Wednesday, January 16, 2013

ಕುಡುಕ ತಂದೆಯಿಂದ ಮನೆಯಲ್ಲಿ ಗಲಾಟೆ:ಪುತ್ರಿಯ ದೂರು



ಮಂಜೇಶ್ವರ:ಕಂಠಪೂರ್ತಿ ಕುಡಿದು ಮನೆಗೆ ಬಂದು ಗಲಾಟೆ ಎಬ್ಬಿಸಿದ ಕುಡುಕ ತಂದೆಯ ವಿರುದ್ದ ಪುತ್ರಿಯೊಬ್ಬಳು ಪೊಲೀಸರಿಗೆ ದೂರು ನೀಡಿರುತ್ತಾಳೆ.
ಇಲ್ಲಿಗೆ ಸಮೀಪದ ಕಣ್ವತೀರ್ಥ ನಿವಾಸಿ ಲೂಯೀಸ್ ಕ್ರಾಸ್ತಾ (೬೦) ಎಂಬವನಾಗಿದ್ದಾನೆ ಕಂಠ ಪೂರ್ತಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಎಬ್ಬಿಸಿದ ವ್ಯಕ್ತಿ.ಈತ ನಿನ್ನೆ ಸಂಜೆ ವೇಳೆ ಮದ್ಯದಮಲಿನಲ್ಲಿ ಮನೆಗೆ ಬಂದು ಗಲಾಅಟೆ ಎಬ್ಬಿಸಿ ಹಲ್ಲೆಗೈದಿರುವುದಾಗಿ ಪುತ್ರಿ ಸರಿತಾ(೨೦) ಎಂಬಾಕೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಿರುತ್ತಾಳೆ.ಪುತ್ರಿಯ ದೂರಿನಂತೆ ತಂದೆಯ ವಿರುದ್ದ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

No comments:

Post a Comment