Tuesday, January 15, 2013

ಸಿ.ಪಿ.ಎಂ ಏರಿಯಾ ಕಾರ್ಯದರ್ಶಿ ಗೆ ಕೊಲೆ ಬೆದರಿಕೆಮಂಜೇಶ್ವರ: ಮಂಜೇಶ್ವರ ಸಿಪಿಎಂ.ಏರಿಯಾ ಕಾರ್ಯದರ್ಶಿ ಗೆ ಕೊಲೆ ಬೆದರಿಕೆ ಬಂದಿರುವುದಾಗಿ ದೂರಲಾಗಿದೆ.
ಮಂಜೇಶ್ವರ ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಆರ್.ಜಯಾನಂದ ರವರಿಗೆ  ಕಳೆದ ರಾತ್ರಿ ಕೊಲ್ಲಿ ರಾಷ್ಟ್ರದಿಂದ ಇಂಟರ್ ನೆಟ್ ಪೋನ್ ಮೂಲಕ ಅಜ್ಞಾತ ವ್ಯಕ್ತಿಯೊಬ್ಬನಿಂದ ಕೊಲೆ ಬೆದರಿಕೆ ಬಂದಿರುವುದಾಗಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿಗೆ ದೂರು ನೀಡಲಾಗಿದೆ.
ಅಜ್ಞಾತ ವ್ಯಕ್ತಿ ತನ್ನ ಪರಿಚಯವನ್ನು ತಿಳಿಸದೆ ನಮ್ಮ ವಿಷಯದಲ್ಲಿ ನೀನು ಮದ್ಯ ಪ್ರವೆಶಿಸಿದರೆ ಆಕ್ಸಿಡೆಂಟ್ ಮಾಡಿ ಕೊಲ್ಲುವುದಾಗಿ ಬೆದರಿಸಲಾಗಿದೆ.ಸ್ವಲ್ಪ ಕಳೆದು ಅದೇ ಅಜ್ಞಾತ ವ್ಯಕ್ತಿ ಮಂಜೇಶ್ವರ ಠಾಣೆಗೆ ಪೋನ್ ಮಾಡಿ ಸಿಪಿಎಂ ಏರಿಯಾ ಕಾರ್ಯದರ್ಶಿ ಉಪ್ಪಳದಲ್ಲಿ ವಾಹನ ಅಫಘಾತದಲ್ಲಿ ಮೃತ ಪಟ್ಟು ಮೃತ ಶರೀರ ರಸ್ತೆಯಲ್ಲಿ ಬಿದ್ದಿರುವುದಾಗಿ ಪೊಲೀಸರಿಗೆ ಸಂದೇಶ ನೀಡಲಾಗಿದೆ.ಪೊಲೀಸರು ನಂತ್ರ ಜಯಾನಂದರವರನ್ನು ಸಂಪರ್ಕಿಸಿದ ನಂತ್ರವೇ ಇದೊಂದು ಕಳ್ಳ ಮಾಹಿತಿ ಎಂದು ಅರಿವಿಗೆ ಬಂದದ್ದು.ಇದರ ನಂತ್ರ ಇಂದು ಬೆಳಿಗ್ಗೆ ಮತ್ತು ಮದ್ಯಾಹ್ನ ಅಜ್ಞಾತ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಬಂದಿರುವುದಾಗಿ ಕೂಡಾ ಜಯಾನಂದರವರು ಪೊಲೀಸರಿಗೆ ತಿಳಿಸಿರುತ್ತಾರೆ.ಕೇಸನ್ನು ದಾಖಲಿಸಿ ಮಂಜೇಶ್ವರ ಪೊಲೀಸರು ತನಿಖೆಯನ್ನು ಆರಂಭಿಸಿರುತ್ತಾರೆ.

No comments:

Post a Comment