Wednesday, January 23, 2013

ಜ.25-27: ಪಣಂಬೂರು ಬೀಚ್ ಉತ್ಸವ



ಜನವರಿ -23-2013

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಜ.25,26,27ರಂದು ಪಣಂಬೂರು ಬೀಚ್ ಉತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ಮಂಗಳೂರು ಸಹಾಯಕ ಆಯುಕ್ತ ಡಾ.ವೆಂಕಟೇಶ್ ಎಂ.ವಿ. ಹೇಳಿದರು. ಮಂಗಳವಾರ ತನ್ನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜ.25ರಂದು ಸಂಜೆ 4 ಗಂಟೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಬೀಚ್ ಉತ್ಸವ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾಲ ಪಣಂಬೂರು ಬೀಚ್‌ವರೆಗೆ ಬಸ್ಸುಗಳನ್ನು ಓಡಿಸಲು ಖಾಸಗಿ ಬಸ್ ಮಾಲ ಕರು ಒಪ್ಪಿಗೆ ನೀಡಿದ್ದು, ಉಚಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಆಹಾರೋತ್ಸವ: ಕರಾವಳಿಯ ಹಾಗೂ ಇತರ ಸ್ವಾದಿಷ್ಟವಾದ ಖಾದ್ಯಗಳನ್ನು ಸವಿಯುವ ಸಲುವಾಗಿ ಆಹಾರ ಮಳಿಗೆಗಳನ್ನು ಏರ್ಪಡಿಸಲಾಗಿದೆ. ಆಹಾರೋತ್ಸವದಲ್ಲಿ ಜಿಲ್ಲೆಯ ಸಾಂಪ್ರದಾಯಿಕ ಶೈಲಿಯ ತಿಂಡಿ ತಿನಿಸು, ವಿವಿಧ ಖಾದ್ಯ ಹಾಗು ಐಸ್ ಕ್ರೀಂಗಳನ್ನು ಪರಿಚಯಿಸಲಾಗುತ್ತದೆ.
ಸಾಂಸ್ಕೃತಿಕ ಉತ್ಸವ: ಬೀಚ್ ಉತ್ಸವದ ಅಂಗವಾಗಿ ನಾಡದೋಣಿಗಳ ಸ್ಪರ್ಧೆ, ಈಜು ಸ್ಪರ್ಧೆ, ಬೇಬಿ ಬೀಚ್ ಸ್ಪರ್ಧೆ, ಟೀಂ ಮಂಗಳೂರು ತಂಡದಿಂದ ಗಾಳಿಪಟ ಹಾರಾಟ ಪ್ರದರ್ಶನ, ಮರಳಲ್ಲಿ ಆಕೃತಿ ರಚಿಸುವ ಸ್ಪರ್ಧೆ, ಸ್ಕೇಟಿಂಗ್ ಸ್ಪರ್ಧೆ, ಚೆಂಡೆ ವಾದನಗಳ ಪ್ರದರ್ಶನ, ಸಮುದ್ರದಲ್ಲಿ ದೋಣಿ ವಿಹಾರ, ಸಮುದ್ರ ಕ್ರೀಡೆಗಳ ಸಹಿತ ಸಂಗೀತ ಸ್ಪರ್ಧೆ, ಯುಫೋರಿಯಾ ಮತ್ತು ತಂಡದಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ.
ಸ್ಕೇಟಿಂಗ್ ಸ್ಪರ್ಧೆ ಬಗ್ಗೆ ಮಹೇಶ್‌ಕುಮಾರ್ (9448088773),ಈಜು ಮತ್ತು ದೋಣಿ ಸ್ಪರ್ಧೆ ಬಗ್ಗೆ ಯತೀಶ್ ಬೈಕಂಪಾಡಿ (9449035570) ಅವರನ್ನು ಜ.25ರೊಳಗೆ   ಸಂಪರ್ಕಿಸಬಹುದು.

No comments:

Post a Comment