Sunday, January 13, 2013

ಮಂಜೇಶ್ವರ ಗ್ರಾಹಕರ ವೇದಿಕೆಯ ದೀರ್ಘ ಹಾದಿ ಪುಟ್ಟ ಹೆಜ್ಜೆ









 January 13-2013



ಮಂಜೇಶ್ವರ:ಮಂಜೇಶ್ವರದ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸುತ್ತಿರುವ ಮಂಜೇಶ್ವರ ಗ್ರಾಹಕರ ವೇದಿಕೆಯು ಇದೀಗ ಪುಟ್ಟ ಪುಟ್ಟ ಹೆಜ್ಜೆಯನ್ನಿರಿಸುತ್ತಾ 5ನೇ ವರ್ಷಕ್ಕೆ ಪಾದಾರ್ಪನೆ ಗೈಯುತ್ತಿರುವುದು ನಮಗೆಲ್ಲರೀಗೂ ಸಂತೋಷದ ವಿಷಯ.
ಮಂಜೇಶ್ವರ ಗ್ರಾಹಕರ ವೇದಿಕೆಯು ರಾಜಕೀಯದಿಂದ ದೂರ ಉಳಿದುದೇ ಇದರ ಶ್ರೇಯಸ್ಸಿಗೆ ಕಾರಣವೆಂಬುದರಲ್ಲಿ ಎರಡು ಮಾತಿರಲಾರದು. ಜಾತಿ ಮತ ಬೇಧವಿಲ್ಲದೆ ಗ್ರಾಹಕರ ದೂರುಗಳಿಗೆ ಸ್ಪಂದನೆ,ಗ್ರಾಹಕರಿಗೆ ಬೇಕಾದ ಸಲಹೆ ಸಹಕಾರಗಳನ್ನು ನೀಡುತ್ತಾ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕೆಂಬ ಕನಸು ಹೊತ್ತು ರಂಗಕ್ಕೆ ಬಂದ ಸಂಘಟನೆಯಾಗಿದೆ.




ಪ್ರಾಯೋಗಿಕ ಲೋಕದಲ್ಲಿ ರಾಜಕೀಯ ಪುಡಾರಿಗಳ ಮುಂದೆ ಮಂಜೇಶ್ವರ ಗ್ರಾಹಕರ ವೇದಿಕೆಯಂತಹ ಸಂಘಟನೆಗೆ ಆಯುಷ್ಯ ಕಡಿಮೆ.ಆದ್ದರಿಂದ ನೂರು ಕಾಲ ಬಾಳಬೇಕೆಂಬ ಮಹತ್ವಕಾಂಕ್ಷೆಯನ್ನು ಮಂಜೇಶ್ವರ ಗ್ರಾಹಕರ ವೇದಿಕೆ ಘೋಷಿಸಿಕೊಂಡದ್ದಿಲ್ಲ.


ಕನಸುಗಳನ್ನು ಹೊತ್ತು ನಡೆಯುವಾಗ ಸೋಲು ಗೆಲುವು,ಅಳಿವು ಉಳಿವು ಮುಂತಾದ ಲೆಕ್ಕಾಚಾರಗಳಿಗೆ ಹೆಚ್ಚು ಸ್ಥಾನವಿರುವುದಿಲ್ಲ.ಪ್ರಯಾಣ ಆರಂಭಿಸಿದ ದಿನದಿಂದ ಇಂದಿನವರೆಗೂ ನಾವು ನೆಚ್ಚಿ ಕೊಂಡ ದಿಕ್ಕಿನಲ್ಲೇ ನಡೆದಿದ್ದೇವೆ. ನಮ್ಮ ಶ್ರೇಯಸ್ಸನ್ನು ಸಹಿಸಲಾರದ ಕೆಲವೊಂದು ಜನಪ್ರತಿನಿಧಿಗಳು ನಮ್ಮ ಗ್ರಾಹಕರ ವೇದಿಕೆಯ ಪಧಾಧಿಕಾರಿಗಳ ಮೇಲೆ ಅಲ್ಲ ಸಲ್ಲದ ಆರೋಪ ಹೊರಿಸಿ ಪತ್ರಿಕಾ ಪ್ರಕಟನೆ ನೀಡಿದರು ಆದರೆ ಇದರಿಂದಾಗಿ ನಮ್ಮ ಗ್ರಾಹಕರ ವೇದಿಕೆಯ ವರ್ಚಸ್ಸಿಗೆ ಏನೂ ತೊಂದರೆ ಬರಲಿಲ್ಲ.ಸುಳ್ಳು ಪತ್ರಿಕಾ ಪ್ರಕಟನೆ ನೀಡಿದ ಜನಪ್ರತಿನಿಧಿಯ ಮೇಲೆ ಕಾನೂನು ಕ್ರಮವನ್ನು ಜರಗಿಸಲು ಅಪೇಕ್ಷಿಸಿ ಕಾನೂನು ತಜ್ಞರನ್ನು ಬೇಟಿಯಾಗಿ ಮಾನ ನಷ್ಟ ಮೊಕದ್ದಮೆಯನ್ನು ಹೂಡಿದ್ದೇವೆ.



ಗ್ರಾಹಕರ ವೇದಿಕೆ ಆರಂಭಿಸುವಂದು ನಾವು ಎಲ್ಲರೀಗೂ ಒಂದು ಒಗಟಾಗಿದ್ದೆವು ಇಂದು ಮಂಜೇಶ್ವರ ಗ್ರಾಹಕರ ವೇದಿಕೆಗೆ ರಾಜಕೀಯದಿಂದ ಮುಕ್ತವಾದ ಒಂದು ದೊಡ್ಡ ಬಳಗವೇ ಕಾಸರಗೋಡು ಹಾಗು ದಕ್ಶಿಣ ಕನ್ನಡ ಜಿಲ್ಲೆಯಲ್ಲಿದೆ  .ಮಂಜೇಶ್ವರ ಗ್ರಾಹಕರವೇದಿಕೆಯ ಅಭಿಮಾನಿಗಳ ಸಾಲಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುವ ವ್ಯಕ್ತಿಗಳೇ ಹೆಚ್ಚು.ಮಂಜೇಶ್ವರ ಗ್ರಾಹಕರ ವೇದಿಕೆಯ ಸಭೆಗಳಲ್ಲಿ ಅಂಗೀಕಾರವಾದ ವಿಷಯಗಳು ಪತ್ರಿಕೆಗಳಲ್ಲಿ ಪ್ರಕಟವಾದ ಕೂಡಲೇ ಚರ್ಚಿಸಿ ವೇದಿಕೆಯ ಭಾವನಾತ್ಮಕ ನಂಟು ಬೆಳಸಿಕೊಂಡವರಲ್ಲಿ ಮಂಗಳೂರಿನ ಕ್ಯಾತ ಡಾಕ್ಟರ್ ಗಳ ಸಹಿತ ಇಂದು ಕಾಸರಗೋಡು ಹಾಗು ದಕ್ಶಿಣ ಕನ್ನಡ ಜಿಲ್ಲೆಯಲ್ಲಿ ಧಾರಾಳ ಅಭಿಮಾನಿಗಳಿದ್ದಾರೆ.


ಈಗಿನ್ನು ಮಂಜೇಶ್ವರ ಗ್ರಾಹಕರ ವೇದಿಕೆ ಇತರ ಸಂಘಟನೆಗಳನ್ನೆಲ್ಲಾ ಮೀರಿ ಸಂಪೂರ್ಣ ಪರ್ಯಾಯವಾಗಿ ಬಿಡುವಷ್ಟು ಎತ್ತರಕ್ಕೆ ನಮ್ಮ ವೇದಿಕೆ ಬೆಳೆದಿಲ್ಲವೆಂಬುದು ನಿಜವಾಗಿದ್ದರೂ ಕಳೆದ 4 ವರ್ಷಗಳಲ್ಲಿ ಮಂಜೇಶ್ವರ ಗ್ರಾಹಕರ ವೇದಿಕೆ ಕೆಲವರ ನಿದ್ದೆಗೆಡಿಸುವಷ್ಟು,ಹಲವರಲ್ಲಿ ಎಚ್ಚರಮೂಡಿಸುವಷ್ಟು ಚೈತನ್ಯ ಬೆಳೆಸಿಕೊಂಡಿದೆ.ಮಂಜೇಶ್ವರ ಗ್ರಾಹಕರ ವೇದಿಕೆಯ ತೀರ್ಮಾನಗಳನ್ನು ಮೆಚ್ಚಿಕೊಂಡು ಸಲಹೆ ಸಹಕಾರಗಳನ್ನು ನೀಡುತ್ತಿರುವ ಗ್ರಾಹಕರ ವೃತ್ತ ದಿನಗಳಿಂದ ದಿನಕ್ಕೆ ವಿಸ್ತರಿಸುತ್ತಾ ಇದೆ.


ಗ್ರಾಹಕರ ವೇದಿಕೆಯ ವಿವಿಧ ಚಟುವಟಿಕೆಗಳು ಹಾಗು ಕೆಲವೊಂದು ತೀರ್ಮಾನಗಳು ಪ್ರಶಂಶೆಗೆ ಪಾತ್ರವಾದದ್ದಿದೆ.ಅದು ಹಲವಡೆ ಹಲವು ತರದ ಚರ್ಚೆಗಳಿಗೆ ಸಂವಾದಗಳಿಗೆ ಪ್ರೇರಕವಾದದ್ದಿದೆ.ಆದರೆ ಮಂಜೇಶ್ವರ ಗ್ರಾಹಕರ ವೇದಿಕೆಗೆ ಸಮುದಾಯದಿಂದ ಅತ್ಯಧಿಕ ಪ್ರಕ್ರಿಯೆಗಳು ಬಂದಿರುವುದು ರಾಜಕೀಯದಿಂದ ದೂರ ಉಳಿದ ಸಂಘಟನೆ ಎಂಬ ವಿಷಯವನ್ನು ಮುಂದಿಟ್ಟು ಮಾತ್ರ.ಗ್ರಾಹಕರ ವೇದಿಕೆಯ ನಿಜ ಮುಖದ ಪರಿಚಯ ನೀಡುವ ಮಂಜೇಶ್ವರ್ ಟೈಮ್ಸ್ ನಲ್ಲಿ ಪ್ರಕಟಿಸಿರುವ ಈ ಚಿಕ್ಕ ಬರಹದ ಬಗ್ಗೆ ನಿಮ್ಮ ಅನಿಸಿಕೆ,ಸಲಹೆ ಸೂಚನೆಗಳನ್ನು ಕಾತರದಿಂದ ಎದುರು ನೋಡುತಿದ್ದೇವೆ( ಮಂಜೇಶ್ವರ್ ಟೈಮ್ಸ್ ಟೀಂ)
ರಹಿಮಾನ್ ಉದ್ಯಾವರ
ಪ್ರಧಾನ ಸಂಪಾದಕರು ಮಂಜೇಶ್ವರ್ ಟೈಮ್ಸ್

No comments:

Post a Comment