Monday, January 7, 2013

ದೂರು ದಾಖಲಿಸದ ಪೊಲೀಸರ ಅಮಾನತು: ಆರ್.ಕೆ. ಸಿಂಗ್


 ಜನವರಿ -07-2013

ಹೊಸದಿಲ್ಲಿ: ಜನಸಾಮಾನ್ಯರ ದೂರನ್ನು ದಾಖಲಿಸಲು ನಿರಾಕರಿಸುವ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಕೇಂದ್ರ ಗೃಹಕಾರ್ಯದರ್ಶಿ ಆರ್.ಕೆ.ಸಿಂಗ್ ಸಲಹೆ ನೀಡಿದ್ದಾರೆ.ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ದೂರನ್ನು ದಾಖಲಿಸಲು ನಿರಾಕರಿಸುವ  ಯಾವುದೇ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲು ಹಿಂಜರಿಯಕೂಡದು. ಅದು ಕಾನೂನುಬದ್ಧವೂ ಹೌದೆಂದು ತಿಳಿಸಿದರು. ದೂರನ್ನು ದಾಖಲಿಸಲು ಅಥವಾ ತಾವು ನೀಡಿದ ದೂರಿನ ಸ್ಥಿತಿಗತಿ ಏನಾಗಿದೆಯೆಂದು ವಿಚಾರಿಸಲು ಪೊಲೀಸ್ ಠಾಣೆಗೆ ಹೋದ ಜನರು ಪ್ರತಿ ಹಂತದಲ್ಲೂ ಬವಣೆಗೊಳಗಾಗುತ್ತಾರೆಂದು ಅವರು ವಿಷಾದ ವ್ಯಕ್ತಪಡಿಸಿದರು.“ಇಂತಹ ಪರಿಸ್ಥಿತಿ ಬದಲಾಗಬೇಕಾಗಿದೆ. ಮಹಿಳೆಯರು ಹಾಗೂ ಬಡವರಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರುವುದೇ ಒಂದು ಅಗ್ನಿಪರೀಕ್ಷೆಯಂತಾಗಿದೆ. ಸ್ಥಳೀಯ ಶಾಸಕರನ್ನು ಪೊಲೀಸ್ ಠಾಣೆಗೆ ತವ್ಮೊಂದಿಗೆ ಕರೆದೊಯ್ಯದೆ  ಅವರಿಗೆ  ತಾವು ನೀಡಿದ ದೂರಿನ ಸ್ಥಿತಿಗತಿಯ ಬಗ್ಗೆ ಅರಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ” ಎಂದು ಸಿಂಗ್ ವಿಷಾದಿಸಿದ

No comments:

Post a Comment