Monday, January 14, 2013

2 ವರ್ಷದೊಳಗೆ ಲೇಡಿಗೋಶನ್ ಆಸ್ಪತ್ರೆ ನಿರ್ಮಾಣ: ಮೊಯ್ಲಿ



 ಜನವರಿ -14-2013

ಮಂಗಳೂರು: ಮುಂದಿನ ಎರಡು ವರ್ಷಗಳೊಳಗೆ ಲೇಡಿಗೋಶನ್ ಆಸ್ಪತ್ರೆ ಪುನ: ನಿರ್ಮಾಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.
ರವಿವಾರ ಲೇಡಿಗೋಶನ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಪತ್ರಕರ್ತರ ಜತೆ ಮಾತ ನಾಡಿದ ಅವರು, ಆಸ್ಪತ್ರೆಯ ಪುನನಿರ್ಮಾಣಕ್ಕೆ ಎಂಆರ್‌ಪಿಎಲ್ ಸಂಸ್ಥೆಯು 21.74 ಕೋಟಿ ರೂ. ನೀಡಲಿದೆ. ಮತ್ತಷ್ಟು ಹಣ ಬೇಕಾದಲ್ಲಿ ಇತರ ತೈಲ ಕಂಪೆನಿಗಳ ನೆರವು ಪಡೆದುಕೊಳ್ಳಲಾಗುವುದು. ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಪ್ರಸಕ್ತ ಇಲ್ಲಿ 250 ಹಾಸಿಗೆ ಕಲ್ಪಿಸಲಾಗುತ್ತದೆ. ಭವಿಷ್ಯದ ದಿನಗಳಲ್ಲಿ ಅದನ್ನು ಹೆಚ್ಚಿಸಲಾಗುವುದು ಎಂದರು.
ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಪಿ.ಪಿ.ಉಪಾಧ್ಯ, ಲೇಡಿಗೋಶನ್ ಆಸ್ಪತ್ರೆಯ ಶಕುಂತಳಾ,ಡಾ.ಗೀತಾ, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಡಾ. ರಮೇಸ್ ಕವರಿ, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಕೆ.ಅಶ್ರಫ್, ಶಶಿಧರ ಹೆಗ್ಡೆ, ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.

No comments:

Post a Comment