Friday, January 11, 2013

ಯುವಕ ನಾಪತ್ತೆ


ಮಂಜೇಶ್ವರ:ಯುವಕನೋರ್ವ  ನಾಪತ್ತೆಯಾದ ಬಗ್ಗೆ ಇಲ್ಲಿಗೆ ಸಮೀಪದ ಬೇಕೂರುನಿಂದ ವರದಿಯಾಗಿದೆ ನಾಪತ್ತೆಯಾದ ಯುವಕ ಬೇಕೂರು ನಿವಾಸಿ ಕೇಶವ ಆಚಾರ್ಯರವರ ಪುತ್ರ ಪ್ರವೀಣ(25) ಎಂಬವನಾಗಿದ್ದಾನೆ.
ವೃತ್ತಿಯಲ್ಲಿ ಮರದ ಕೆಲಸಗಾರನಾಗಿದ್ದ ಈತ ಡಿ.28 ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವನು ಸಂಜೆ ಮಂಗಳೂರಿನಲ್ಲಿರುವ ಸಹೋದರನ ಬಳಿಗೆ ತೆರಳಿ ನಂತರ ನಾಪತ್ತೆಯಾಗಿರುವುದಾಗಿ ದೂರಲಾಗಿದೆ.ಈತನ ಬಗ್ಗೆ ಹಲವು ಕಡೆ ಹುಡುಕಾಡಿದರೂ ಯಾವುದೇ ವಿವರ ಲಭ್ಯವಾಗದ ಕಾರಣ ತಂದೆಯವರು ಮಂಜೇಶ್ವರ  ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.

No comments:

Post a Comment