Wednesday, January 9, 2013

ಬಸ್ಸು ಚಾಲಕನಿಗೆ ಹಲ್ಲೆಗೈದ ಮೂವರ ವಿರುದ್ದ ಕೇಸು ದಾಖಲು


Jan-09-2013
ಮಂಜೇಶ್ವರ:ಬಸ್ಸು ಚಾಲಕನನ್ನು ಹಲ್ಲೆ ಗೈದ ಪ್ರಕರಣಕ್ಕೆ ಸಂಭಂಧಿಸಿ ಮೂವರ ವಿರುದ್ದ ಕೇಸು ದಾಖಲಿಸಲಾಗಿದೆ.ಬಸ್ಸು ಮುಷ್ಕರದ ದಿನದಂದು ಬೈಕ್ ನಲ್ಲಿ ಸಂಚರಿಸುತಿದ್ದ ಬಸ್ಸು ಚಾಲಕರಾದ ಕೆದಂಬಾಡಿ ನಿವಾಸಿ ಜಾನ್ ಕ್ರಾಸ್ತಾ(32) ಎಂಬವರನ್ನು ಇನ್ನೊಂದು ಬೈಕ್ ನಲ್ಲಿ ತಲುಪಿದ ತಂಡ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿತ್ತು.ಈ ಬಗ್ಗೆ ಕೇಸು ದಾಖಲಿಸಿದ ಪೊಲೀಸರು ಮುಸಮ್ಮಲ್  ಹಾಗು ಕಂಡರೆ ಪತ್ತೆ ಹಚ್ಚಬಹುದಾದಂತಹ ಇನ್ನಿಬ್ಬರ ವಿರುದ್ದ ಕೇಸು ದಾಖಲಿಸಿರುತ್ತಾರೆ.

No comments:

Post a Comment