Saturday, January 5, 2013

ಎಪ್ರಿಲ್ ನಲ್ಲಿ ವಿದ್ಯುತ್ ದರ ಏರಿಕೆ?


Jan-05-2013
ಕೇರಳ ರಾಜ್ಯದ ವಿದ್ಯುತ್ ಗ್ರಾಹಕರಿಗೆ ಲಭಿಸುತ್ತಿರುವ ಸಬ್ಸಿಡಿಯನ್ನು ರದ್ದುಪಡಿಸುವಂತೆ ವಿದ್ಯುನ್ಮಂಡಳಿಗೆ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದಲ್ಲಿ ಕೇಳಿ ಕೊಂಡ ಹಿನ್ನಲೆಯಲ್ಲಿ ಈ ಬೇಡಿಕೆಯನ್ನು ವಿದ್ಯುತ್ ನಿಯಂತ್ರಣ ಆಯೋಗ ಅಂಗೀಕರಿಸಿದ್ದಲ್ಲಿ ವಿದ್ಯುತ್ ದರ ಗಣನೀಯವಾಗಿ ಏರುವ ಸಾಧ್ಯತೆ ಇದೆ.ಮಾತ್ರವಲ್ಲದೆ 2012-2013 ಆರ್ಥಿಕ ವರ್ಷದಲ್ಲಿ ವಿದ್ಯುನ್ಮಂಡಳಿಗೆ 2,758 ಕೋಟಿ ರೂಗಳ ಆರ್ಥಿಕ ಕೊರತೆ ಉಂಟಾಗಲಿದೆ ಎಂದೂ ಇದನ್ನು 1573 ಕೋಟಿ ಕೊರತೆಯನ್ನು ವಿದ್ಯುತ್ ದರ ಹೆಚ್ಚಿಸುವ ಮೂಲಕ ನೀಗಿಸಬೇಕೆಂದೂ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ವಿದ್ಯುನ್ಮಂಡಳಿ ಆಗ್ರಹಿಸಿರುವುದಾಗಿ ತಿಳಿದು ಬಂದಿದೆ.ಕಳೆದ ಜುಲೈ ತಿಂಗಳಿನಲ್ಲಿ ಹೆಚ್ಚಿಸಲಾಗಿದ್ದ ವಿದ್ಯುತ್ ದರದಿಂದ 1676.84 ಆದಾಯ ಉಂಟಾಗಿದ್ದು ಇನ್ನು ಮುಂದೆ ಜಾರಿಯಲ್ಲಿರುವ ಸ್ಲಾಬ್ ಸಂಪ್ರದಾಯ ಹೊರತುಪಡಿಸಬೇಕು  ಈಗ ಚಾಲಿತಿಯಲ್ಲಿರುವ ತಿಂಗಳಿಗೆ 50 ಯುನಿಟ್ ತನಕ ವಿದ್ಯತ್ ಯುನಿಟ್ ಗೆ 1.50 ರೂ ವಸೂಲಿ ಮಾದಲಾಗುತಿದ್ದು 41 ರಿಂದ 880 ಯೂನಿಟ್ ತನಕ ಪ್ರತಿ ಯೂನಿಟ್ ಗೆ ತಲಾ 2.40 ರೂ 81-120 ತನಕದ ಯೂನಿಟ್ ಗೆ 2.90 ರೂ 120-150 ರ ತನಕದ ಯುನಿಟ್ ಗೆ ತಲಾ 3.60 ರೂ 151-200 ತನಕದ ಯೂನಿಟ್ ಗೆ ತಲಾ 4.80 ರೂ 201-300 ತನಕದ ಯೂನಿಟ್ ಗೆ ತಲಾ 6 ರೂ ನಂತೆ ಹಾಗು 301-500 ತನಕದ ಯೂನಿಟ್ ಗೆ ತಲಾ 7.50 ರೂ ವಸೂಲಿ ಮಾಡಲಾಗುತ್ತಿದೆ.
ಇಂತಹ ಸ್ಲಾಬ್ ಸಂಪ್ರದಾಯ ವನ್ನು ಹೊರತು ಪಡಿಸಿ 40 ಯೂನಿಟ್ ತನಕ ಯೂನಿಟ್ ಗೆ ತಲಾ 1.60 ರೂ 80 ರ ತನಕ ಪ್ರತೀ ಯೂನಿಟ್ ಗೆ 2.30 ರೂ 120 ಯೂನಿಟ್ ತನಕ 2.70 ರೂ 150 ಯೂನಿಟ್ ತನಕ 3.30 ರೂ 200 ಯೂನಿಟ್ ತನಕ 4.30 ರೂ 300 ಯೂನಿಟ್ ತನಕ 5 ರೂ ಹಾಗು 300 ಕ್ಕಿಂತ  ಹೆಚ್ಚು ಬಳಸುವ ಗ್ರಾಹಕರಿಗೆ ಪ್ರತೀ ಯೂನಿಟ್ ಗೆ 6.75 ರೂ ನಂತೆ ವಸೂಲು ಮಾಡಬೇಕೆಂದೂ ಅದೇ ರೀತಿ 300 ಕ್ಕಿಂತ ಅಧಿಕ ಬಳಸುವ ಗ್ರಾಹ್ಜಕರಿಗೆ ಅವರು ರಾತ್ರಿ ಬಳಸುವ ವಿದ್ಯುತ್ ಗೆ ಹೆಚ್ಚು ಬೆಲೆ ವಸೂಲಿ ಮಾಡಬೇಕೆಂದೂ ಮಂಡಳಿ ಕೇಳಿ ಕೊಂಡಿದೆ.ಇದು ಜಾರಿಯಲ್ಲಿ ಬಂದರೆ ಗೃಹ ಬಳಕೆಯ ಗ್ರಾಹಕರಿಂದ ಮಾತ್ರವಾಗಿ ವಿದ್ಯುನಂಡಳಿಗೆ 752 ಕೋಟಿ ಹೆಚ್ಚು ಆದಾಯ ಲಭಿಸಲಿದ್ದು ಮೊತ್ತ 1573 ಕೋತಿ ರೂ ಗಳ ಲಾಭವನ್ನು ನಿರೀಕ್ಷಿಸಿಸಲಾಅಗಿದೆ.ಇದರ ಹೊರತಾಗಿ ಎಚ್.ಟಿ.ಇ.ಹೆಚ್.ಟಿ ಉದ್ದಿಮೆಗಳ ಡಿಮಾಂಡ್ ಚಾರ್ಜ್ ನ್ನು ಯೂನಿಟ್ ಗೆ 75 ಪೈಸೆಗೆ ಏರಿಸಬೇಕೆಂಬ ಬೇಡಿಕೆಯನ್ನು ಕೂಡಾ ವಿದ್ಯುನ್ಮಂಡಳಿ ಕೇಳಿಕೊಂಡಿದೆ 

No comments:

Post a Comment