Thursday, January 3, 2013

ತಂಡದಿಂದ ಕಾರು ತಡೆದು ನಿಲ್ಲಿಸಿ ಇರಿತ


Jan -03-2013
 ಮಂಜೇಶ್ವರ :ಗೆಳೆಯರೊಂದಿಗೆ ಕಾರಿನಲ್ಲಿ ಸಂಚರಿಸುತಿದ್ದ ವ್ಯಕ್ತಿಯನ್ನು ಇನ್ನೊಂದು ಕಾರಿನಲ್ಲಿ ತಲುಪಿದ ತಂಡ ತಡೆದು ನಿಲ್ಲಿಸಿ ಇರಿದು  ಪರಾರಿಯಾದ ಘಟನೆ ಇಲ್ಲಿಗೆ ಸಮೀಪದ ಉಪ್ಪಳ ಕೈಕಂಬದಿಂದ ವರದಿಯಾಗಿದೆ.ನಿನ್ನೆ ಸಂಜೆ ಕಾರಿನಲ್ಲಿ ಪ್ರಯಾಣಿಸುತಿದ್ದ ಬಾಯಾರು ಪದವಿನ ಹನೀಫ (42) ಎಂಬವರನ್ನು ಇನ್ನೊಂದು ಕಾರಿನಲ್ಲಿ ಬಂಡ 8 ಮಂದಿಯ ತಂಡ ಕಾರಿನ ಗಾಜು ಒಡೆದು  ಇರಿದು ಪರಾರಿಯಾಗಿರುವುದಾಗಿ ದೂರಲಾಗಿದೆ.ಈ ಮೊದಲು ಬಾಯಾರು ಪದವಿನಲ್ಲೂ ಇದೇ  ಹನೀಫ್ ರವರಿಗೆ ಆಕ್ರಮಿಸಿದ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು ಕೇಸನ್ನು ಹಿಂತೆಗೆಯಬೇಕೆಂದು ಮನೆಗೆ ನುಗ್ಗಿ ಬೆದರಿಕೆ ಕೂಡಾ ಒಡ್ಡಿತ್ತು.ನಿನ್ನೆ  ಒಳಗಾದ ಹನೀಫ ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ 

No comments:

Post a Comment