Tuesday, January 8, 2013

ತೂಮಿನಾಡಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ


Jan-08-2013
ಮಂಜೇಶ್ವರ: ಮಹಿಳೆಯೊಬ್ಬಳು ಒಬ್ಬಂಟಿಗಳಾಗಿ ಹೋಗುತಿದ್ದ ವೇಳೆ ಆಕೆಯನ್ನು ಅಡ್ಡಗಟ್ಟಿದ ವ್ಯಕ್ತಿಯೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ  ತೂಮಿನಾಡಿನಿಂದ ತಡವಾಗಿ ಬೆಳಕಿಗೆ ಬಂದಿದೆ.ತೂಮಿನಾಡಿನಲ್ಲಿ ವಾಸವಾಗಿರುವ ಕೇರಳದ ಮಹಿಳೆಯೊಬ್ಬಳು ಸ್ವಲ್ಪ ದಿವಸಗಳ ಹಿಂದೆ ತನ್ನ ಮನೆಗೆ ಹೋಗುತಿದ್ದ ವೇಳೆ ಕೂಲಿ ಕೆಲಸ ಮಾಡುತ್ತಿರುವ ಅಕೆಯ ನೆರೆಯಲ್ಲಿ ವಾಸವಾಗಿದ್ದ ಸ್ಥಳೀಯನೊಬ್ಬ ಮಹಿಳೆಯನ್ನು ತಡೆದು ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರಲಾಗಿದೆ.ನಿನ್ನೆ ರಾತ್ರಿ ಉತ್ತರ ಪ್ರದೇಶದ ಐಸ್ ಕೇಂಡಿ ವ್ಯಾಪಾರಿಯನ್ನು ಧರೋಡೆ ಗೈದ ತಂಡಕ್ಕೂ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೂ ನಿಕಟ ಸಂಪರ್ಕವಿರುವುದಾಗಿ ಲೈಂಗಿಕ ಪೀಡನೆಗೊಳಗಾದ ಮಹಿಳೆಯಿಂದ ಕೇಳಿ ಬಂದಿದೆ.ಸ್ಥಳೀಯನೇ ಆಗಿರುವ ಈತ ಹಲವಾರು ಕಳ್ಳತನ ಕೇಸಿನಲ್ಲಿ ಇದ್ದಾನೆಂಬುದಾಗಿ ಕೇಳಿ ಬಂದಿದೆ ಇವನ ಜತೆಯಾಗಿ ಹಲವಾರು ಕಳ್ಳರ ತಂಡ ಜತೆಯಾಗಿರುವುದಾಗಿ ಕೂಡಾ ಸ್ಥಳೀಯರಿಂದ ಕೇಳಿ ಬಂದಿದೆ.ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ತಂದು ಧರೋಡೆಗೊಳಗಾದ ವ್ಯಕ್ತಿಗೆ ತೋರಿಸಿದರೆ ಗುರುತು ಪತ್ತೆ ಹಚ್ಚುವ ಸಾಧ್ಯತೆ ಇದೆ.

No comments:

Post a Comment