Friday, January 4, 2013

ಮೂರು ದಿನಗಳ ಗಜ ಪ್ರತಾಪಕ್ಕೆ ತೆರೆ: ಪುತ್ತೂರಿನಿಂದ ನಿರ್ಗಮಿಸಿದ ಲಕ್ಷ್ಮೀಶ


ಮೂರು ದಿನಗಳ ಗಜ ಪ್ರತಾಪಕ್ಕೆ ತೆರೆ: ಪುತ್ತೂರಿನಿಂದ ನಿರ್ಗಮಿಸಿದ ಲಕ್ಷ್ಮೀಶ


 ಜನವರಿ -05-2013

ಪುತ್ತೂರು: ಕಳೆದ ಮೂರು ದಿನಗಳಿಂದ ಪುತ್ತೂರಿನಲ್ಲಿ ತನ್ನ ಆಕ್ರೋಶದ ವರ್ತನೆ ಮತ್ತು ಮಾವುತನನ್ನು ಹತ್ಯೆಗೈಯುವ ಮೂಲಕ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ ಸಾಕಾನೆ ಲಕ್ಷ್ಮೀಶನ ಪ್ರತಾಪಕ್ಕೆ ಕೊನೆಗೂ ತೆರೆ ಬಿದ್ದಿದೆ.
ಆನೆ ಕೇಂದ್ರಗಳಿಂದ ತರಿಸಿದ್ದ ಮೂರು ಆನೆಗಳ ನೆರವಿನಿಂದ ಮದಗಜ ಲಕ್ಷ್ಮೀಶನನ್ನು ಇಂದು ಲಾರಿ ಮೂಲಕ ನಾಗರಹೊಳೆಯ ಮತ್ತಿ ಗೂಡಿನ ಆನೆ ಶಿಬಿರಕ್ಕೆ ಸಾಗಿಸಲಾಗಿದೆ. ಇದ ರೊಂದಿಗೆ ಪುತ್ತೂರಿನ ಹಾಗೂ ಸುತ್ತ ಮುತ್ತಲಿನ ಜನತೆ ನಿರಾಳರಾದರೆ, ಉಪ್ಪಿನಂಗಡಿ- ಪುತ್ತೂರು ರಸ್ತೆಯಲ್ಲಿ ಎಂದಿನಂತೆ ಸಂಚಾರ ವ್ಯವಸ್ಢೆ ಸುಗಮವಾಗಿದೆ.
ಕಳೆದ ಮಂಗಳವಾರ ವಿಟ್ಲದಿಂದ ಸುಳ್ಯಕ್ಕೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪುತ್ತೂರಿನ ಏಳ್ಮುಡಿ ಮದವೇರಿದಂತೆ ವರ್ತಿಸಿದ್ದ ರಿಂದ ಲಕ್ಷ್ಮೀಶನನ್ನು ಅಲ್ಲಿ ಕಟ್ಟಿ ಹಾಕಲಾಗಿತ್ತು. ಬುಧವಾರ ತಡರಾತ್ರಿ ಮತ್ತೆ ಅಲ್ಲಿಂದ ನಡೆಸಿಕೊಂಡು ಉಪ್ಪಿನಂಗಡಿ ಕಡೆಗೆ ಹೋಗುತ್ತಿ ದ್ದಾಗ ಕೇಪುಳು ಸಮೀಪ ಕೆರಳಿದ ಲಕ್ಷ್ಮೀಶ ಮಾವುತ ಚಂದ್ರನ್‌ರನ್ನು ಹತ್ಯೆಗೈದಿತ್ತು. ಬಳಿಕ ಆನೆಯನ್ನು ಅದರ ಮೊದಲ ಮಾವುತ ವರದರಾಜ ರಸ್ತೆ ಪಕ್ಕದ ಆಲದ ಮರವೊಂದಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆನೆಯ ರೌದ್ರಾವತಾರದಿಂದಾಗಿ ಉಪ್ಪಿನಂಗಡಿ-ಪುತ್ತೂರು ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಲಾಗಿತ್ತು.
ಲಕ್ಷ್ಮೀಶನನ್ನು ಕೊಂಡೊಯ್ಯಲು ಸರಳು ಪಟ್ಟಿಯ ಗೂಡು ಅಳವಡಿಸಿದ್ದ ಲಾರಿಯೊಂದು ಆಗಮಿಸಿದ್ದು, ಇಂದು ಬೆಳಗ್ಗೆ ಅಭಿಮನ್ಯು ಮತ್ತು ಹರ್ಷ ಮತ್ತು ವಿಕ್ರಮ ಆನೆಗಳ ಸಹಕಾರ ದೊಂದಿಗೆ ಮರಕ್ಕೆ ಕಟ್ಟಿ ಹಾಕಲಾಗಿದ್ದ ಲಕ್ಷ್ಮೀಶನನ್ನು ಬಂಧನದಿಂದ ಬಿಡಿಸಿದರು. ಅದೇ ವೇಳೆ ಲಕ್ಷ್ಮೀಶನ ಕೊರಳಿನ ಹಗ್ಗವನ್ನು ಅಭಿಮನ್ಯುವಿನ ಕೊರಳಿಗೆ ಮತ್ತು ಲಕ್ಷ್ಮೀಶನ ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಹರ್ಷಾ ಆನೆಯ ಕೊರಳಿಗೆ ಸುತ್ತಿ ವಿಶೇಷ ವ್ಯವಸ್ಥೆಯುಳ್ಳ ಲಾರಿಯ ಬಳಿಗೆ ಕರೆದೊಯ್ಯುವ ಕೆಲಸ ನಡೆಯಿತು.
ಅಭಿಮನ್ಯು ಆನೆ ಲಕ್ಷ್ಮೀಶನನ್ನು ಎಳೆದುಕೊಂಡು ಮುಂದಿನಿಂದ ಹೆಜ್ಜೆ ಹಾಕಿದರೆ, ಹರ್ಷಾ ಹಿಂದಿನಿಂದ ಹಿಂಬಾಲಿಸಿದ. ವಿಕ್ರಮ ಸಹಾಯಕ ನಾಗಿ ಸಹಕರಿಸಿದ. ಲಾರಿಯ ಬಳಿಗೆ ಸಮೀಪಿ ಸಿದ ಬೆನ್ನಲ್ಲೇ ಹರ್ಷಾ ಆನೆ ಲಕ್ಷ್ಮೀಶನನ್ನು ಸರಳಿನ ಪಂಜರದೊಳಗೆ ಹಿಂದಿನಿಂದ ಎಳೆಯುವ ಕೆಲಸ ಮಾಡಿತು. ಅಭಿಮನ್ಯು ತನ್ನ ಸೊಂಡಿಲು ಕೋರೆಯ ಮೂಲಕ ಲಕ್ಷ್ಮೀಶನನ್ನು ಎದುರು ಭಾಗದಿಂದ ಎತ್ತಿ ಲಾರಿಯೊಳಗಿದ್ದ ಪಂಜರ ದೊಳಗೆ ಸೇರಿಸಿತು. ಬಳಿಕ ಲಕ್ಷ್ಮೀಶನನ್ನು ಮಾತ್ತಿಗೂಡಿಗೆ ಸಾಗಿಸಲಾಯಿತು. ಜೊತೆಯಲ್ಲೇ ಈ ಮೂರು ಆನೆಗಳನ್ನು ಜೊತೆಯಾಗಿ ಪ್ರತ್ಯೇಕ ಲಾರಿಗಳಲ್ಲಿ ಸಾಗಿಸಲಾಯಿತು.
ಲಕ್ಷ್ಮೀಶನನ್ನು ಮತ್ತಿಗೊಡಿನಲ್ಲಿರುವ ಆನೆ ಶಿಬಿರಕ್ಕೆ ಸೇರಿಸಿ ಪಳಗಿಸುವ ಪ್ರಯತ್ನ ನಡೆಸಲಾ ಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

No comments:

Post a Comment