Thursday, January 17, 2013

ತಾಲೂಕು ಆಫೀಸ್ ಕ್ಲರ್ಕ್ ನ ಕುಂಜತ್ತೂರು ಮನೆಗೆ ವಿಜಿಲೆನ್ಸ್ ಧಾಳಿ

ಮಂಜೇಶ್ವರ: ಕಾಸರಗೋಡು ತಾಲೂಕು ಕಚೇರಿಯಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತಿದ್ದ ವ್ಯಕ್ತಿಯ ಮನೆಗೆ ಇಂದು ಬೆಳಿಗ್ಗೆ ವಿಜಿಲೆನ್ಸ್ ಆಂಟಿ ಕರೆಪ್ಸನ್ ಬ್ಯುರೋ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.
ಕುಂಜತ್ತೂರು ನಿವಾಸಿ ತಾಲೂಕು ಕಚೇರಿ ಯಲ್ಲಿ ಕ್ಲರ್ಕ್ ಆಗಿದ್ದ ರಾಜ್ ಶೇಖರ್ ಭಟ್ ಎಂಬವರ ಮನೆಗೆ ಇಂದು ಬೆಳಿಗ್ಗೆ ಕೋಝಿಕ್ಕೋಡ್ ವಿಜಿಲೆನ್ಸ್ ಡಿವೈಎಸ್ ಪಿ ಸಾಬು ಎಂಬವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಧಾಳಿ ನಡೆದಿದೆ.ಇತ್ತೀಚೆಗೆ ಕುಂಜತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಹೊಸತಾದ ಮನೆಯೊಂದನ್ನು ಕಟ್ಟಿದ್ದರು.ಅಧಿಕ ಆಸ್ತಿಯನ್ನು ಹೊಂದಿದ್ದಾರೆಂಬ ಕಾರಣಕ್ಕಾಗಿ ಧಾಳಿ ನಡೆದಿದೆ ಎಂಬುದಾಗಿ ತಿಳಿದು ಬಂದಿದೆ.ಖಚಿತವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.ವರದಿಗಾಗಿ ತೆರಳಿದ್ದ ವರದಿಗಾರರೀಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಹೊರಗೆ ಕಳಿಸಿರುತ್ತಾರೆ

No comments:

Post a Comment