Tuesday, January 1, 2013

ಹೊಸ ವರ್ಷ ಶುಭವನ್ನು ತರಲಿ- ಜನವರಿ -01-2013

ಹೊಸ ವರ್ಷ ಶುಭವನ್ನು ತರಲಿ
2012 ನ್ನು ನಾವು ರಾತ್ರೋ ರಾತ್ರಿ, ಎಲ್ಲರೂ ಮಲಗಿರುವ ಹೊತ್ತಿಗೆ ದಫನ ಮಾಡಿದ್ದೇವೆ. ಸಾಕ್ಷಿಗಳೇ ಇಲ್ಲದ ಹಾಗೆ. ದಿಲ್ಲಿಯಲ್ಲಿ ಬರ್ಬರ ಅತ್ಯಾಚಾರಕ್ಕೀಡಾಗಿ ಸತ್ತು ಹೋದ ಹೆಣ್ಣುಮಗಳನ್ನು ಸರಕಾರ ಸುಟ್ಟು ಹಾಕಿದ ಹಾಗೆ. ಅಥವಾ, ಧರ್ಮಪುರಿಯಲ್ಲಿ ದಲಿತರ ಮೇಲೆ ನಡೆದ ಭಾರೀ ದೌರ್ಜನ್ಯ ಗಳನ್ನು ಮಾಧ್ಯಮಗಳು ಗುಟ್ಟಾಗಿ ಸುಟ್ಟು ಹಾಕಿದ ಹಾಗೆ. ಅಥವಾ, ಗುಜರಾತ್‌ನ ಅತ್ಯಾಚಾರಗಳ ಪಳೆಯುಳಿಕೆಯನ್ನು ಅಭಿವೃದ್ಧಿಯ ಹೊಂಡದಲ್ಲಿ ಮುಚ್ಚಿ ಮೋದಿಯವರನ್ನು ಮತ್ತೆ ಗೆಲ್ಲಿಸಿದ ಹಾಗೆ. ಅಥವಾ ಫೆಲೆಸ್ತೀನ್‌ನ ಅಮಾಯಕ ಮಕ್ಕಳ ಮೇಲೆ ಕ್ಷಿಪಣಿಗಳನ್ನು ಎರಚಿದ ಇಸ್ರೇಲನ್ನು ಅಮೆರಿಕ ಬೆನ್ನು ತಟ್ಟಿದ ಹಾಗೆ. 2012ನ್ನು ನಾವು ದೂಡಿ ಹಾಕಿದ್ದೇವೆ. ಅಮೆರಿಕದಲ್ಲಿ, ಮುಸ್ಲಿಮ್ ಎಂಬ ಕಾರಣಕ್ಕೇ ಒಬ್ಬನನ್ನು ಮಹಿಳೆಯೊಬ್ಬಳು ರೈಲಿನಿಂದ ದೂಡಿ ಹಾಕಿದ ಹಾಗೆ. 2012ನ್ನು ಕೊಂದು ಹಾಕಿದ್ದೇವೆ. ಅಮೆರಿಕದ ಶಾಲೆಯೊಂದರಲ್ಲಿ ಎಳೆ ಕಂದಮ್ಮಗಳ ಮೇಲೆ ಯುವಕನೊಬ್ಬ ಗುಂಡು ಹಾರಿಸಿ ಕೊಂದ ಹಾಗೆ. 2012ರ ಮೇಲೆ ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳು ಮತ್ತೆ ಮತ್ತೆ ಸಾಮೂಹಿಕ ಅತ್ಯಾಚಾರ ಗೈದಿವೆ. ಅವೆಲ್ಲವುಗಳು ಭಯೋತ್ಪಾದಕರ ದಮನ, ಅಭಿವೃದ್ಧಿ ಎಂಬಿತ್ಯಾದಿ ಹೆಸರಿನಲ್ಲಿ ಮುಚ್ಚಿ ಹೋಗಿವೆ.
ಹೌದು. 2012 ಮಾನವ ಹಕ್ಕು ಉಲ್ಲಂಘನೆ ವಿಜೃಂಭಿಸಿದ ಕಾಲ. ಈ ವರ್ಷವೂ ವಿಶ್ವದ ಪಾಲಿಗೆ ನೆಮ್ಮದಿಯನ್ನು ತರಲಿಲ್ಲ. ಫೆಲೆಸ್ತೀನಿಯರ ಕಣ್ಣೀರನ್ನು ಒರೆಸುವಲ್ಲಿ ಸಫಲವಾಗಲಿಲ್ಲ. ಗುಜರಾತ್ ಸಂತ್ರಸ್ತರಿಗೆ ನ್ಯಾಯ ಸಿಗಲಿಲ್ಲ. ದಲಿತರ ಮೇಲಿನ ದೌರ್ಜನ್ಯ ಕೊನೆಯಾಗಲಿಲ್ಲ. ಇವೆಲ್ಲಕ್ಕೂ ಒಂದು ರುದ್ರ ರೂಪಕವಾಗಿ ದಿಲ್ಲಿಯಲ್ಲಿ ತರುಣಿಯ ಮೇಲೆ ಅತ್ಯಾಚಾರ ನಡೆಯಿತು. ಅವಳ ಸಾವೂ ಸಂಭವಿಸಿತು. ವಿಪರ್ಯಾಸವೆಂದರೆ, ಇದೇ ಹೊತ್ತಿಗೆ ಗುಜರಾತ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಹೊಣೆಯನ್ನು ಹೊತ್ತುಕೊಳ್ಳಬೇಕಾದ ನರೇಂದ್ರ ಮೋದಿ ಮತ್ತೆ ಮುಖ್ಯಮಂತ್ರಿ ಯಾಗಿ ಆಯ್ಕೆಯಾದರು. ಈ ಎಲ್ಲ ವಿಷಾದ, ವಿಪರ್ಯಾಸಗಳ ಜೊತೆಗೆ 2012ನ್ನು ದಾಟಿ ಹೊಸವರ್ಷದ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದೇವೆ.
 ಹೊಸ ವರ್ಷವೆನ್ನುವುದು ಒಂದು ನಂಬಿಕೆ. ಕೆಲವರಿಗದು ಮೂಢನಂಬಿಕೆ. ಇನ್ನು ಕೆಲವರಿಗೆ ತುಂಡು, ಗುಂಡು ಹಾಕಿ ಮಜಾ ಮಾಡಲು ಒಂದು ನೆಪ. ಯಾವತ್ತೂ ಮನುಷ್ಯ ಹೊಸತೊಂದನ್ನು ಕಟ್ಟುವ, ಹೊಸ ಆಲೋಚನೆಗಳನ್ನು ಹುಟ್ಟು ಹಾಕುವ ನಿರ್ಧಾರ ಮಾಡಿದ ದಿನವೇ ಜಗತ್ತಿಗೆ ಹೊಸ ವರ್ಷ. ಬದಲಾವಣೆ ಗಳಿಲ್ಲದ, ಹೊಸತನಗಳಿಲ್ಲದ ಜನವರಿ 1 ಬರೇ ಲೆಕ್ಕಾಚಾರಕ್ಕಷ್ಟೇ ಹೊಸ ವರ್ಷ. ಉಳಿದಂತೆ ಅದೇ ಸೂರ್ಯ, ಅದೇ ಹಗಲು ಮತ್ತು ಅದೇ ಅತ್ಯಾಚಾರ, ದೌರ್ಜನ್ಯ ಇತ್ಯಾದಿ. ಆದುದರಿಂದ 2012 ಬದಲಾಗಿ 13 ಆಗುವುದನ್ನೇ ನಾವು ಹೊಸ ವರ್ಷವೆಂದು ಕರೆಯಲಾಗುವುದಿಲ್ಲ. ಈ ಸಂದರ್ಭದಲ್ಲಿ ನಮ್ಮಲ್ಲೂ ಹೊಸತನ ಮೂಡಬೇಕು. ನಮ್ಮಲ್ಲೂ ಬದಲಾವಣೆ ಗಳಾಗಬೇಕು. ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮನುಷ್ಯರಾಗುವುದಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು. ಆಗ ಮಾತ್ರ ಈ ವರ್ಷಾಚರಣೆಗೆ ಅರ್ಥ ಬರುತ್ತದೆ.
ಕನಿಷ್ಠ ಹೊಸ ವರ್ಷವನ್ನು ಅನಿಷ್ಟಗಳ ಜೊತೆಗೆ ಸ್ವಾಗತಿಸದೆ ಇದ್ದರೆ ಅದೇ ನಾವು 2013ಕ್ಕೆ ನೀಡುವ ಅತಿ ದೊಡ್ಡ ಗೌರವ. ಸಾಧಾರಣವಾಗಿ ವರ್ಷಾಚರಣೆಯ ನೆಪದಲ್ಲಿ ನಡೆಯುವ ಅನಾಹುತಗಳು ಒಂದೆರಡಲ್ಲ. ಕುಡಿತ ತನ್ನ ಕಟ್ಟೆಯನ್ನು ಒಡೆದುಕೊಳ್ಳುವುದು ಇದೇ ಸಂದರ್ಭದಲ್ಲಿ. ಹೊಸ ವರ್ಷದ ಹೆಸರಲ್ಲಿ ಕುಡಿದು ವಾಹನವನ್ನು ಓಡಿಸಿ ನಡೆಯುವ ಅಪಘಾತಗಳಿಗೆ ಲೆಕ್ಕವೇ ಇಲ್ಲ. ಹೊಸ ವರ್ಷದಲ್ಲೇ ಪ್ರಾಣವನ್ನು ಕಳೆದುಕೊಳ್ಳುವವ ರಿದ್ದಾರೆ. ಶಾಶ್ವತವಾಗಿ ಅಂಗವಿಕಲರಾದವರಿ ದ್ದಾರೆ. ಹಾಗೆಯೇ ಪಾನಮತ್ತರಾಗಿ ವಿವೇಕವನ್ನು ಕಳೆದುಕೊಂಡು ಅತ್ಯಾಚಾರ ದಂತಹ ಕೃತ್ಯವನ್ನು ಎಸಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಹೊಸ ವರ್ಷವೆಂದರೆ ಕಾನೂನನ್ನು ಉಲ್ಲಂಘಿಸಲು ಸಿಕ್ಕಿರುವ ಪರವಾನಿಗೆ ಎಂದೇ ಯುವಕರು ತಿಳಿದಂತಿದೆ. ಇದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎನ್ನುವುದು ಅರಿವಾಗು ವಾಗ ಸಮಯ ಮೀರಿರುತ್ತದೆ.
2013 ಈ ಜಗತ್ತಿಗೆ ವಿವೇಕ ತರುವ ವರ್ಷವಾಗಲಿ. ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಸಿಗಲಿ. ಅತ್ಯಾಚಾರದ ವಿರುದ್ಧ ಒಂದು ಕಠಿಣ ಕಾನೂನು ಈ ವರ್ಷದಲ್ಲಿ ಜಾರಿಗೆ ಬರಲಿ. ನೊಂದ ದಲಿತರಿಗೆ ನ್ಯಾಯ ಸಿಗಲಿ. ಭ್ರಷ್ಟ ರಾಜಕಾರಣಿಗಳೆಲ್ಲ ಜೈಲು ಸೇರಲಿ. ಫೆಲೆಸ್ತೀನಿಯರ ತಾಯ್ನಾಡಿನ ಕನಸು ಈಡೇರಲಿ. ಅಮೆರಿಕಕ್ಕೆ ದೇವರು ವಿವೇಕ ವನ್ನು ನೀಡಲಿ. ನಮ್ಮ ಪರಿಸರ, ನದಿ, ನೀರು ಮುಂದಿನ ತಲೆಮಾರಿಗೂ ಒದಗುವಂತೆ ಜಗತ್ತಿನಲ್ಲಿ ಜಾಗೃತಿ ಮೂಡಲಿ. ಹೊಸ ವರ್ಷ ಎಲ್ಲರಿಗೂ ಶುಭವನ್ನು ತರಲಿ.
2012 ನ್ನು ನಾವು ರಾತ್ರೋ ರಾತ್ರಿ, ಎಲ್ಲರೂ ಮಲಗಿರುವ ಹೊತ್ತಿಗೆ ದಫನ ಮಾಡಿದ್ದೇವೆ. ಸಾಕ್ಷಿಗಳೇ ಇಲ್ಲದ ಹಾಗೆ. ದಿಲ್ಲಿಯಲ್ಲಿ ಬರ್ಬರ ಅತ್ಯಾಚಾರಕ್ಕೀಡಾಗಿ ಸತ್ತು ಹೋದ ಹೆಣ್ಣುಮಗಳನ್ನು ಸರಕಾರ ಸುಟ್ಟು ಹಾಕಿದ ಹಾಗೆ. ಅಥವಾ, ಧರ್ಮಪುರಿಯಲ್ಲಿ ದಲಿತರ ಮೇಲೆ ನಡೆದ ಭಾರೀ ದೌರ್ಜನ್ಯ ಗಳನ್ನು ಮಾಧ್ಯಮಗಳು ಗುಟ್ಟಾಗಿ ಸುಟ್ಟು ಹಾಕಿದ ಹಾಗೆ. ಅಥವಾ, ಗುಜರಾತ್‌ನ ಅತ್ಯಾಚಾರಗಳ ಪಳೆಯುಳಿಕೆಯನ್ನು ಅಭಿವೃದ್ಧಿಯ ಹೊಂಡದಲ್ಲಿ ಮುಚ್ಚಿ ಮೋದಿಯವರನ್ನು ಮತ್ತೆ ಗೆಲ್ಲಿಸಿದ ಹಾಗೆ. ಅಥವಾ ಫೆಲೆಸ್ತೀನ್‌ನ ಅಮಾಯಕ ಮಕ್ಕಳ ಮೇಲೆ ಕ್ಷಿಪಣಿಗಳನ್ನು ಎರಚಿದ ಇಸ್ರೇಲನ್ನು ಅಮೆರಿಕ ಬೆನ್ನು ತಟ್ಟಿದ ಹಾಗೆ. 2012ನ್ನು ನಾವು ದೂಡಿ ಹಾಕಿದ್ದೇವೆ. ಅಮೆರಿಕದಲ್ಲಿ, ಮುಸ್ಲಿಮ್ ಎಂಬ ಕಾರಣಕ್ಕೇ ಒಬ್ಬನನ್ನು ಮಹಿಳೆಯೊಬ್ಬಳು ರೈಲಿನಿಂದ ದೂಡಿ ಹಾಕಿದ ಹಾಗೆ. 2012ನ್ನು ಕೊಂದು ಹಾಕಿದ್ದೇವೆ. ಅಮೆರಿಕದ ಶಾಲೆಯೊಂದರಲ್ಲಿ ಎಳೆ ಕಂದಮ್ಮಗಳ ಮೇಲೆ ಯುವಕನೊಬ್ಬ ಗುಂಡು ಹಾರಿಸಿ ಕೊಂದ ಹಾಗೆ. 2012ರ ಮೇಲೆ ಅಮೆರಿಕದಂತಹ ಶ್ರೀಮಂತ ರಾಷ್ಟ್ರಗಳು ಮತ್ತೆ ಮತ್ತೆ ಸಾಮೂಹಿಕ ಅತ್ಯಾಚಾರ ಗೈದಿವೆ. ಅವೆಲ್ಲವುಗಳು ಭಯೋತ್ಪಾದಕರ ದಮನ, ಅಭಿವೃದ್ಧಿ ಎಂಬಿತ್ಯಾದಿ ಹೆಸರಿನಲ್ಲಿ ಮುಚ್ಚಿ ಹೋಗಿವೆ.
ಹೌದು. 2012 ಮಾನವ ಹಕ್ಕು ಉಲ್ಲಂಘನೆ ವಿಜೃಂಭಿಸಿದ ಕಾಲ. ಈ ವರ್ಷವೂ ವಿಶ್ವದ ಪಾಲಿಗೆ ನೆಮ್ಮದಿಯನ್ನು ತರಲಿಲ್ಲ. ಫೆಲೆಸ್ತೀನಿಯರ ಕಣ್ಣೀರನ್ನು ಒರೆಸುವಲ್ಲಿ ಸಫಲವಾಗಲಿಲ್ಲ. ಗುಜರಾತ್ ಸಂತ್ರಸ್ತರಿಗೆ ನ್ಯಾಯ ಸಿಗಲಿಲ್ಲ. ದಲಿತರ ಮೇಲಿನ ದೌರ್ಜನ್ಯ ಕೊನೆಯಾಗಲಿಲ್ಲ. ಇವೆಲ್ಲಕ್ಕೂ ಒಂದು ರುದ್ರ ರೂಪಕವಾಗಿ ದಿಲ್ಲಿಯಲ್ಲಿ ತರುಣಿಯ ಮೇಲೆ ಅತ್ಯಾಚಾರ ನಡೆಯಿತು. ಅವಳ ಸಾವೂ ಸಂಭವಿಸಿತು. ವಿಪರ್ಯಾಸವೆಂದರೆ, ಇದೇ ಹೊತ್ತಿಗೆ ಗುಜರಾತ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಹೊಣೆಯನ್ನು ಹೊತ್ತುಕೊಳ್ಳಬೇಕಾದ ನರೇಂದ್ರ ಮೋದಿ ಮತ್ತೆ ಮುಖ್ಯಮಂತ್ರಿ ಯಾಗಿ ಆಯ್ಕೆಯಾದರು. ಈ ಎಲ್ಲ ವಿಷಾದ, ವಿಪರ್ಯಾಸಗಳ ಜೊತೆಗೆ 2012ನ್ನು ದಾಟಿ ಹೊಸವರ್ಷದ ಶುಭಾಶಯಗಳನ್ನು ಹಂಚಿಕೊಳ್ಳುತ್ತಿದ್ದೇವೆ. 
ಹೊಸ ವರ್ಷವೆನ್ನುವುದು ಒಂದು ನಂಬಿಕೆ. ಕೆಲವರಿಗದು ಮೂಢನಂಬಿಕೆ. ಇನ್ನು ಕೆಲವರಿಗೆ ತುಂಡು, ಗುಂಡು ಹಾಕಿ ಮಜಾ ಮಾಡಲು ಒಂದು ನೆಪ. ಯಾವತ್ತೂ ಮನುಷ್ಯ ಹೊಸತೊಂದನ್ನು ಕಟ್ಟುವ, ಹೊಸ ಆಲೋಚನೆಗಳನ್ನು ಹುಟ್ಟು ಹಾಕುವ ನಿರ್ಧಾರ ಮಾಡಿದ ದಿನವೇ ಜಗತ್ತಿಗೆ ಹೊಸ ವರ್ಷ. ಬದಲಾವಣೆ ಗಳಿಲ್ಲದ, ಹೊಸತನಗಳಿಲ್ಲದ ಜನವರಿ 1 ಬರೇ ಲೆಕ್ಕಾಚಾರಕ್ಕಷ್ಟೇ ಹೊಸ ವರ್ಷ. ಉಳಿದಂತೆ ಅದೇ ಸೂರ್ಯ, ಅದೇ ಹಗಲು ಮತ್ತು ಅದೇ ಅತ್ಯಾಚಾರ, ದೌರ್ಜನ್ಯ ಇತ್ಯಾದಿ. ಆದುದರಿಂದ 2012 ಬದಲಾಗಿ 13 ಆಗುವುದನ್ನೇ ನಾವು ಹೊಸ ವರ್ಷವೆಂದು ಕರೆಯಲಾಗುವುದಿಲ್ಲ. ಈ ಸಂದರ್ಭದಲ್ಲಿ ನಮ್ಮಲ್ಲೂ ಹೊಸತನ ಮೂಡಬೇಕು. ನಮ್ಮಲ್ಲೂ ಬದಲಾವಣೆ ಗಳಾಗಬೇಕು. ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಮನುಷ್ಯರಾಗುವುದಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು. ಆಗ ಮಾತ್ರ ಈ ವರ್ಷಾಚರಣೆಗೆ ಅರ್ಥ ಬರುತ್ತದೆ.
ಕನಿಷ್ಠ ಹೊಸ ವರ್ಷವನ್ನು ಅನಿಷ್ಟಗಳ ಜೊತೆಗೆ ಸ್ವಾಗತಿಸದೆ ಇದ್ದರೆ ಅದೇ ನಾವು 2013ಕ್ಕೆ ನೀಡುವ ಅತಿ ದೊಡ್ಡ ಗೌರವ. ಸಾಧಾರಣವಾಗಿ ವರ್ಷಾಚರಣೆಯ ನೆಪದಲ್ಲಿ ನಡೆಯುವ ಅನಾಹುತಗಳು ಒಂದೆರಡಲ್ಲ. ಕುಡಿತ ತನ್ನ ಕಟ್ಟೆಯನ್ನು ಒಡೆದುಕೊಳ್ಳುವುದು ಇದೇ ಸಂದರ್ಭದಲ್ಲಿ. ಹೊಸ ವರ್ಷದ ಹೆಸರಲ್ಲಿ ಕುಡಿದು ವಾಹನವನ್ನು ಓಡಿಸಿ ನಡೆಯುವ ಅಪಘಾತಗಳಿಗೆ ಲೆಕ್ಕವೇ ಇಲ್ಲ. ಹೊಸ ವರ್ಷದಲ್ಲೇ ಪ್ರಾಣವನ್ನು ಕಳೆದುಕೊಳ್ಳುವವ ರಿದ್ದಾರೆ. ಶಾಶ್ವತವಾಗಿ ಅಂಗವಿಕಲರಾದವರಿ ದ್ದಾರೆ. ಹಾಗೆಯೇ ಪಾನಮತ್ತರಾಗಿ ವಿವೇಕವನ್ನು ಕಳೆದುಕೊಂಡು ಅತ್ಯಾಚಾರ ದಂತಹ ಕೃತ್ಯವನ್ನು ಎಸಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಹೊಸ ವರ್ಷವೆಂದರೆ ಕಾನೂನನ್ನು ಉಲ್ಲಂಘಿಸಲು ಸಿಕ್ಕಿರುವ ಪರವಾನಿಗೆ ಎಂದೇ ಯುವಕರು ತಿಳಿದಂತಿದೆ. ಇದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎನ್ನುವುದು ಅರಿವಾಗು ವಾಗ ಸಮಯ ಮೀರಿರುತ್ತದೆ.2013 ಈ ಜಗತ್ತಿಗೆ ವಿವೇಕ ತರುವ ವರ್ಷವಾಗಲಿ. ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ಸಿಗಲಿ. ಅತ್ಯಾಚಾರದ ವಿರುದ್ಧ ಒಂದು ಕಠಿಣ ಕಾನೂನು ಈ ವರ್ಷದಲ್ಲಿ ಜಾರಿಗೆ ಬರಲಿ. ನೊಂದ ದಲಿತರಿಗೆ ನ್ಯಾಯ ಸಿಗಲಿ. ಭ್ರಷ್ಟ ರಾಜಕಾರಣಿಗಳೆಲ್ಲ ಜೈಲು ಸೇರಲಿ. ಫೆಲೆಸ್ತೀನಿಯರ ತಾಯ್ನಾಡಿನ ಕನಸು ಈಡೇರಲಿ. ಅಮೆರಿಕಕ್ಕೆ ದೇವರು ವಿವೇಕ ವನ್ನು ನೀಡಲಿ. ನಮ್ಮ ಪರಿಸರ, ನದಿ, ನೀರು ಮುಂದಿನ ತಲೆಮಾರಿಗೂ ಒದಗುವಂತೆ ಜಗತ್ತಿನಲ್ಲಿ ಜಾಗೃತಿ ಮೂಡಲಿ. ಹೊಸ ವರ್ಷ ಎಲ್ಲರಿಗೂ ಶುಭವನ್ನು ತರಲಿ.

No comments:

Post a Comment