Wednesday, January 9, 2013

ಮನೆಗೆ ನುಗ್ಗಿ ಕಾಲೇಜು ನೌಕರನಿಗೆ ಹಲ್ಲೆ


Jan-09-2013
ಮಂಜೇಶ್ವರ:ಕಾಲೇಜು ಲೈಬ್ರರಿ ಅಟೆಂಡರೊಬ್ಬರ ಮನೆಗೆ ನುಗ್ಗಿ ಹಲ್ಲೆ ಗೊಳಿಸಿದ ಬಗ್ಗೆ ವರದಿಯಾಗಿದೆ.ಹಲ್ಲೆಗೊಳಗಾದವರು ಮಂಜೇಶ್ವರ ಸ್ಮಾರಕ ಸರಕಾರೀ ಕಾಲೇಜಿನ ಲೈಬ್ರರಿ ಅಟೆಂಡರ್ ಮೊಯ್ದೀನ್(51) ಎಂಬವರಾಗಿದ್ದಾರೆ.ಇವರನ್ನು ಮಂಜೇಶ್ವರ ಸರಕಾರೀ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ಮಹಿಳೆ ಸಹಿತ ಮೂವರ ತಂಡ ಮನೆಗೆ ನುಗ್ಗಿ ಹಲ್ಲೆಗೊಳಿಸಲಾಗಿದೆಂದು ದೂರಲಾಗಿದೆ.ತಡೆಯಲು ಬಂದ ಪತ್ನಿ ಹಾಗು ಪುತ್ರ ಹಾಗು ಅಳಿಯ ಎಂಬವರು ಕೂಡಾ ಹಲ್ಲೆಯಿಂದ ಗಾಯಗೊಂಡಿದ್ದಾರೆ.ಅಕ್ರಮಿಗಳು ಕಟ್ಟಿ,ಸೈಕಲ್ ಚೈನ್,ಮೊದಲಾದ ರೀತಿಯ ಆಯುಧಗಳನ್ನು ಉಪಯೋಗಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.ಆಸ್ತಿ ವಿವಾದವೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ.ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment