Wednesday, January 30, 2013

ರೇಶನ್ ಅಂಗಡಿಗಳಲ್ಲಿ ಅವ್ಯವಹಾರ ತಡೆಯಲು ಬಯೋಮೆಟ್ರಿಕ್ ಸಂಪ್ರದಾಯಮಂಜೇಶ್ವರ:ಸಾರ್ವಜನಿಕ ವಿತರಣಾ ಕೇಂದ್ರಗಳಾದ ರೇಶನ್ ಅಂಗಡಿಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ಸಂಪೂರ್ಣ ಇಲಕ್ಟ್ರೋನಿಕ್ ಕರಣ ಸಂಪ್ರದಾಯವನ್ನು ಪ್ರಾಬಲ್ಯಕ್ಕೆ ತರಲು ರಾಜ್ಯ ನಾಗರಿಕಾ ಪೂರೈಕೆ ಇಲಾಖೆ ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ.
ದೇಶದಲ್ಲಿ ಧಾರಾಳ ಧಾನ್ಯಗಳು ಸಂಗ್ರಹವಿದ್ದರೂ,ಬಡಜನರು ಹಸಿವಿನಿಂದ ಬೀಳಲು ಸಾರ್ವಜನಿಕ ವಿತರಣಾ ಅಂದ್ರೆ ರೇಶನ್ ಅಂಗಡಿಗಳಲ್ಲಿ ಕಂಡುಬಂದ ಲೋಪದೋಷಗಳೇ ಕಾರಣವೆಂದು ಸುಪ್ರಿಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿತು.ಮಾತ್ರವಲ್ಲದೆ ರೇಶನ್ ವಿತರಣಾ ಸಂಪ್ರದಾಯದಲ್ಲಿ ಉಂಟಾಗುತ್ತಿರುವ ಅವ್ಯವಹಾರ ಹಾಗು ಬ್ರ‍ಷ್ಟಾಚಾರವನ್ನು ತಡೆಗಟ್ಟಲು ಎಲ್ಲಾ ರಾಜ್ಯಗಳು ಇಲಕ್ಟ್ರೋನಿಕ್ ಸಾರ್ವಜನಿಕ ವಿತರಣಾ ಸಂಪ್ರದಾಯವನ್ನು ಅನುಷ್ಟಾನಗೊಳಿಸಬೇಕೆಂದು ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಆದೇಶನೀಡಿತ್ತು.ಇದರಂತೆ ರಾಜ್ಯದಲ್ಲಿ ರೇಶನ್ ಫಲಾನುಭವಿಗಳ ಬೆರಳಚ್ಚು ಗುರುತಿಸಲು ಎಲ್ಲಾ ರೇಶನ್ ಅಂಗಡಿಗಳಲ್ಲಿ ಬಯೋ ಮೆಟ್ರಿಕ್ ಸ್ಕಾನರ್ ಹಾಗು ಪ್ರತೀ ಧಾನ್ಯಗಳ ಗೋಣಿ ಚೀಲಗಳಲ್ಲಿ ಇಲಕ್ಟ್ರೋನಿಕ್ ಟ್ಯಾಗ್ ಗಳನ್ನು ಅಳವಡಿಸಲಾಗುವುದು.
ಕೇರಳದಲ್ಲಿ ಸುಮಾರು ಎಪ್ಪತ್ತು ಲಕ್ಷದಷ್ಟು ರೇಶನ್ ಕಾರ್ಡ್ ಗಳಿವೆ ಇವರಿಗಾಗಿ ಪ್ರತಿ ತಿಂಗಳು ೧.೩೫ ಲಕ್ಷ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.ರೇಶನ್ ವ್ಯಾಪಾರಿಗಳು ಭಾರತೀಯ ಆಹಾರನಿಗಮ,ರಖಂ ವ್ಯಾಪಾರಿ,ರೈಲ್ವೇ,ಸಪ್ಲೈ ಕೋ ಇತ್ಯಾದಿ ಸಾರ್ವಜನಿಕ ಸಂಕೀರ್ಣ ಘಟಕಗಳ ವಲಯದಲ್ಲಿ ಒಳಗೊಂಡಿದ್ದು ಇವುಗಳಲ್ಲಿ ಅತಿ ಹೆಚ್ಚು ಲೋಪದೋಷ ಉಂಟಾಗುವ ಸಾಧ್ಯತೆಇರುವುದರಿಂದ ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಸರಕಾರ ಈ ತೀರ್ಮಾನವನ್ನು ಜ್ಯಾರಿ ಗೊಳಿಸಲು ತೀರ್ಮಾನಿಸಿರುವುದಾಗಿ ತಿಳಿದು ಬಂದಿದೆ.

No comments:

Post a Comment