Monday, January 7, 2013

ಖಾಸಗಿ ಬಸ್ ಕಾರ್ಮಿಕ ರ ಮುಷ್ಕರದಿಂದ ಮಂಜೇಶ್ವರದ ಪ್ರಯಾಣಿಕರು ತೀವ್ರ ಸಂಕಷ್ಟದಲ್ಲಿ

Jan-07-2013
ಮಂಜೇಶ್ವರ:ಕಾರ್ಮಿಕರಿಗೆ ವೇತನ ಹೆಚ್ಚಿಸಬೇಕೆಂಬ ಪ್ರಧಾನ ಬೇಡಿಕೆಯನ್ನು ಮುಂದಿಟ್ಟು ಇಂದು ಬಸ್ ಕಾರ್ಮಿಕರು ಆರಂಭಿಸಿದ ಅನಿರ್ಧಿಷ್ಟಾವಧಿ ಮುಷ್ಕರದಿಂದಾಗಿ ವಿದ್ಯಾರ್ಥಿಗಳು ವೃದ್ದರು ಸೇರಿದಂತೆ ಹಲವಾರು ಪ್ರಯಾಣಿಕರು ತೀವೃ ಸಂಕಷ್ಟಕ್ಕೊಳಗಾದರು.ಮಂಜೇಶ್ವರದ ಗ್ರಾಮೀಣ ಪ್ರದೇಶಗಳಲ್ಲಿ ನೌಕರುಗಳು ಹಾಗು ವಿದ್ಯಾರ್ಥಿಗಳು ಪರದಾಡುತ್ತಿರುವ ದೃಶ್ಯ ಕಂಡು ಬಂತು.ಗ್ರಾಮೀಣ ಪ್ರದೇಶಗಳಿಗೆ ಹೊರ ರಾಜ್ಯಗಳಿಂದ ಬಂದ ಯಾತ್ರಿಕರು ಕೂಡಾ ಬಸ್ಸಿಲ್ಲದೆ ಪರದಾಡುತಿದ್ದರು.ಮಂಜೇಶ್ವರದ ಒಳಗಿನ ಪೇಟೆಯಿಂದ ಇಂದು ಕೆಲವು ಖಾಸಗಿ ಬಸ್ಸುಗಳು ಸಂಚಾರ ನಡೆಸಿದ್ದರು ಕೆಲವೇ ಹೊತ್ತಿನಲ್ಲಿ ಈ ಬಸ್ಸುಗಳು ಕೂಡಾ ಮುಷ್ಕರದಲ್ಲಿ ಪಾಲ್ಗೊಂಡವು.ಕೇರಳ ಹಾಗು ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳು ಎಂದಿನಂತೆ ಓಡಾಡುತಿದ್ದ ದೃಶ್ಯ ಕಂಡು ಬಂತು.ಆದರೆ ಈ ಬಸ್ಸುಗಳಲ್ಲಿ ಕನಿಷ್ಠ ನಿಂತು ಕೂಡಾ ಪ್ರಯಾಣಿಸಲು ಸಾಧ್ಯವಾಗದ ರೀತಿಯ ನಿಬಿಡತೆ ಕಂಡು ಬಂತು.ಇವತ್ತಿನ ಮುಷ್ಕರದಿಂದಾಗಿ ಪ್ರಯಾಣಿಕರು ಅತೀವ ಸಂಕಷ್ಟದಿಂದ ಚಡ ಪಡಿಸುತಿದ್ದರೂ ಸರ್ಕಾರಿ ಬಸ್ಸುಗಳಲ್ಲಿ ಯಾವುದೇ ಹೆಚ್ಚಳ ಕಂದು ಬಂದಿಲ್ಲ.ಮಂಜೇಶ್ವರದ ಒಳಗಿನ ಪೇಟೆಯಲ್ಲಿ ಕರ್ನಾಟದ ಮಾಜಿ ಮುಖ್ಯ ಗುಂಡೂರಾಯರ ಕಾಲದಲ್ಲಿ ಓಡಾಟ ಆರಂಭಿಸಿದ್ದ ಸರಕಾರೀ ಬಸ್ಸು ಯಾವುದೇ ಅಡಚಣೆ ಇಲ್ಲದೆ ಓಡಾಡುತ್ತಿರುವುದು ಕಂಡು ಬಂತು.

No comments:

Post a Comment