Saturday, January 12, 2013

ಎಸ್.ಕೆ.ಎಸ್.ಎಸ್.ಎಫ್ ಮಚ್ಚಂಪಾಡಿ ಶಾಖೆಗೆ ಆಯ್ಕೆ


ಮಂಜೇಶ್ವರ : ಎಸ್.ಕೆ.ಎಸ್.ಎಸ್.ಎಫ್ ಮಚ್ಚಂಪಾಡಿ ಶಾಖೆ ವಾರ್ಷಿಕ ಮಹಾ ಸಭೆಯು ಶಾಖಾ ಕಛೇರಿಯಲ್ಲಿ ಇತ್ತೀಚೆಗೆ ಜರಗಿತು. ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಇಬ್ರಾಹಿಂ ಪಿ.ಪಿ ಅಧ್ಯಕ್ಷತೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಕಾಸರಗೋಡು ಜಿಲ್ಲಾ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಫೈಝಿ ಕುಳವೈಲು ಉದ್ಗಾಟಿಸಿದರು. ಎಸ್.ಕೆ.ಎಸ್.ಎಸ್.ಎಫ್ ಮಂಜೇಶ್ವರ ವಲಯ ಕಾರ್ಯದರ್ಶಿ ಸಿದ್ದೀಕ್ ಅಝ್ಹರಿ ನೂತನ ಸಮಿತಿ ಆಯ್ಕೆಯ ನಿಯಂತ್ರಿಸಿದರು. ನೂತನ ಸಾಲಿನ ಪದಾಧಿಕಾರಿಗಳಾಗಿ ಮುಹಮ್ಮದ್ ನೌಫಲ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಫಯಾಸ್.ಶೆರೀಫ್ (ಕೋಶಾಧಿಕಾರಿ)ಉಪಾಧ್ಯಕ್ಷರುಗಳಾಗಿ ಹಮೀದ್, ಝಕರಿಯಾ,ಯೂಸುಫ್ ಹಾರಿಸ್  , ವರ್ಕಿಂಗ್ ಕಾರ್ಯದರ್ಶಿಯಾಗಿ ನೌಶಾದ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್, ಸ್ವಾಲಿಹ್ ಎಂಬಿವರನ್ನು ಆಯ್ಕೆ ಮಾಡಲಾಯಿತು.  ಆರಿಫ್ ಮಚ್ಚಂಪಾಡಿ ಸ್ವಾಗತಿಸಿ ಫಯಾಸ್ ಎಂ.ಬಿ ವಂದಿಸಿದರು. 

No comments:

Post a Comment