Sunday, January 13, 2013

ರೈಲು,ರೈಲ್ವೇ ಪ್ಲಾಟ್ ಫಾರಂ ಗಳಲ್ಲಿ ಕಸ ಎಸೆದರೆ 500 ರೂ ಜುಲ್ಮಾನೆಮಂಜೇಶ್ವರ:ಇನ್ನು ಮುಂದೆ ರೈಲ್ವೇ ಬೋಗಿ,ರೈಲ್ವೇ ಹಳಿ ಹಾಗು ರೈಲ್ವೇ ಪ್ಲಾಟ್ ಫಾರಂಗಳಲ್ಲಿ ಕಸಗಳನ್ನು (ತ್ಯಾಜ್ಯ ವಸ್ಥುಗಳನ್ನು)ಬಿಸಾಡುವವರಿಗೆ ದಂಡ ವಸೂಲಿ ಮಾಡಲು ರೈಲ್ವೇ ಇಲಾಖೆ ನಿರ್ಧರಿಸಿದೆ
ಇಂತಹ ತಪ್ಪುಗಳನ್ನು ಎಸಗುವ ವ್ಯಕ್ತಿಗಳನ್ನು ಗುರುತಿಸಿ ಅವರಿಂದ ೫೦೦ ರೂ ಜುಲ್ಮಾನೆ ರೂಪದಲ್ಲಿ ವಸೂಲಿ ಮಾಡಲು ನಿರ್ಧರಿಸಿದೆ.ಇದರ ಹೊರತಾಗಿ ಪ್ಲಾಟ್ ಫಾರಮ್ ಗಳ ಗೋಡೆಗಳಲ್ಲಿ,ರೈಲ್ವೇ ಇಲಾಖೆಯ ಕಚೇರಿಯ ಕಂಬದಲ್ಲಿ ಅಥವಾ ಸಂಭಂಧಪಟ್ಟ ಇತರ ಸ್ಥಳಗಳಲ್ಲಿ ಪೋಸ್ಟರ್ ಅಂತಿಸಿದ್ದಲ್ಲಿ ಅಥವಾ ಏನಾದರೂ ಬರೆದಲ್ಲಿ ಜುಲ್ಮಾನೆ ಖಂಡಿತ.
ತ್ಯಾಜ್ಯ ಯಾ ಮಾಲಿನ್ಯಗಳನ್ನು ಎಸೆಯುದರ ಹೊರತಾಗಿ ರೈಲ್ವ್ಏ ಪ್ಲಾಟ್ ಫಾರಂ,ಹಾಗು ರೈಲ್ವೇ ಇಲಾಖೆಗೆ ಸಂಭಂಧಫಟ್ಟ ಇತರ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ,ಮಲ ವಿಸರ್ಜನೆ,ಅಡುಗೆ ಮಾಡುವುದು ಸ್ನಾನ ಮಾಡುವುದು ಉಗುಳುವುದು ಪ್ರಾಣಿ ಅಥವಾ ಪಕ್ಷಿಗಳಿಗೆ ಆಹಾರ ನೀಡುವುದು,ವಾಹನಗಳ ದುರಸ್ಥಿ ಕ್ಲೆಲಸ ಮಾಡಿಸುವುದು,ವಾಹನಗಳನ್ನು ತೊಳೆಯುವುದು, ಮೊದಲಾದ ರೀತಿಯ ಪ್ರವೃತಿಯನ್ನು ಎಸಗುವ ವ್ಯಕ್ತಿಗಳಿಗೆ ಜುಲ್ಮಾನೆ ಬಾಧಕವಾಗಿದೆ.
 ಆಯಾ ರೈಲು ನಿಲ್ದಾನಗಳ  ಮ್ಯಾನೇಜರ್,ಸ್ಟೇಶನ್ ಮಾಸ್ಟರ್,ಟಿಕೆಟ್ ಕಲಕ್ಟರ್,ಹಾಗು ಅವರಿಗಿಂತ ಮೇಲಿನ ಶ್ರೇಣಿಯ ರೈಲ್ವೇ ಅಧಿಕಾರಿಗಳನ್ನು ತಪ್ಪು ಎಸೆಗುವ ವ್ಯಕ್ತಿಗಳನ್ನು ಗುರುತಿಸಿ ದಂಡ ವಸೂಲಿ ಮಾಡುವ ಅಧಿಕಾರವನ್ನು ರೈಲ್ವೇ ಇಲಾಖೆ ಅವರಿಗೆ ನೀಡಿರುವುದಾಗಿ ತಿಳಿದು ಬಂದಿದೆ.

No comments:

Post a Comment