Thursday, January 3, 2013

ಪತ್ರಕರ್ತನನ್ನು ಹಲ್ಲೆ ಗೈದ ಗೂಂಡಾಗಳನ್ನು ಬಂಧಿಸಿ : ಉಪ್ಪಳದಲ್ಲಿ ಬೃಹತ್ ಸಾರ್ವಜನಿಕ ಪ್ರತಿಭಟನೆ



Jan-03-2013
ಮಂಜೇಶ್ವರ:ಪತ್ರಕರ್ತನನ್ನು ಹಲ್ಲೆಗೈದ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು ಪತ್ರಕರ್ತರಿಗೆ ರಕ್ಷಣೆಯನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಇಂದು ಸಂಜೆ ಉಪ್ಪಳದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯಿತು.ಉಪ್ಪಳ ಕೈಕಂಬದಿಂದ ಉಪ್ಪಳ ಜಂಕ್ಷನ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು.ಪ್ರತಿಭಟನೆಯಲ್ಲಿ  ಪತ್ರಕರ್ತರು ಸ್ಥಳೀಯ ರಾಜಕೀಯ ಸಾಮಾಜಿಕ  ಸಂಘಟನೆಗಳ ನೇತಾರರು ಪಾಲ್ಗೊಂಡರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಮುಖಂಡ ಬಿ.ವಿ ರಾಜನ್ ಕಾನೂನು ಶಿಶ್ತನ್ನು ನ್ನು ಕಾಪಾಡಬೇಕಾದ ಕಾನೂನು ಪಾಲಕರೇ  ಗೂಂಡಾಗಳ ಜತೆ ಕೈಗೂಡಿಸುತ್ತಾರೆ ಇದಕ್ಕೆ ಮೊದಲು ಕೂಡಾ ಇದೇ ಸ್ಥಳದಲ್ಲಿ ಇದೇ ಉಪ್ಪಳ ಹಿದಾಯತ್ ನಗರದ ಗೂಂಡಾ ತಂಡ ಪತ್ರಕರ್ತನನ್ನು ಹಲ್ಲೆಗೈದು ಮನಸ್ಸಿನಿಂದ ಮಾಸುವ ಮೊದಲೇ ಗೂಂಡಾಗಳು  ಮತ್ತೆ ತಮ್ಮ ಅಟ್ಟಹಾಸವನ್ನು ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಗಳ ವೈಪಲ್ಯದಿಂದ ಉಪ್ಪಳದಲ್ಲಿ ಗೂಂಡಾ ಗಳು ಪದೇ ಪದೇ ಪತ್ರಕರ್ತರ ಮೇಲೆ ಹಲ್ಲೆ ಗೈಯುತಿದ್ದಾರೆ ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ಮುಂದಾಗಬೇಕು  ಎಂದು ಅವರು ಹೇಳಿದರು. ಉಪ್ಪಳದ ಗೂಂಡಾಗಳಿಗೆ ಕುಂಬಳೆ ಸರ್ಕಲ್ ಇನ್ಸ್ ಪೆಕ್ಟರ್ ಸಂಪೂರ್ಣವಾಗಿ ಸಹಕರಿಸಿ ಅವರನ್ನು ಬೆಳೆಸುವುದಾಗಿ ಸಿಪಿಐ(ಎಂ) ಮುಖಂಡ ಕೆ.ಜಯಾನಂದನ್ ಆರೋಪಿಸಿದರು ಎಸ.ಡಿ.ಪಿ.ಐ.ಯುವ ಮೋರ್ಚಾ,ಡಿವೈಎಫ್ ಐ  ಮಂಜೇಶ್ವರ  ಗ್ರಾಹಕರ ವೇದಿಕೆ ಹಾಗು ಇತರ ಕೆಲವು ಸಾಮಾಜಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡವು.

No comments:

Post a Comment