Sunday, January 27, 2013

ಮಂಜೇಶ್ವರದಲ್ಲಿ ಬೈಕ್ ಕಳ್ಳರು



ಮಂಜೇಶ್ವರ:ಮಂಜೇಶ್ವರದ ಪರಿಸರಗಳಲ್ಲಿ ಇದೀಗ ಬೈಕ್ ಕಳ್ಳರ ಹಾವಳಿ ಅತಿಯಾಗುತಿದ್ದು ಇಲ್ಲಿಗೆ ಸಮೀಪದ ಹೊಸಂಗಡಿಯಲ್ಲಿ ಒಂದೇ ರಾತ್ರಿಯಲ್ಲಿ ಮೂರು ಬೈಕ್ ಗಳನ್ನು ಕಳವಿಗೆತ್ನಿಸಿ ವಿಫಲವಾದ ಘಟನೆ ನಡೆದಿದೆ.
ಹೊಸಂಗಡಿ ಜಂಕ್ಷನ್ ನಲ್ಲಿ ವ್ಯಾಪಾರಿಗಳಾಗಿರುವ ಗೋಳಿಯಡಿ ನಿವಾಸಿ ಪ್ರದೀಪ್ ಕುಮಾರ್(೨೬)ಮಿತ್ತಕನಿಲ ನಿವಾಸಿ ಭರತ್(೨೫)ಮಜಲ್ ನಿವಾಸಿ ಮೊಹಮ್ಮದ್(೪೬) ಈ ಮೂವರ ಬೈಕ್ ಗಳನ್ನು ಕಳವುಗೈದ ಕಳ್ಳರು ಸ್ವಲಪ ದೂರ ಕೊಂಡು ಹೋಗಿ ಹ್ಯಾಂಡ್ ಲಾಕ್ ತೆಗೆಯಲು ಸಾಧ್ಯವಾಗದೆ ಅರ್ಧದಲ್ಲೇ ಬಿಟ್ಟು ಹೋದ ಘಟನೆ ನಡೆದಿದೆ.
ವ್ಯಾಪಾರ ಮುಗಿಸಿ ಮನೆಗೆ ತಲುಪಿ ಮನೆ ಮುಂಬಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳನ್ನು ಕಳ್ಳರು ಕೊಂಡೊಯ್ದು ಸ್ವಲ್ಪ ದೂರ ಅಡ್ಡದಾರಿಯೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ವ್ಯಾಪಾರಿಗಳು ಬೆಳಿಗ್ಗೆ ಹುಡುಕಿ ನೋಡುವಾಗ ಮನೆ ಅಂಗಳದಲ್ಲಿದ್ದ ಬೈಕ್ ಸ್ವಲ್ಪ ದೂರ ಹಾನಿಗೀಡಾದ ರೀತಿಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮಾಲಕರು ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

No comments:

Post a Comment