Saturday, January 19, 2013

ಕುಂಞಿ ಅಹ್ಮದ್ ಮುಕ್ರಿಗೆ ದಮ್ಮಾಮ್ ಯುಐಇಒ ನ ವತಿಯಿಂದ 2012 ರ ಬೆಸ್ಟ್ ಶೋಶಿಯಲ್ ಅವಾರ್ಡ್ಮಂಜೇಶ್ವರ: ದಮ್ಮಾಮ್ ನಲ್ಲಿ ನೆಲೆಸಿರುವ ಉದ್ಯಾವರ ಆನಿವಾಸಿಗಳ ಸ್ಂಘಟನೆಯಾದ ಯುಐಇಒ ನ ವತಿಯಿಂದ ನೀಡಲಾಗುತ್ತಿರುವ ಬೆಸ್ಟ್ ಶೋಶಿಯಲ್ ಅವಾರ್ಡ್ ಗೆ 2012 ರ ವ್ಯಕ್ತಿಯಾಗಿ ಉದ್ಯಾವರ ಜಮಾಹತಿನಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿದ ಉದ್ಯಾವರ ಜುಮಾ ಮಸೀದಿ ನಿವಾಸಿ ಶ್ರೀಯುತ ಕುಂಞಿ ಅಹ್ಮದ್ ಮುಕ್ರಿಯವರು ಆಯ್ಕೆಯಾಗಿರುತ್ತಾರೆ.
ಸದ್ಯದಲ್ಲೇ ಉದ್ಯಾವರ ಜುಮಾ ಮಸೀದಿಯ ಸಮೀಪದಲ್ಲಿ ನಡೆಯುವ ಸಮಾರಂಭದಲ್ಲಿ ಕುಂಞಿ ಅಹ್ಮದ್ ಮುಕ್ರಿಯವರನ್ನು ಶಾಲು ಹೊದಿಸಿ ರೂಪಾಯಿ ಇಪ್ಪತ್ತೈದು ಸಾವಿರ ನಗದು ಹಾಗು ಪ್ರಶಶ್ತಿ ಪತ್ರ ನೀಡಿ ಗೌರವಿಸಲಾಗುವುದೆಂದು ಅವಾರ್ಡ್ ನಿರ್ಣಯ ಸಮಿತಿಯ ವಕ್ತಾರರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಮೊಯ್ದಿನ್ ಬೆಲ್ಟೇರಿ,ಆಹ್ಮದ್ ಗುಡ್ಡೆ,ಬಾಷಾ,ಹಂಝ ,ನಿಝಾರ್,ಹನೀಫ್ ಕಜ ಮೊದಲಾದವರು ಉಪಸ್ಥರಿದ್ದರು
Reported By-Nazeer Shafi Udyawar
ಎಲ್ಲಾ ರಂಗದಲ್ಲಿಯೂ ಅರ್ಹತೆಗೊಳಪಟ್ಟ ವ್ಯಕ್ತಿಯನ್ನು ಗುರುತಿಸಿ ಬೆಸ್ಟ್ ಶೋಶಿಯಲ್ ಅವಾರ್ಡ್ ಗೆ ಕುಂಞಿ ಅಹ್ಮದ್ ಮುಕ್ರಿಯವರನ್ನು ಆಯ್ಕೆಗೊಳಿಸಿದ ಅವಾರ್ಡ್ ಸಮಿತಿಯ ಎಲ್ಲಾ ಸದಸ್ಯರಿಗೂ ಮಂಜೇಶ್ವರ ಟೈಮ್ಸ್ ಸಂಪಾದಕೀಯ ಮಂಡಳಿ ಕೃತಜ್ಞತೆಯನ್ನು ಸಲ್ಲಿಸಿದೆ 

No comments:

Post a Comment