Tuesday, January 22, 2013

ಪಿಕ್‌ನಿಕ್ ಶುಲ್ಕ ಪಾವತಿಸಲು ವಿಫಲ: 7ನೆ ತರಗತಿಯ ಬಾಲಕನ ಆತ್ಮಹತ್ಯೆ ಜನವರಿ -22-2013

ಬೆರ್ಹಂಪುರ: ಶಾಲಾ ಮುಖ್ಯೋಪಾಧ್ಯಾಯರು ಸೂಚಿಸಿದ್ದ ಪಿಕ್‌ನಿಕ್ ಶುಲ್ಕವನನು ಪಾವತಿಸಲು ಪೋಷಕರು ವಿಫಲರಾಗಿದ್ದಕ್ಕೆ ನೊಂದ ಏಳನೆ ತರಗತಿಯ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಂಜಾಮ್ ಜಿಲ್ಲೆಯಲ್ಲಿ ವರದಿಯಾಗಿದೆ.
ಜಿಲ್ಲೆಯ ಗೊಬಾರದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿ ಬಲರಾಂ ನಾಯಕ್ ವ್ಯಾಸಂಗ ಮಾಡುತ್ತಿದ್ದ. ಆತ ಶನಿವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಗ್ರಾಮಸ್ಥರು ಆತನನ್ನು ಬದುಕಿಸುವ ಸಲುವಾಗಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ಸ್ಥಳೀಯರ ಪ್ರಕಾರ ಬಾಲಕನ ಕುಟುಂಬ ಕಡು ಬಡತನದಲ್ಲಿದೆ. ಆತನ ತಂದೆ ದಿನಗೂಲಿ ಮಾಡಿದರೆ, ತಾಯಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ ಎನ್ನಲಾಗಿದೆ.
ಬಾಲಕ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಆತನ ಪೋಷಕರು ಮತ್ತು ಅಜ್ಜ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಯಾವುದೇ ರೀತಿಯಲ್ಲಿ ಅಕ್ರಮವಾಗಿ ದೇಣಿಗೆ ಸಂಗ್ರಹಿಸುವಂತಿಲ್ಲ. ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯನನನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣನ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅವರು ಶಾಲಾ ಶಿಕ್ಷಕರನ್ನು ವಿಚಾರಣೆಗೊಳಪಡಿಸಲಿದ್ದಾರೆಂದು ಪೊಲೀರು ತಿಳಿಸಿದ್ಧಾ

No comments:

Post a Comment