Saturday, January 19, 2013

ಉದ್ಯಾವರ ಇರ್ಷಾದ್ ಮಸೀದಿ ಬಳಿ ಸರಣಿ ಅಫಘಾತ

ಮಂಜೇಶ್ವರ:ಮಿತಿಮೀರಿದ ವೇಗದಿಂದ ಬರುತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಲಾರಿ ಚಾಲಕ ಕಾರನ್ನು ತಪ್ಪಿಸಲು ಪ್ರಯತ್ನಿಸಿ ವಿದ್ಯುತ್ ಕಂಬಕ್ಕೆ ಬಡಿದು ವಿದ್ಯುತ್ ಕಂಬ ಹಾಗು ತಂತಿಗಳು ಇನ್ನೊಂದು ಕಾರಿಗೆ ಬಿದ್ದು ಸರಣಿ ಅಫಘಾತ ಸಂಭವಿಸಿದ ಘಟನೆ ಇಲ್ಲಿಗೆ ಸಮೀಪದ ಉದ್ಯಾವರ ಇರ್ಷಾದ್  ಮಸೀದಿಯ ಸಮೀಪದಿಂದ ವರದಿಯಾಗಿದೆ,
ಇಂದು ಮದ್ಯಾಹ್ನ ಮಂಗಳೂರಿನಿಂದ ಉಪ್ಪಳ ಕಡೆ ಆಗಮಿಸುತಿದ್ದ ಕೆ..19 ಎಂ.ಬಿ.6219 ಕಾರಿನ ಚಾಲಕನಾಗಿದ್ದ ಫರ್ಹಾಜ್ ತನ್ನ ಅಜಾಗರೂಕತೆಯಿಂದ ಮಿತಿ ಮೀರಿದ ವೇಗದಿಂದ ಬಂದು ಉದ್ಯಾವರ ಇರ್ಷಾದ್ ಬಳಿ ಎದುರಿನಲ್ಲಿ ಚಲಿಸುತಿದ್ದ ಕಾರೊಂದನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸುವಾಗ ಎದುರಿನಿಂದ ಕಲ್ಲನ್ನು ಹೇರ್ಕೊಂಡು ಬರುತಿದ್ದ ಲಾರಿಗೆ ಡಿಕ್ಕಿ ಹೊಡೆದು ಸರಣಿ ಅಫಘಾತ ಸಂಭವಿಸಿದೆ.ಸರಣಿ ಅಫಘಾತದಲ್ಲಿ ಹಿಂದಿನಿಂದ ಆಗಮಿಸುತಿದ್ದ ಕಾರೊಂದಕ್ಕೆ ವಿದ್ಯುತ್ ಕಂಬ ಹಾಗು ತಂತಿ ಬಿದ್ದು ಅದೃಷ್ಟವಷಾತ್ ಎಲ್ಲಾ ಪ್ರಯಾಣಿಕರು ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ತಾಸು ಕಾಲ ಸಂಚಾರಕ್ಕೆ ತಡೆ ಉಂಟಾಯ್ತು ನಂತ್ರ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ರಸ್ತೆಯನ್ನು ಸುಗಮ ಗೊಳಿಸಿದರು

No comments:

Post a Comment