Wednesday, January 2, 2013

ಪತ್ರಕರ್ತನ ಕೊಲೆಗೆ ಯತ್ನ : ಆರೋಪಿಗಳ ವಿರುದ್ದ ಸೆಕ್ಷನ್ 308,324,323 ಪ್ರಕರಣ ದಾಖಲು

Jan-02-2013
ಮಂಜೇಶ್ವರ: : ಪ್ರಕರಣವೊಂದರ ವರದಿ ಮಾಡಲು ಆಸ್ಪತ್ರೆಗೆ ತೆರಳಿದ್ದ  ಪತ್ರಕರ್ತನನ್ನು ಅಡ್ಡಗಟ್ಟಿದ ಗೂಂಡಾ ತಂಡವೊಂದು ಹಲ್ಲೆ  ಗೈದು ಕೊಲೆಗೆ ಯತ್ನ ನಡೆಸಿದ ಬಗ್ಗೆ  ಉಪ್ಪಳದಿಂದ ವರದಿಯಾಗಿದೆ.ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಪತ್ರಕರ್ತ ಅನೀಶ್ ನನ್ನು ಮಂಜೇಶ್ವರ ಸರಕಾರಿ  ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಇಂದು ಸಂಜೆ ಉಪ್ಪಳದಲ್ಲಿ ಸಂಭವಿಸಿದ ಇರಿತ ಪ್ರಕರಣವೊಂದರಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹನೀಫ್ ಎಂಬವರ  ವರದಿ ಸಂಗ್ರಹಿಸಲು ಆಸ್ಪತ್ರೆಗೆ ತೆರಳಿದ್ದ ಪತ್ರಕರ್ತ ಅನೀಶ್ ನನ್ನು ಉಪ್ಪಳ ಹಿದಾಯತ್ ನಗರದ ಗೂಂಡಾ ತಂಡವೊಂದು ಅಡ್ಡಗಟ್ಟಿ ಹಲ್ಲೆಗೈದು ಕೊಲೆಗೆ ಯತ್ನನಡೆಸಿತು ಸಕಾಲದಲ್ಲಿ ಸ್ಥಳಕ್ಕೆ ತಲುಪಿದ ಮಂಜೇಶ್ಜ್ವರ ಪೊಲೀಸರ ನೆರವಿನಿಂದ ದುಷ್ಕರ್ಮಿಗಳಿಂದ ಅನೀಶ್ ನನ್ನು ಪಾರುಮಾಡಲಾಗಿದೆ.ಗಂಭೀರವಾಗಿ ತಲೆಗೆ ಪೆಟ್ಟು ಬಿದ್ದ ಅನೀಶ್ ನನ್ನು ಮಂಜೇಶ್ವರ ಆಸ್ಪತ್ರೆಗೆ ದಾಖಲಿಸಿ ಪ್ರಯೋಜನವಾಗದೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .ಪತ್ರಕರ್ತನ ಕೊಲೆಗೆ ಯತ್ನ ನಡೆಸಿದ ಆರೋಪಿಗಳನ್ನು ಉಪ್ಪಳ ಹಿದಾಯತ್ ನಗರ ನಿವಾಸಿ ಕಸಾಯಿ ಶರಿಪ್ಹ್ (32)ಕಸಾಯಿ ಲತೀಫ್(30) ಹಾಗು ಕಂಡರೆ ಪತ್ತೆಹಚ್ಚಬಹುದಾದಂತಹ 4 ವ್ಯಕ್ತಿಗಳ ನ್ನು ಗುರುತಿಸಲಾಗಿದ್ದು ಇವರ ವಿರುದ್ದ ಮಂಜೇಶ್ವರ ಪೊಲೀಸರು ಸೆಕ್ಷನ್ 308,324,323 ಕೇಸು ದಾಖಲಿಸಿರುತ್ತಾರೆ.ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಈ ಗೂಂಡಾ ತಂಡವು ಈ ಮೊದಲು ಕೂಡಾ ಇದೇ ಪತ್ರಕರ್ತನನ್ನು ಹಲ್ಲೆ ಗೈದು .ಈ ಬಗ್ಗೆ ಏನಾದರೂ  ಪೊಲೀಸ್ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಕೂಡಾ ನೀಡಿತ್ತು.ಅನೀಸ್ ನ ಮೇಲೆ ಗೂಂಡಾಗಳು  ನಡೆಸಿದ ಕೊಲೆ ಯತ್ನವನ್ನು ಮಂಜೇಶ್ವರ ಪ್ರೆಸ್ ಕ್ಲಬ್ ಖಂಡಿಸಿದ್ದು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಲು ಆಗ್ರಹಿಸಿದೆ  ಈ ಬಗ್ಗೆ  ಮಂಜೇಶ್ವರ ಪ್ರೆಸ್ ಕ್ಲಬ್ ನ ನೇತೃತ್ವದಲ್ಲಿ ನಾಳೆ ಸಂಜೆ 4 ಗಂಟೆಗೆ  ಉಪ್ಪಳ ಕೈಕಂಬದಲ್ಲಿ ಬೃಹತ್  ಸಾರ್ವಜನಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. 

No comments:

Post a Comment