Thursday, January 10, 2013

ಜ.21ರಿಂದ ರೈಲು ಪ್ರಯಾಣ ತುಟ್ಟಿ



 - ಜನವರಿ -10-2013

*ಕಿ.ಮೀ.ಗೆ 2ರಿಂದ 10 ಪೈಸೆ ಏರಿಕೆಗೆ ನಿರ್ಧಾರ
ಹೊಸದಿಲ್ಲಿ: ಜನವರಿ 21ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ರೈಲು ಪ್ರಯಾಣ ದರವನ್ನು ಕಿ.ಮೀ.ಗೆ 2ರಿಂದ 10 ಪೈಸೆಗಳ ವರೆಗೆ ಹೆಚ್ಚಿಸಲಾಗುವುದೆಂದು ರೈಲ್ವೆ ಸಚಿವರು ಬುಧವಾರ ಘೋಷಿಸಿದ್ದಾರೆ.ಸ್ಲೀಪರ್ ದರ್ಜೆಗೆ ಕಿ.ಮೀ.ಗೆ 6 ಪೈಸೆ, ಎ.ಸಿ. ಚೇರ್ ಕಾರ್‌ಗೆ ಕಿ.ಮೀ.ಗೆ 10 ಪೈಸೆ, ಎ.ಸಿ. ತ್ರಿಟೈರ್‌ಗೆ ಕಿ.ಮೀ.ಗೆ 10ಪೈಸೆ, ಮೊದಲ ದರ್ಜೆಗೆ ಕಿ.ಮೀ.ಗೆ 3 ಪೈಸೆ ಹಾಗೂ ಎಸಿ ಟೂಟೈರ್‌ಗೆ ಕಿ.ಮೀ.ಗೆ 6 ಪೈಸೆ ಹೆಚ್ಚಳವಾಗಲಿವೆಯೆಂದು ಅವರು ತಿಳಿಸಿದ್ದಾರೆ. ರೈಲು ಟಿಕೆಟ್‌ಗಳ ಬೆಲೆಯನ್ನು ಕಳೆದ ಒಂದು ದಶಕದಿಂದ ಹೆಚ್ಚಿಸಲಾಗಿಲ್ಲ. ಪ್ರಸ್ತಾಪಿತ ಹೆಚ್ಚಳವು ಸಾಮಾನ್ಯ ಹಾಗೂ ನ್ಯಾಯೋಚಿತವಾಗಿದ್ದು, ಮುಂದೆ ರೈಲ್ವೆ ಮುಂಗಡ ಪತ್ರದಲ್ಲಿ ದರವನ್ನು ಹೆಚ್ಚಿಸುವುದಿಲ್ಲವೆಂದು ರೈಲ್ವೆ ಸಚಿವ ಪವನ್‌ಕುಮಾರ್ ಬನ್ಸಾಲ್ ಹೇಳಿದ್ದಾರೆ.
ಕಳೆದ ವರ್ಷ ಆಗಿನ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಕೆಲವು ರೈಲು ದರಗಳ ಹೆಚ್ಚಳ ಘೋಷಿಸಿದ್ದರು. ಆದರೆ, ಅವರ ಈ ಕ್ರಮ ಅವರದೇ ಪಕ್ಷವಾದ ತೃಣಮೂಲ ಕಾಂಗ್ರೆಸ್‌ನ ನಾಯಕಿ ಮಮತಾ ಬ್ಯಾನರ್ಜಿಯವರನ್ನು ಕೆರಳಿಸಿತ್ತು. ಮಮತಾ, ತ್ರಿವೇದಿಯವರನ್ನು ವಜಾಗೊಳಿಸಿದ್ದ ಕಾರಣ ಈ ಹೆಚ್ಚಳ ಜಾರಿಗೆ ಬಂದಿರಲಿಲ್ಲ.
ಈ ಮೂಲಕ ಕೊನೆಗೂ ಕಾರ್ಯಾಚರಣೆ ಹಾಗೂ ಆಧುನಿಕೀಕರಣ ಮತ್ತು ವಿಸ್ತರಣೆ ಕಾರ್ಯಗಳಿಗೆ ಬಾಧಕವಾಗಿದ್ದ ನಿಧಿ ಕೊರತೆಯಿಂದ ಹೊರ ಬರಲು ರೈಲ್ವೆ ಸಚಿವಾಲಯ ನಿರ್ಧರಿಸಿವೆ.ಈ ಮೊದಲು ಬನ್ಸಾಲ್, ಉತ್ತಮ ಹಾಗೂ ಆಧುನಿಕ ಸೇವೆ ನೀಡಿದರೆ ಜನರು ಹೆಚ್ಚು ಹಣ ತೆರಲು ಸಿದ್ಧರಿದ್ದಾರೆ. ರೈಲ್ವೆಗೆ ತನ್ನ ಖರ್ಚಿನ ಬಗ್ಗೆ ವಾಸ್ತವವಾಗಿ ಚಿಂತಿಸುವ ಕಾಲ ಕೂಡಿ ಬಂದಿವೆ. ಪ್ರಯಾಣಿಕರಿಗೆ ಅಗ್ಗದಲ್ಲಿ ಸೌಕರ್ಯ ಒದಗಿಸಲು ಸರಕು ಸಾಗಾಟ ದರ ಏರಿಕೆ ಯೋಜನೆ(ಕ್ರಾಸ್ ಸಬ್ಸಿಡೈಜೇಶನ್) ಕಾರ್ಯಸಾಧುವಲ್ಲ.
ಇದರಿಂದ ರೈಲ್ವೆಯು ರಸ್ತೆ ಸಾಗಾಟದಾರರಿಗೆ ತನ್ನ ವರಮಾನದ ಪಾಲನ್ನು ಕಳೆದುಕೊಳ್ಳಬೇಕಾಗಿ ಬಂದಿದ್ದು, ರಸ್ತೆಗಳಲ್ಲಿ ಘನವಾಹನ ಸಮ್ಮರ್ದ, ಪದಾರ್ಥಗಳ ಬೆಲೆ ಹಾಗೂ ಪರಿಸರ ಮಾಲಿನ್ಯ ಹೆಚ್ಚಳಕ್ಕೆ ಕಾರಣ ವಾಗಿದೆಯೆಂದು ಅಭಿಪ್ರಾಯಿಸಿದ್ದಾರೆ. ಕಳೆದ ಬಜೆಟ್‌ನಲ್ಲಿ ಹೆಚ್ಚಿಸಲಾಗಿದ್ದ ರೈಲು ಪ್ರಯಾಣ ದರವನ್ನು ಎಸಿ-ಐ ಹಾಗೂ ಎಸಿ-ಐಐರ ಪ್ರಯಾಣಿಕರಿಗೆ ಹೊರತು ಉಳಿದುದನ್ನು ಹಿಂದೆಗೆಯಲಾಗಿತ್ತು.
ಕೆಲವು ರೈಲುಗಳ ದರ ಹೆಚ್ಚಳದ ಬಳಿಕ ದರ
ದಿಲ್ಲಿ-ಮುಂಬೈ ಎಸಿ 3-ಟೈರ್ ರೂ. 1065ರಿಂದ 1205ಕ್ಕೆ
ದಿಲ್ಲಿ-ಹೌರಾ ಎಸಿ-3 ಟೈರ್-ರೂ.1088 ರಿಂದ 1235ಕ್ಕೆ
ದಿಲ್ಲಿ - ಮುಂಬೈ ಸ್ಲೀಪರ್ ರೂ.214ರಿಂದ 270ಕ್ಕೆ
ದಿಲ್ಲಿ - ಹೌರಾ ಸ್ಲೀಪರ್ ರೂ. 218ರಿಂದ 280ಕ್ಕೆ.
ರೈಲು ಪ್ರಯಾಣ ದರ ಹೆಚ್ಚಳ ಕೋಷ್ಠಕ (ಕಿ.ಮೀ.ಗೆ)
2ನೆ ದರ್ಜೆ ಸಾಮಾನ್ಯ ಉಪನಗರ2 ಪೈಸೆ
2ನೆ ದರ್ಜೆ ಸಾಮಾನ್ಯ ಉಪನಗರೇತರ3 ಪೈಸೆ
2ನೆ ದರ್ಜೆ ಮೇಲ್ ಎಕ್ಸ್‌ಪ್ರೆಸ್ ರೈಲುಗಳು4 ಪೈಸೆ
ಎ.ಸಿ. ಚೇರ್ ಕಾರ್10 ಪೈಸೆ
ಎ.ಸಿ. ಮೊದಲ ದರ್ಜೆ ಮೊದಲಿನ   10 ಪೈಸೆ +3 ಪೈಸೆ
ಎಸಿ ಟೂ ಟೈರ್ ಮೊದಲಿನ15 ಪೈಸೆ + 6 ಪೈ

No comments:

Post a Comment