Friday, January 4, 2013

ಕೆಂಪು ಕಲ್ಲು ಕರ್ನಾಟಕ್ಕೆ ಸಾಗಾಟ:ಮಂಜೇಶ್ವರ ಜನತೆ ಸಂಕಷ್ಟದಲ್ಲಿ


Jan-04-2013
ಮಂಜೇಶ್ವರ:ಮಂಜೇಶ್ವರ,ಕುಂಜತ್ತೂರು ತೂಮಿನಾಡು ಪ್ರದೇಶಗಳಲ್ಲಿ ಕೆಂಪು ಕಲ್ಲುಗಳು ಸರಾಗವಾಗಿ ಕರ್ನಾಟಕಕ್ಕೆ ಸಾಗಾಟವಾಗುತಿದ್ದು ಇದರಿಂದಾಗಿ ಸ್ಥಳಿಯರಿಗೆ ಕೆಂಪು ಕಲ್ಲಿನ ಅಭಾವವಾಗಿದೆ ಇದರಿಂದ ಇಲ್ಲಿಯ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ.ಈ ಪ್ರದೇಶದ ಕೋರೆಗಳಿಂದ ಕಡಿದ ಕಲ್ಲುಗಳಿಗೆ ಕರ್ನಾಟಕದಲ್ಲಿ ದುಪ್ಪಟು ಬೆಲೆ ಲಭಿಸುವುದರಿಂದ ಕೋರೆಗಳಿಂದ ಕಡಿದ ಕಲ್ಲುಗಳು ನೆರವಾಗಿ ಕರ್ನಾಟಕ್ಕೆ ಸಾಗಿಸಲ್ಪಡುತ್ತದೆ.ಕೆಂಪು ಕಲ್ಲಿನ ಅಭಾವದಿಂದ ಈ ಪ್ರದೇಶಗಳಲಿ ಕೆಂಪು ಕಲ್ಲು ಬೆಲೆ ಗಗನದತ್ತ ಏರುವ ಸಾಧ್ಯತೆ ಕೂಡಾ ಇದೆ.ಕೆಂಪು ಕಲ್ಲುಗಳು ಸರಿಯಾಗಿ ಲಭಿಸದೆ ಇರುವುದರಿಂದ ಈ ಪ್ರದೇಶದಲ್ಲಿರುವ ಮನೆಗಳ ಸಹಿತ ಹಲವು ಕಟ್ಟಡ ನಿರ್ಮಾಣ ಕಾರ್ಯಗಳು ಅರ್ಧಲ್ಲೇ ಮೊಟಕುಗೊಂಡಿವೆ.ಈ ಬಗ್ಗೆ ಸಾರ್ವಜನಿಕರು ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಧಿಕಾರಿಗಳು ಮೌನದಿಂದ ಎಚ್ಚೆತ್ತಿಲ್ಲವೆಂಬುದಾಗಿ ನಾಗರಿಕರ ಆರೋಪ ಇದೀಗ ನಾಗರಿಕರು ಅಧಿಕಾರಿಗಳ ವಿರುದ್ದ ಪ್ರತಿಭಟಿಸಲು ನಾಗರಿಕ ಕ್ರಿಯಾ ಸಮಿತಿ ರೂಪಿಸಿ ಕೆಂಪು ಕಲ್ಲು ಕರ್ನಾಟಕಕ್ಕೆ ಸಾಗಾಟದ ವಿರುದ್ದ ಚಳವಳಿಯನ್ನೇ ಆರಂಭಿಸುವುದಾಗಿ ತಿಳಿದು ಬಂದಿದೆ. 

No comments:

Post a Comment