Tuesday, January 29, 2013

ತಲೆಮರೆಸಿ ಕೊಂಡ ಆರೋಪಿ ಏಳು ವರ್ಷದ ಬಳಿಕ ಪೊಲೀಸರ ಬಲೆಗೆಮಂಜೇಶ್ವರ:ಸ್ಪಿರಿಟ್ ಪ್ರಕರಣವೊಂದಕ್ಕೆ ಸಂಭಂಧಿಸಿ ಅಬಕಾರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಸೆರೆಹಿಡಿಯುವಲ್ಲಿ ಅಬಕಾರಿ ಪೊಲೀಸರು ಸಫಲರಾಗಿದ್ದಾರೆ.
ಕರ್ನಾಟಕದ ಬೆಂಗಳೂರು ಚಾಮರಾಜ ನಗರದ ಎಸ್.ಎನ್.ಸಂತೋಷ್(೩೨) ಎಂಬವನಾಗಿದ್ದಾನೆ ಸೆರೆಗೀಡಾದ ಆರೋಪಿ. ೨೦೦೬ ಅಗಸ್ಟ್ ೨೦ರಂದು ಲಾರಿಯೊಂದರಲ್ಲಿ ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತಿದ್ದ ೧೨೦೦ ಲೀ ಸ್ಪಿರಿಟ್ ನ್ನು ಮಂಜೇಶ್ವರ ಅಬ್ಕಾರಿ ಪೊಲೀಸ್ ತಪಾಸಣಾ ಕೇಂದ್ರದಿಂದ ವಶಪಡಿಸಿಕೊಂಡಿತ್ತು ಪ್ರಕರಣಕ್ಕೆ ಸಂಭಂಧಿಸಿ ಜಾನ್ ಎಂಬ ಲಾರಿ ಚಾಲಕನನ್ನು ಬಂಧಿಸಲಾಗಿತ್ತು.ಆ ಸಂದರ್ಭ ಲಾರಿಯ ಮಾಲಕನ ಗುರುತು ಪತ್ತೆ ಹಚ್ಚದಿರಲು ಸೂತ್ರವಾಗಿ ಲಾರಿಯ ಇಂಜಿನ್ ಹಾಗು ಚೇಸಿಸ್ ನಂಬ್ರಗಳನ್ನು ಕೆತ್ತಿ ತೆಗೆಯಲಾಗಿತ್ತು.ಈ ಬಗ್ಗೆ ಅಬಕಾರಿ ಇಲಾಖೆಯ ಉನ್ನತಾಧಿಕಾರಿಗಳ ತನೆಖೆಯಲ್ಲೂ ಮಾಲಕನನ್ನು ಪತ್ತೆ ಹಚ್ಚಲು ಅಸಾಧ್ಯವಾಗಿತ್ತು.ಬಳಿಕ ಇದೀಗ ಅಧಿಕಾರ ವಹಿಸಿಕೊಂಡ ನೂತನ ಅಸಿಸ್ಟಂಟ್ ಕಮೀಷನರ್ ಎಸ್.ಸಂಜೀವರವರು ನಡೆಸಿದ ತಜ್ಞ ರೀತಿಯ ತನಿಖೆಯಲ್ಲಿ ಮಾಲಕನನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ.
ಮಲಬಾರ್ ಸಿಮೆಂಟ್ ನ ಗ್ರೀನ್ ಗ್ರೀನ್ ಚಾನಲ್ ಟೋಕನ್ ಬಳಸಿ ಲಾರಿಯಲ್ಲಿ ಇತ್ತೀಚೆಗೆ ಸ್ಪಿರಿಟ್ ಸಾಗಾಟ ಮಾಡುತಿದ್ದ ವೇಳೆ ಪಾಲಕ್ಕಾಡ್ ನಲ್ಲಿ ಅಬಕಾರಿ ಪೊಲೀಸರಿಂದ ವಶಕ್ಕೊಳಗಾದ ಪ್ರಕರಣದಲ್ಲೂ ಸಂತೋಷ್ ಆರೋಪಿಯಾಗಿದ್ದಾನೆ.ಈ ಪ್ರಕರಣಕ್ಕೆ ಸಂಭಂಧಿಸಿದ ವಿಚಾರಣೆ ಪಾಲಕ್ಕಾಡ್ ಫಾಸ್ಟ್ ಟ್ರಾಕ್ ನ್ಯಾಯಾಲಯದಲ್ಲಿ ಆರಂಭಗೊಂಡು ಅದಕ್ಕಾಗಿ ಹಾಜರಾಗಲು ಬಂದಿದ್ದ ಸಂತೋಷ್ ನ ಪೂರ್ವ ಮಾಹಿತಿ ದೊರೆತ ಅಬಕಾರಿ ಇಲಾಖೆಯ ಮದ್ಯವಲಯದ ಅಸಿಸ್ಟಂಟ್ ಕಮೀಷನರ್ ನೇತೃತ್ವದಲ್ಲಿ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಸಂತೋಷ್ ನನ್ನು ಸೆರೆಹಿಡಿಯಲಾಗಿದೆ. 

No comments:

Post a Comment