Sunday, January 13, 2013

ಆರ್‌ಟಿಐ ಕಾರ್ಯಕರ್ತನ ಹತ್ಯೆ;ಕಡೂರು ತಾಲೂಕಿನ ಮದಗದ ಕೆರೆಯಲ್ಲಿ ಶವ ಪತ್ತೆ


ಆರ್‌ಟಿಐ ಕಾರ್ಯಕರ್ತನ ಹತ್ಯೆ;ಕಡೂರು ತಾಲೂಕಿನ ಮದಗದ ಕೆರೆಯಲ್ಲಿ ಶವ ಪತ್ತೆ
- ಜನವರಿ -13-2013

ಉಡುಪಿ/ಚಿಕ್ಕಮಗಳೂರು, ಜ.12: ಕಳೆದ ಸೋಮವಾರ ರಾತ್ರಿ ವಂಡಾರು- ಗೋಳಿಯಂಗಡಿ ಪರಿಸರದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾದ ಕೋಟ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಆರ್‌ಟಿಐ ಕಾರ್ಯಕರ್ತ, ವಂಡಾರು ಗ್ರಾಮದ ಕೊಕ್ಕನಬೈಲು ನಿವಾಸಿ ವಾಸುದೇವ ಅಡಿಗ ಎಂಬವರ ಮೃತದೇಹ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆದೊಡ್ಡಿ ಎಂಬಲ್ಲಿರುವ ಮದಗದಕೆರೆಯಲ್ಲಿ ಕೊನೆಗೂ ಪತ್ತೆಯಾಗಿದೆ.ಅವಿವಾಹಿತರಾಗಿದ್ದ ವಾಸುದೇವ ಅಡಿಗ(೪೫)ರನ್ನು ಅಪಹರಣಕಾರರು ಸೋಮವಾರ ರಾತ್ರಿಯೇ ಭೀಕರವಾಗಿ ಕೊಲೆ ಮಾಡಿ ಶವವನ್ನು ಕಡೂರಿನಿಂದ 20 ಕಿ.ಮೀ. ದೂರದಲ್ಲಿ ಸುತ್ತ ಗುಡ್ಡಗಳಿಂದ ಆವೃತ್ತವಾದ ಮದಗಕೆರೆಗೆ ಎಸೆದು ತೆರಳಿರುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕುಂದಾಪುರ ತಾಲೂಕಿನ ವಂಡಾರು ಗ್ರಾಮದ ನಿವಾಸಿಯಾಗಿರುವ ಅಡಿಗರ ಮೃತದೇಹ ನಿನ್ನೆ ಸಂಜೆಯ ವೇಳೆ ಕೊಳೆತ ಸ್ಥಿತಿಯಲ್ಲಿ ಮದಗದ ಕೆರೆಯಲ್ಲಿ ತೇಲುತ್ತಿರುವುದನ್ನು ಜನರು ನೋಡಿ ಸಖರಾಯ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದರು. ಇಂದು ಬೆಳಗ್ಗೆ ಸ್ಥಳಕ್ಕೆ ತೆರಳಿದ ಪೊಲೀಸರು ಶವವನ್ನು ಮೇಲಕ್ಕೆತ್ತಿದ್ದರು. ಶವದ ಕೈ ಕಾಲುಗಳನ್ನು ಕಟ್ಟಿ, ತಲೆ ಮತ್ತು ಮುಖದ ಭಾಗಗಳ ಗುರುತು ಸಿಗದಿರುವಂತೆ ಕಲ್ಲಿನಿಂದ ಜಜ್ಜಿ ಬರ್ಬರ ರೀತಿಯಲ್ಲಿ ಹತ್ಯೆಗೈಯಲಾಗಿದೆ.
ಶವವನ್ನು ಗಮನಿಸಿದರೆ ದ್ವೇಷದಿಂದ ಈ ಕೃತ್ಯ ನಡೆಸಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಜ.7ರ ರಾತ್ರಿ ಶೀರೂರು ಮೂರುಕೈಯಿಂದ ವಂಡಾರಿಗೆ ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಬಂದ ಅಡಿಗ, ಸ್ನೇಹಿತರನ್ನು ಅವರ ಮನೆಯ ಬಳಿ ಬಿಟ್ಟು 9:30ರ ಸುಮಾರಿಗೆ ಮನೆಗೆಂದು ತೆರಳಿದವರು ನಾಪತ್ತೆಯಾಗಿದ್ದರು. ಅಡಿಗರನ್ನು ಅವರ ಮನೆಯ ಸಮೀಪದಿಂದಲೇ ಅಪಹರಿಸಿರುವುದು ಅಲ್ಲಿ ದೊರೆತ ಅವರ ಪೆನ್ನು ಹಾಗೂ ಅಲ್ಲಿದ್ದ ವಾಹನದ ಟಯರ್ ಗುರುತಿನಿಂದ ತಿಳಿದುಬಂದಿತ್ತು.
ಮರುದಿನ ಬೆಳಗ್ಗೆ ಅವರ ಬೈಕ್ ಗೋಳಿಯಂಗಡಿ ಶಾಲೆಯ ಬಳಿಯ ಹಾಡಿಯಲ್ಲಿ ಪತ್ತೆಯಾಗಿತ್ತು.ಅಡಿಗರನ್ನು ಅಪಹರಿಸಿದವರು ಬಲವಾದ ಆಯುಧದಿಂದ ತಲೆಗೆ ಬಡಿದಿದ್ದು, ಶವದ ತಲೆಯಲ್ಲಾದ ಗಾಯ ಸೂಚಿಸುತ್ತದೆ. ಅದೇ ರೀತಿ ಕುತ್ತಿಗೆಯನ್ನು ವಯರ್‌ನಿಂದ ಬಿಗಿದು ಕೊಲೆ ಮಾಡಿರುವ ಗುರುತು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೊಂದ ಬಳಿಕ ದೇಹಕ್ಕೆ ಕಲ್ಲುಗಳನ್ನು ಬಿಗಿದು ನೀರಿಗೆ ಎಸೆಯಲಾಗಿದ್ದು, ಅದು ಹೇಗೊ ಜಾರಿಬಿದ್ದು ದೇಹ ನಿನ್ನೆ ಸಂಜೆ ವೇಳೆ ನೀರಿನ ಮೇಲೆ ಬಂದು ತೇಲುತಿದ್ದು ಜನರ ಗಮನಕ್ಕೆ ಬಂತೆನ್ನಲಾಗಿದೆ.
ಅನಾಥ ಶವವೆಂದು ಹೂಳಲು ಸಿದ್ಧತೆ: ಶವವನ್ನು ನೀರಿನಿಂದ ಮೇಲಕ್ಕೆತ್ತಿದ ಪೊಲೀಸರಿಗೆ ಅದರಲ್ಲಿ ಯಾವುದೇ ಗುರುತು ಸಿಕ್ಕದ ಕಾರಣ, ಪೋಸ್ಟ್ ಮಾರ್ಟಂ ಬಳಿಕ ಅದನ್ನು ಅನಾಥ ಶವವೆಂದು ಹೂಳಲು ಸಿದ್ಧತೆ ನಡೆಸಿದ್ದರು. ಆದರೆ ಶವದ ಅಂಗಿಯನ್ನು ಮತ್ತೊಮ್ಮೆ ಪರಿಶೀಲಿಸಿದಾಗ ಅದರಲ್ಲಿ ಕರವಸ್ತ್ರದ ನಡುವೆ ಸಿಕ್ಕಿದ ಒಂದು ಚೀಟಿ ಶವದ ಗುರುತು ಪತ್ತೆಯಾಗುವಂತೆ ಮಾಡಿತು.ವಾಸುದೇವ ಅಡಿಗ ಅವರು ತಮ್ಮ ಮನೆಗೆ ಡಿಶ್ ಹಾಕಿಸಿದ್ದು, ಡಿಟಿಎಚ್‌ನ್ನು ಜ.7ರಂದೇ ರಿಚಾರ್ಜ್ ಮಾಡಿದ್ದರು. ಬ್ರಹ್ಮಾವರದ ಗಣೇಶ್ ಎಲೆಕ್ಟ್ರಾನಿಕ್ಸ್‌ನಲ್ಲಿ ಪಡೆದ ಚೀಟಿಯಲ್ಲಿ ಅವರ ಹೆಸರು ನಮೂದಾಗಿತ್ತು ಎಂದು ತಿಳಿದುಬಂದಿದೆ. 
ಅಪಹರಿಸುವ ಸಂದರ್ಭದಲ್ಲಿ ಅವರ ಗುರುತನ್ನು ನೀಡುವ-ಪೆನ್ನು, ವಾಚು, ಬೈಕು, ಐಡಿಕಾರ್ಡ್- ಎಲ್ಲಾ ವಸ್ತುಗಳನ್ನು ಅಲ್ಲಲ್ಲಿ ಎಸೆದು ಹೋಗಿದ್ದ ಅಪಹರಣಕಾರರಿಗೆ ಚೀಟಿ ಸಿಗದೇ ತಪ್ಪಿಸಿಕೊಂಡಿದ್ದು ಶವದ ಗುರುತು ಪತ್ತೆಗೆ ಸಹಕಾರಿಯಾಯಿತು ಎಂದು ತಿಳಿದುಬಂದಿದೆ. ಅಪಹರಣದ ಸ್ಥಳದಲ್ಲಿ ಬಿದ್ದ ಅವರ ಪೆನ್ನು ಅಡಿಗರ ಅಪಹರಣದ ಸುದ್ದಿಯನ್ನು ಜಗತ್ತಿಗೆ ಸಾರಿದರೆ, ಶವದಲ್ಲಿ ಅಪಹರಣಕಾರರ ಕಣ್ಣು ತಪ್ಪಿಸಿ ಉಳಿದ ಚೀಟಿಯಿಂದ ಅವರ ಗುರುತು ಪತ್ತೆ ಸಾಧ್ಯವಾಯಿತು.
ಶಿವವೊಗ್ಗದಲ್ಲಿ ಮತ್ತೆ ಪೋಸ್ಟ್ ಮಾರ್ಟಂ: ಶವದ ಪೋಸ್ಟ್ ಮಾರ್ಟಂನ್ನು ವೊದಲು ಕೆರೆಯ ಬಳಿ ನಡೆಸಿ ಕಡೂರು ಆಸ್ಪತ್ರೆಯಲ್ಲಿ ಶವವನ್ನು ಇರಿಸಲಾಗಿತ್ತು. ಅಲ್ಲಿ ಪೋರೆನ್ಸಿಕ್ ತಜ್ಞರು ಇಲ್ಲದ ಕಾರಣ ಬಳಿಕ ಶವವನ್ನು ಆಂಬುಲೆನ್ಸ್‌ನಲ್ಲಿ ನೇರವಾಗಿ ಶಿವವೊಗ್ಗಕ್ಕೆ ತಂದು ರಾತ್ರಿ ವೇಳೆಗೆ ಎರಡನೇ ಬಾರಿಗೆ ಪೋಸ್ಟ್ ಮಾರ್ಟಂ ನಡೆಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿದ್ದ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಸುದ್ದಿ ತಿಳಿದಾಕ್ಷಣ ನೇರವಾಗಿ ಕಡೂರಿಗೆ ತೆರಳಿ, ಮುಂದಿನ ಕ್ರಮಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದರು. ಬಳಿಕ ಅವರು ಶಿವವೊಗ್ಗಕ್ಕೂ ತೆರಳಿದರು.ಅಪರಾಹ್ನದ ವೇಳೆಗೆ ವಾಸುದೇವ ಅಡಿಗರು ಶವ ಸಿಕ್ಕಿದ ಮಾಹಿತಿ ವಂಡಾರಿನ ಮನೆಯಲ್ಲಿರುವ ಅವರ ತಾಯಿ, ಸಹೋದರ, ಸಹೋದರಿಯರಿಗೆ ತಲುಪಿತು. ಅಡಿಗರ ಸ್ನೇಹಿತರು, ಕಿರಿಯ ಸಹೋದರ ಕೃಷ್ಣಮೂರ್ತಿ ಅಡಿಗರೊಂದಿಗೆ ಶಿವಮೊಗ್ಗಕ್ಕೆ ಧಾವಿಸಿದ್ದಾರೆ.
ನಾಳೆ ಬೆಳಗ್ಗೆ ಅವರು ಶವವನ್ನು ವಂಡಾರಿಗೆ ತರಲಿದ್ದು, ಮುಂಜಾನೆ 8-9 ಗಂಟೆ ನಡುವೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಪೊಲೀಸರ ತನಿಖೆ ತೀವ್ರ: ಅಡಿಗರ ಶವ ಕಡೂರಿನಲ್ಲಿ ದೊರೆತಿದ್ದು, ನಾಳೆ ಬೆಳಗ್ಗೆ ಮನೆಗೆ ಬರಲಿದೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿವಿಧ ಪೊಲೀಸ್ ತಂಡಗಳು ತನಿಖೆಯನ್ನು ಚುರುಕುಗೊಳಿಸಿವೆ. ಸಿಕ್ಕಿದ ಕೆಲವು ಖಚಿತ ಮಾಹಿತಿಗಳ ಆಧಾರದಲ್ಲಿ, ಶೀಘ್ರವೇ ಕೊಲೆ ರಹಸ್ಯ ಭೇದಿಸುವ ವಿಶ್ವಾಸವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ ಪತ್ರಿಕೆಗೆ ತಿಳಿಸಿದರು.ಆಸ್ತಿಯ ವಿಷಯದಲ್ಲಿ ಪಕ್ಕದ ಮನೆಯ ರಮೇಶ್ ಬಾಯರಿ ಎಂಬವರೊಂದಿಗಿದ್ದ ವೈಮನಸ್ಸು ಹಾಗೂ ಒಬ್ಬ ಜನಪರ ಆರ್‌ಟಿಐ ಕಾರ್ಯಕರ್ತನಾಗಿ ನಡೆಸಿದ ನಿರಂತರ ಹೋರಾಟ ಅಡಿಗರ ಕೊಲೆಗೆ ಕಾರಣವಾಗಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರ ತನಿಖೆ ನಡೆಯುತ್ತಿದೆ.
ಸಂಸದ ಕೆ.ಜಯಪ್ರಕಾಶ್ ಹೆಗ್ಡೆಯವರಿಗೆ ನಿಕಟವರ್ತಿಯಾಗಿದ್ದ ವಾಸುದೇವ ಅಡಿಗ,ಆರ್‌ಟಿಐ ಕಾರ್ಯಕರ್ತರಾಗಿ ಅನೇಕ ರಹಸ್ಯ ಸಂಗತಿಗಳನ್ನು ಬಹಿರಂಗ ಪಡಿಸುತ್ತಿದ್ದುದು,ಅದರ ಆಧಾರದಲ್ಲಿ ನ್ಯಾಯಾಲಯದ ಹೋರಾಟಕ್ಕೆ ಮುಂದಾಗುತಿದ್ದುದು ಅವರ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ವಂಡಾರು, ಗೋಳಿಯಂಗಡಿ ಪರಿಸರದ ಅಕ್ರಮ ಗಣಿಗಾರಿಕೆ, ಕಲ್ಲುಕೋರೆಗಳ ವಿರುದ್ಧ ಅಡಿಗ ನಡೆಸುತಿದ್ದ ಹೋರಾಟದಿಂದ ಗಣಿ ಮಾಲಕರಿಗೆ ಹಾಕಲಾದ ಕೋಟ್ಯಾಂತರ ರೂ. ದಂಡ, ಜಿಲ್ಲೆಯ ದೇವಾಲಯವೊಂದರ ಧರ್ಮದರ್ಶಿ  ವಿರುದ್ಧ ನಡೆಸಿದ ನ್ಯಾಯಾಲಯದ ಹೋರಾಟದ ಹಿನ್ನೆಲೆಯ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. 
ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠ ಶಶಿಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಾಗಿ

No comments:

Post a Comment