Friday, January 25, 2013

ಎವರೆಸ್ಟ್ ಆರೋಹಣಕ್ಕೆ 19 ವರ್ಷದ ಯುವತಿ ಆಯ್ಕೆ



- ಜನವರಿ -26-2013

ಹೊಸದಿಲ್ಲಿ,:ಭಾರತದ ಕೆಲವು ಎತ್ತರದ ಪರ್ವತಗಳನ್ನು ಏರಿ ಸಾಧನೆ ಮಾಡಿದ್ದ 19ರ ಹರೆಯದ ಭಾರತೀಯ ಯುವತಿ ಸಾಚಿ ಸೋನಿ ದಾರ್ಜಿಲಿಂಗ್ ಹಿಮಾಲಯನ್ ವೌಂಟ್ನೆರಿಂಗ್ ಸಂಸ್ಥೆಯಿಂದ ನಡೆಸಲ್ಪಡುವ ಅತ್ಯಂತ ಎತ್ತರದ ಶಿಖರ ವೌಂಟ್ ಎವರೆಸ್ಟ್‌ಗೆ ಆರೋಹಣ ನಡೆಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.
 
‘‘ಇದು ನನಗೆ ದೊರೆತ ಅತ್ಯುನ್ನತ ಗೌರವ.ಗಂಗಾನದಿ ಶುಚಿತ್ವದ ಕುರಿತು ಜಾಗೃತಿ ಮೂಡಿಸುವ ಸಂದೇಶ ರವಾನಿಸಲು ಗಂಗಾಜಲವನ್ನು ಎವರೆಸ್ಟ್‌ಗೆ ಕೊಂಡೊಯ್ಯು.ೆ ಚಾರಣವು ಎಪ್ರಿಲ್ 2014ಕ್ಕೆ ಆರಂಭವಾಗಲಿದೆ’’ ಎಂದು ಆಕೆ ನುಡಿದಿದ್ದಾಳೆ.
 20 ಕೆ.ಜಿ.ತೂಕವನ್ನು ಹಿಡಿದು ಪ್ರತಿದಿನ 5 ಮಹಡಿ ಕಟ್ಟಡವನ್ನು ಏರುವ ಆಕೆ, ಪ್ರತಿದಿನ 7 ರಿಂದ 8 ಕಿ.ಮೀ ಓಡುತ್ತಾಳೆ. ದಿನಾಲೂ ಜಿಮ್ ತಬೇತಿಗೂ ಕೂಡ ತೆರಳುವ ಆಕೆ 1,000 ಸಲ ಜಿಗಿಯುತ್ತಾಳೆ ಹಾಗೂ ಯೋಗಾಭ್ಯಾಸ ವನ್ನು ತಪ್ಪದೆ ಮಾಡುತ್ತಾಳೆ. ಒಟ್ಟಾರೆ ಹೇಳುವುದಾದರೆ ಆಕೆ 6 ಗಂಟೆ ತರಬೇತು ಪಡೆಯುತ್ತಿದ್ದಾಳೆ ಎಂದು ಆಕೆಯ ತರಬೇತುದಾರ ದೀಪಕ್ ಸೈನಿ ಹೇಳುತ್ತಾರೆ.
ದಿಲ್ಲಿ ಇಂದ್ರಪ್ರಸ್ಥ ಕಾಲೇಜಿನ ಸಮೂಹ ಮಾಧ್ಯಮದ ವಿದ್ಯಾರ್ಥಿನಿಯಾದ ಈಕೆಗೆ ತನ್ನ ಅಧ್ಯಯನದ ನಡುವೆ ಪರ್ವತಾರೋಹಣ ಸುಲಭದ ಕೆಲಸವಲ್ಲ ಎಂದು ತಿಳಿದಿ ದ್ದರೂ,ಆಕೆಯ ಸ್ನೇಹಿತರು ಆಕೆಗೆ ಇದರಲ್ಲಿ ಸಾಧನೆ ಮಾಡುವ ಅರ್ಹತೆ ಇದೆ ಎಂದು ಕಂಡು ಕೊಂಡು ಆಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸಾಚಿ ಪರ್ವತಾರೋಹಣದ ಹವ್ಯಾಸ ವನ್ನು ತನ್ನ ಎಳೆ ಪ್ರಾಯದಲ್ಲಿಯೇ ಮೈಗೂಡಿಸಿಕೊಂಡಿದ್ದಳು. 7 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿಯೇ 21,600 ಅಡಿ ಎತ್ತರದ ಸಿಕ್ಕಿಂ ಹಿಮಾಲಯ ಶ್ರೇಣಿಯಲ್ಲಿರುವ ಬಂದರ್ಪುಂಚ್ ಪರ್ವತವನ್ನು ಹತ್ತಿದ ಸಾಧನೆ ಮಾಡಿದ್ದಳು.

No comments:

Post a Comment