Saturday, January 12, 2013

ಕುಂಜತ್ತೂರಿನಲ್ಲಿ ಹುಚ್ಚುನಾಯಿ ಹಾವಳಿಕುಂಜತ್ತೂರು:ಕುಂಜತ್ತೂರು ಪರಿಸರವಾದ ಹೈಗ್ಲೋದಿ ರಸ್ತೆ,ಕುಂಜತ್ತೂರು ಹೈಸ್ಕೂಲ್ ರಸ್ತೆ,ತೂಮಿನಾಡು ಕುಕ್ಕಾಜೆ ಮಸೀದಿ ರಸ್ತೆ,ಪದವು ರಸ್ತೆ ಮುಂತಾದ ಸ್ಥಳಗಳಲ್ಲಿ ಹುಚ್ಚುನಾಯಿಯ ಹಾವಳಿ ಹೆಚ್ಚಾಗುತಿದ್ದು ಶಾಲೆ ಹಾಗು ಮದ್ರಸ ಕ್ಕೆ ವಿದ್ಯಾರ್ಥಿಗಳನ್ನು ಈ ರಸ್ತೆಗಳಲ್ಲಿ ಕಳುಹಿಸಲು ಪೋಷಕರು ಹಿಂದೇಟು ಹಾಕುತಿದ್ದಾರೆ.ನಿನ್ನೆ  ಬೆಳಿಗ್ಗೆ ಮಂಜೇಶ್ವರ ವಿದ್ಯುತ್ ಇಲಾಖೆಯ ನೌಕರನಾಗಿರುವ ಕಾಂಞಂಗಾಡ್ ನಿವಾಸಿ ಬೋಬನ್(೩೭) ಎಂಬವರಿಗೆ ಹೈಗ್ಲೋದಿ ರಸ್ತೆಯಲ್ಲಿ ನಾಯಿಯೊಂದು ಕಚ್ಚಿದ್ದು ಅವರನ್ನು ಕೂಡಲೇ ಮಂಜೇಶ್ವರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.ಈ ಪರಿಸರಗಳಲ್ಲಿ ಬೆಳಿಗ್ಗೆಯೇ ನಾಯಿಗಳ ಅಟ್ಟಹಾಸ ಸುರುವಾಗುತಿದ್ದು ಇದರಿಂದಾಗಿ ಈ ರಸ್ತೆಗಳಲ್ಲಿ ಜನ ಸಂಚಾರಕ್ಕೆ ತಡೆ ಉಂಟಾಗುತ್ತಿರುವುದಾಗಿ ಇಲ್ಲಿಯ ನಾಗರಿಕರಿಂದ ಕೇಳಿ ಬಂದಿದೆ.
ಬೀದಿ ನಾಯಿಗಳನ್ನು ಹಾಗು ಅಲೆ ಮಾರಿ ನಾಯಿಗಳನ್ನು ಕೊಲ್ಲಲು ಪಂಚಾಯತ್ ಅಧಿಕೃತರಿಗೆ ದೂರನ್ನು ಸಲ್ಲಿಸಲಾಗುವುದಾಗಿ ಇಲ್ಲಿಯ ನಾಗರಿಕರಿಂದ ಕೇಳಿ ಬಂದಿದೆ.ಈ ಮೊದಲು ಇಂತಹ ಕೆಲವು ಸ್ಥಳಗಳಲ್ಲಿ ಬೀದಿನಾಯಿ ಹಾಗು ಅಲೆಮಾರಿ ನಾಯಿಗಳನ್ನು ಕೊಲ್ಲಲು ಪಂಚಾಯತ್ ನ ವತಿಯಿಂದ ಅದಕ್ಕಾಗಿರುವ ನೌಕರರು ಪ್ರತ್ಯಕ್ಶವಾಗುತಿದ್ದರೂ ಇದೀಗ ಕೆಲವು ವರ್ಷಗಳಿಂದ ಮಂಜೇಶ್ವರ ಪಂಚಾಯತ್ ಮೌನವಾಗಿರುವುದಾಗಿ ಇಲ್ಲಿಯ ಸ್ಥಳೀಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕುಂಜತ್ತೂರು  ತೂಮಿನಾಡು ಪರಿಸರಗಳಲ್ಲಿ ಕಂಡು ಬರುತ್ತಿರುವಂತಹ ಅಲೆಮಾರಿ ಹಾಗು ಬೀದಿ ನಾಯಿಗಳನ್ನು  ಕೊಲ್ಲಲು ಪಂಚಾಯತ್ ಅಧಿಕೃತರು ಕೂಡಲೇ ಕ್ರಮ ಜರಗಿಸದೇ ಇದ್ದರೆ ಇಲ್ಲಿ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗುದರಲ್ಲಿ ಶಂಶಯವಿಲ್ಲ.ಸಂಭಂಧ ಪಟ್ಟವರು ಇತ್ತ ಕಡೆ ಗಮನಿಸಲು ನಾಗರಿಕರು ಆಗ್ರಹಿಸಿದ್ದಾರೆ.

No comments:

Post a Comment