ಮುಕ್ಯಮಂತ್ರಿ ತಿಳಿಸಿದರು

No comments:

Post a Comment