Tuesday, January 1, 2013

ಹಗರಣಗಳ ವರ್ಷ


- ಜನವರಿ -01-2013

ಕಳೆದ ವರ್ಷ ದೇಶದಲ್ಲಿ ಕೋಲಾಹಲವೆಬ್ಬಿಸಿದ 2ಜಿ ಹಗರಣ ಹಾಗೂ ಕಾಮನ್‌ವೆಲ್ತ್ ಹಗರಣದ ಕಾವು ಇನ್ನೂ ತಣಿಯದಿರುವಾಗಲೇ 2012ರಲ್ಲಿ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಬಯಲಿಗೆ ಬಂದಿತು.
2004ರಿಂದ 2009ರವರೆಗೆ ಕೇಂದ್ರ ಸರಕಾರವು ಖಾಸಗಿ ಕಂಪೆನಿಗಳಿಗೆ ದೇಶದ ಕಲ್ಲಿದ್ದಲು ನಿಕ್ಷೇಪಗಳನ್ನು ಭಾರೀ ಕಡಿಮೆ ಬೆಲೆಗೆ ಹಂಚಿಕೆ ಮಾಡಿದ ಪರಿಣಾಮವಾಗಿ ಬೊಕ್ಕಸಕ್ಕೆ 3 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆಯೆಂದು ಸಿಎಜಿ ವರದಿ ಬಹಿರಂಗಪಡಿಸಿತ್ತು.
ಕಲ್ಲಿದ್ದಲು ಹಗರಣವು ಬಯಲಿಗೆ ಬಂದ ಬೆನ್ನಲ್ಲೇ ಪ್ರತಿಪಕ್ಷಗಳು ಹಗರಣದ ಬಗ್ಗೆ ಸಂಸದೀಯ ತನಿಖೆಗೆ ಸಂಸತ್‌ನಲ್ಲಿ ಪಟ್ಟುಹಿಡಿದು ಗದ್ದಲವೆಬ್ಬಿಸಿದ ಪರಿಣಾಮವಾಗಿ ಮುಂಗಾರು ಅಧಿವೇಶನದ ಬಹುತೇಕ ಕಲಾಪಗಳು ವ್ಯರ್ಥಗೊಂಡವು.

No comments:

Post a Comment