Thursday, January 17, 2013

ನೆನೆಗುದಿಗೆ ಬಿದ್ದ ಕಿಟ್ಟಂಗುಂಡಿ ತ್ಯಾಜ್ಯ ಸಂಸ್ಕರಣ ಕೇಂದ್ರ :ನಾಗರಿಕರಿಂದ ವ್ಯಾಪಕ ಆಕ್ರೋಶಮಂಜೇಶ್ವರ ಪಂಚಾಯತಿಗೊಳಪಟ್ಟ ಎಲ್ಲಾ ಪ್ರದೇಶಗಳಿಂದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಸಂಸ್ಕರಿಸಲು ತ್ಯಾಜ್ಯ ಸಂಸ್ಕರಣ ಕಾರ್ಖಾನೆ ಮಾಡುವ ಉದ್ದೇಶದಿಂದ ಕಳೆದ ಸುಮಾರು ೭-೮ ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಮಚ್ಚಂಪ್ಪಾಡಿ ಪ್ರದೇಶದ ಕಿಟ್ಟಂಗುಂಡಿ ಎಂಬಲ್ಲಿ ೧ ಎಕ್ರೆ ೧೭ ಸೆನ್ಸ್ ಸ್ಥಳವನ್ನು ಸುಮಾರು ೫೦ ಸಾವಿರ ರೂಪಾಯಿಗೆ ಖರೀದಿಸಿ ೩೫ ಲಕ್ಷ ರೂಪಾಯಿಯ ತ್ಯಾಜ್ಯ ಸಂಸ್ಕರಣ ಕೇಂದ್ರವನ್ನು ನಿರ್ಮಿಸಲು ಸದ್ರಿ ಪದ್ದತಿಯನ್ನು ೭ ವರ್ಷಗಳ ಹಿಂದೆ ಯಾವುದೇ ಸೊಸೈಟಿಗೆ ಕಂಟ್ರಾಕ್ಟ್ ನೀಡಿ ೭ ಲಕ್ಷ ರೂಪಾಯಿ ಮುಂಗಡ ಹಣ ಕೂಡಾ ನೀಡಲಾಗಿತ್ತು.ಆದರೆ ಇದುವರೇಗೂ ಸದ್ರಿ ಕಾರ್ಖಾನೆಯ ಕೆಲಸ ಪ್ರಾರಂಭವಾಗಿಲ್ಲವೆಂಬುದು ಇಲ್ಲಿಯ ನಾಗರಿಕರ ಆರೋಪ.
ಇದರ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ಹಕ್ಕು ಖಾಯಿದೆಯಂತೆ ವಿಚಾರಿಸಿದಾಗ ಅದನ್ನು ರೆವನ್ಯೂರಿಕವರಿಗಾಗಿ  ನೀಡಿರುವುದಾಗಿ ಉತ್ತರ ಸಿಕ್ಕಿದೆ
ಈ ಏಳು ವರ್ಷದಲ್ಲಿ ತ್ಯಾಜ್ಯ ಸಂಸ್ಕರಣದ ತನಿಖೆ ವಿಳಂಭವಾಗಲು ಕಾರಣವೇನು? ರೆವೆನ್ಯೂ ರಿಕವರಿ ಯಾಕೆ ತಡವಾಯ್ತು? ಇದು ಇಲ್ಲಿಯ ನಾಗರಿಕರ ಪ್ರಶ್ನೆ ಮಾತ್ರವಲ್ಲದೆ ನೂತನ ವರ್ಷದ ಪದ್ದತಿಯಲ್ಲೂ ಇದರ ಬಗ್ಗೆ ಯಾವುದೇ ಸೂಚನೆ ಕೂಡಾ ಬಂದಿರುವುದಿಲ್ಲವೆಂಬುದಾಗಿ ನಾಗರಿಕರು ಕಳವಳ ವ್ಯಕ್ತಪಡಿಸುತಿದ್ದಾರೆ.ಇದೀಗ ಇಲ್ಲಿಯ ಸ್ಥಳೀಯರು ಮಂಜೇಶ್ವರ ಗ್ರಾಹಕರ ವೇದಿಕೆಯ ನೇತೃತ್ವದಲ್ಲಿ ಈ ಬಗ್ಗೆ ವಿಜಿಲೆನ್ಸ್ ಗೆ ದೂರು ನೀಡಲು ತೀರ್ಮಾನಿಸಿರುವುದಾಗಿ ಸ್ಥಳೀಯರೊಬ್ಬರು ಪತ್ರಿಕೆಗೆ ತಿಳಿಸಿರುತ್ತಾರೆ.

No comments:

Post a Comment