Wednesday, January 16, 2013

ಜೋಡುಕಲ್ಲಿನಲ್ಲಿ 30 ಎಕ್ರೆ ಸ್ಥಳವನ್ನು ತನ್ನದಾಗಿಸಿಕೊಂಡ ಭೂರಹಿತರು



ಮಂಜೇಶ್ವರ:ಭೂಮಿ ಮನೆ ಇಲ್ಲದ ಭೂರಹಿತರು ಸುಮಾರು 30 ಎಕ್ರೆ ಸ್ಥಳವನ್ನು ತನ್ನದಾಗಿಸಿಕೊಂಡ ಘಟನೆ ಇಂದು ಬೆಳಿಗ್ಗೆ ಇಲ್ಲಿಗೆ ಸಮೀಪದ ಪೈವಳಿಕೆ ಕಯ್ಯಾರು ವಿಲೇಜಿನ ಜೋಡುಕಲ್ಲಿನ ಓಪತ್ತಿಮೂಲೆಯಲ್ಲಿ ನಡೆದಿದೆ.
ಭೂಮಿ ಮನೆಯಿಲ್ಲದ  ಸುಮಾರು 300 ರಷ್ಟು ಭೂರಹಿತರು ಇಂದು ಬೆಳಿಗ್ಗೆ ಜೋಡುಕಲ್ಲಿನ ಓಪತ್ತಿಮೂಲೆಯಲ್ಲಿರುವ ೩೦ ಎಕ್ರೆ ಮಿಗತೆ ಭೂಮಿಯಲ್ಲಿ ಇಂದು ಬೆಳಿಗ್ಗೆ ಕೆಂಪು ಧ್ವಜವನ್ನು ಹಾರಿಸಿ ಗುಡಿಸಲು ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿದರು.
ಇವರ ಜತೆ ಕೈಜೋಡಿಸಿದ ಸಿಪಿಎಂ,ಕರ್ಷಕ ಸಂಘ,ಕರ್ಷಕ ತೊಯಿಲಾಳಿ ಯೂನಿಯನ್,ಪರಿಶಿಷ್ಟ ಜಾತಿ -ವರ್ಗ,ಹಾಗು ಆದಿವಾಸಿ ಸಂಘಟನೆಗಳ ಆಶ್ರಯದಲ್ಲಿ ಮಿಗತೆ ಭೂಮಿಯನ್ನು ವಶಪಡಿಸಲಾಗಿದೆ.
ಅತಿಕ್ರಮಣದ ಮಾಹಿತಿ ಅರಿತ ಪೊಲೀಸರು ಸ್ಥಳದಲ್ಲಿ ಠಿಕಾಣಿ ಹೂಡಿದ್ದು ಈ ಸ್ಥಳದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪದಿಸಲಾಗಿದೆ.ಸಿಪಿಎಂ ಮಂಜೇಶ್ವರ ಏರಿಯಾದ ಏಳು ಪಂಚಾಯತುಗಳ ನಿವಾಸಿಗಳು ಭೂಮಿ ವಶಪಡಿಸಿ ಗುಡಿಸಲು ನಿರ್ಮಾಣಕ್ಕಾಗಿ ಬಂದು ತಲುಪಿದ್ದಾರೆ.

No comments:

Post a Comment