Friday, January 25, 2013

ಶ್ರೀಲಂಕಾದ ಜೈಲಿನಲ್ಲಿರುವ ಮಂಜೇಶ್ವರ,ಪಳ್ಳಿಕರೆ ನಿವಾಸಿಗಳನ್ನು ಶೀಘ್ರದಲ್ಲೇ ಕೇರಳ ಕಾರಾಗೃಹಕ್ಕೆ ವರ್ಗಾವಣೆಮಂಜೇಶ್ವರ:ವಿವಿದ ಅಪರಾಧ ಪ್ರಕರಣಗಳಿಗೆ ಸಂಭಂಧಿಸಿ ಶ್ರೀಲಂಕಾದ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ಪಳ್ಳಿಕ್ಕರೆ ಹಾಗು ಮಂಜೇಶ್ವರ ನಿವಾಸಿಗಳನ್ನು ಶಿಘ್ಹ್ರದಲ್ಲೇ ಕೇರಳದ ಜೈಲಿಗೆ ವರ್ಗಾಯಿಸಿಲಾಗುವುದೆಂದು ತಿಳಿದು ಬಂದಿದೆ.
ಇಲ್ಲಿಗೆ ಸಮೀಪದ ಹೊಸಂಗಡಿ ಬಂಗ್ರ ಮಂಜೇಶ್ವರ ನಿವಾಸಿ ಇಸ್ಮಾಯಿಲ್ ಮೊಹಮ್ಮದ್ ಕುಂಞಿ(೫೨) ಹಾಗು ಕಾಸರಗೋಡು ಪಳ್ಳಿಕರೆ ನಿವಾಸಿ ಹುಸೈನ್(೩೯)ಎಂಬಿಬ್ಬರನ್ನು ಶ್ರೀಲಂಕಾದ  ಕೊಲಂಬೋ ಜೈಲುಗಳಿಂದ ಕೇರಳ ಜೈಲಿಗೆ ವರ್ಗಾಯಿಸಲಾಗುವುದಾಗಿ ಮೂಲಗಳಿಂದ ತಿಳಿದು ಬಂದಿದೆ.ಈ ಇಬ್ಬರ ಹೊರತಾಗಿ ಶ್ರೀಲಂಕಾದ ಜೈಲಿನಲ್ಲಿರುವ ಕೇರಳದ ಇತರ ನಾಲ್ವರನ್ನು ಕೂಡಾ ಕೇರಳದ ಜೈಲಿಗೆ ವರ್ಗಾಯಿಸಲು ಶ್ರೀಲಂಕಾ ಸರಕಾರ ತೀರ್ಮಾನ ಕೈಗೊಂಡಿರುತ್ತದೆ.
ಮಂಜೇಶ್ವರ ಹಾಗು ಪಳ್ಳಿಕ್ಕರೆ ನಿವಾಸಿಯನ್ನು ಕೇರಳಕ್ಕೆ ತರಬೇಕೆಂದು ಕಾಸರಗೋಡು ಸಂಸದ ಪಿ.ಕರುಣಾಕರನ್ ಭಾರತ ಸರಕಾರದ ಮೇಲೆ ಹೇರಿದ ಒತ್ತಡದ ಫಲವಾಗಿ ಶ್ರೀಲಂಕಾ ಸರಕಾರ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.ಮಾತ್ರವಲ್ಲದೆ ಮೊತ್ತ ಆರು ಜನರನ್ನು ಭಾರತಕ್ಕೆ ತರಲು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ಹಾಗು ವಿದೇಶಾಂಗ ಖಾತೆಯ ಸಹಾಯಕ ಸಚಿವ ಇ ಅಹ್ಮದ್ ರವರೂ ಕೂಡಾ ಶ್ರೀಲಂಕಾ ಸರಕಾರದ ಮೇಲೆ ಹೇರಿದ ಒತ್ತಡದ ಫಲವಾಗಿ ಕೊನೆಗೂ ಶ್ರೀಲಂಕಾ ಸರಕಾರ ಈ ಆರು ಮಂದಿ ಕೈದಿಯನ್ನು ಕೊನೆಗೂ ಕೇರಳದ ಕಾರಾಗೃಹಗಳಿಗೆ ವರ್ಗಾಯಿಸಲು ತೀರ್ಮಾನಿಸಿದೆ.ಖೈದಿಗಳನ್ನು ಪರಸ್ಪರ ವರ್ಗಾಯಿಸುವ ಒಡಂಬಡಿಕೆಗೆ ಭಾರತ ಸರಕಾರ ಹಾಗು ಶ್ರೀಲಂಕಾ ಸರಕಾರ ಈ ಮೊದಲೇ ಸಹಿ ಹಾಕಿದ್ದನ್ನು ಇಲ್ಲಿ ಸ್ಮರಿಸ ಬಹುದಾಗಿದೆ.

No comments:

Post a Comment