Wednesday, January 30, 2013

ಪ್ರವಾದಿ ಮುಹಮ್ಮದ್(ಸ.ಅ.)ರ ಜೀವನ,ಬೋಧನೆ ಕುರಿತ ಚಿತ್ರಕ್ಕೆ ತಯಾರಿ;100 ಕೋಟಿ ಡಾಲರ್ ವೆಚ್ಚಜನವರಿ -15-2013

ಮನಾಮ: ಪ್ರವಾದಿ ಮುಹಮ್ಮದ್ (ಸ.ಅ.)ರ ಜೀವನ ಮತ್ತು ಬೋಧನೆ ಕುರಿತು ಚಿತ್ರವೊಂದನ್ನು ನಿರ್ಮಿಸಲು ದೋಹಾದ ಅಲ್ ನೂರ್ ಹೋಲ್ಡಿಂಗ್ 100 ಕೋಟಿ ಡಾಲರ್ ವೆಚ್ಚದ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ.ಚಿತ್ರವು ಏಳು ಭಾಗಗಳಲ್ಲಿ ನಿರ್ಮಾಣವಾಗಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ದೃಶ್ಯ-ಶ್ರಾವ್ಯ ವ್ಯವಸ್ಥೆಗಳನ್ನು ಬಳಸಿಕೊಂಡು ಅತ್ಯುನ್ನತ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಸಾರವಾಗಿ ತಯಾರಿಸಲಾಗುವುದು ಎಂದು ಮಾಧ್ಯಮ ಕಂಪೆನಿ ಹೇಳಿದೆ. ಚಿತ್ರಕ್ಕೆ ಅಂತಾರಾಷ್ಟ್ರೀಯ ಮುಸ್ಲಿಂ ವಿದ್ವಾಂಸರ ಒಕ್ಕೂಟದ ಅಧ್ಯಕ್ಷ ಯೂಸುಫ್ ಅಲ್ ಕರ್ಝಾವಿ ಸೇರಿದಂತೆ ಇಸ್ಲಾಮಿಕ್ ವಿದ್ವಾಂಸರು ಅನುಮೋದನೆ ನೀಡಿದ್ದಾರೆ ಎಂದು ಕಂಪೆನಿ ಹೇಳಿದೆ.ಹಲವು ಕಲಾತ್ಮಕ ಹಾಗೂ ನಾಟಕೀಯ ಸವಾಲುಗಳನ್ನು ಎದುರಿಸಿದ ಬಳಿಕ ಚಿತ್ರಕತೆಯನ್ನು ಬರೆಯುವ ಪರಿಣತರ ತಂಡ ತನ್ನ ಕೆಲಸ ಮುಗಿಸಿದೆ ಎಂದಿದೆ.ಚಿತ್ರ ನಿರ್ಮಾಣ ಯೋಜನೆಯನ್ನು ಮುಂದುವರಿಸಲು ಕಂಪೆನಿಗೆ ಪ್ರಮುಖ ಮುಸ್ಲಿಂ ವಿದ್ವಾಂಸರ ಅನುಮೋದನೆ ಪಡೆಯುವುದು ಅಗತ್ಯವಾಗಿದೆ.
‘‘ಇದು (ಚಿತ್ರ ನಿರ್ಮಾಣ) ಕಠಿಣ ಹಾಗೂ ಸವಾಲಿನ ಕೆಲಸ ಎಂಬ ವಾಸ್ತವ ನಮಗೆ ತಿಳಿದಿದೆ’’ ಎಂದು ಅಲ್ ನೂರ್ ಹೋಲ್ಡಿಂಗ್ ಸೆಪ್ಟಂಬರ್‌ನಲ್ಲಿ ಹೇಳಿತ್ತು.‘‘ಅದಕ್ಕಾಗಿಯೇ ನಾವು ಹಲವು ಪ್ರಸಿದಟಛಿ ಮುಸ್ಲಿಂ ಪಂಡಿತರ ಜೊತೆ ಸಮಾಲೋಚನೆ ನಡೆಸಿದ್ದೇವೆ. ಈ ನಿಟ್ಟಿನಲ್ಲಿ ನಾವುಡಾ. ಅಲ್ ಕರ್ಝಾವಿಯವರ ಬಳಿಯೂ ಸಮಾಲೋಚಿಸಿದ್ದೇವೆ. ಶರಿಯಾ ಕುರಿತ ವಿಷಯದಲ್ಲಿ ಅವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ’’ ಎಂದಿತ್ತು.ಕಟ್ಟುನಿಟ್ಟಿನ ಇಸ್ಲಾಮಿಕ್ ಕಾನೂನುಗಳ ಅನ್ವಯ ಪ್ರವಾದಿಗಳನ್ನು ಪರದೆಯ ಮೇಲಾಗಲಿ ಕಾಗದದ ಮೇಲಾಗಲಿ ತೋರಿಸುವಂತಿಲ್ಲ ಹಾಗೂ ಚಿತ್ರ ಇದಕ್ಕೆ ಹೊರತಾಗಿಲ್ಲ.
ಆದಾಗ್ಯೂ ಅವರ ಸಂಗಾತಿಗಳು ಚಿತ್ರ ಪರದೆಯ ಮೇಲೆ ಬರಲಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ ಮುಸ್ಲಿಮರು ಹೊಂದಿರುವ ಗೌರವದಿಂದಾಗಿ ಅವರನ್ನು ಪರದೆಯ ಮೇಲೆ ತೋರಿಸುವುದಕ್ಕೆ ಅಥವಾ ಚಿತ್ರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಮೊದಲಿನ ನಿರ್ಧಾರಕ್ಕೆ ಇದು ವ್ಯತಿರಿಕ್ತವಾಗಿದೆ.
ಪ್ರವಾದಿ(ಸ.ಅ.)ರ ಸಂಗಾತಿಗಳನ್ನು ಚಿತ್ರವೊಂದರಲ್ಲಿ ತೋರಿಸುವ ಬಗ್ಗೆ ತಾನು ತನ್ನದೇ ಆದ ಸಂಶೋಧನೆ ನಡೆಸಿದ್ದೇನೆ ಹಾಗೂ 30 ಹಿರಿಯ ವಿದ್ವಾಂಸರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಲ್ ಕರ್ಝಾವಿ ಹೇಳಿದರು.
ಪ್ರವಾದಿ ಮುಹಮ್ಮದ್(ಸ.ಅ.)ರ ಮೊಮ್ಮಕ್ಕಳಾದ ಹಸನ್(ರ.) ಮತ್ತು ಹುಸೈನ್(ರ.)ರ ಕುರಿತ ಟಿವಿ ಕಾರ್ಯಕ್ರಮ ವೊಂದನ್ನು ರಮಾಝಾನ್ ಅವಧಿಯಲ್ಲಿ ಪ್ರಸಾರಿಸಲಾಗಿತ್ತು. ಈ ಕಾರ್ಯಕ್ರಮ ಸಾಕಷ್ಟು ವಿವಾದಕ್ಕೆಗುರಿಯಾಗಿತ್ತು.ಆ ನಾಟಕವನ್ನು ಪ್ರಸಾರ ಮಾಡದಂತೆ ಹೇಳಿಕೆಯೊಂದರಲ್ಲಿ ಕೈರೋದ ಸುನ್ನಿ ಸಂಸ್ಥೆ ಅಲ್ ಅಝರ್ ಎಲ್ಲ ಟಿವಿ ಚಾನಲ್‌ಗಳಿಗೆ ಎಚ್ಚರಿಕೆ ನೀಡಿತ್ತು. ನಾಟಕವನ್ನು ನಿರ್ಮಿಸಿ ಪ್ರಸಾರ ಮಾಡಿರುವುದನ್ನು ಪ್ರಶ್ನಿಸಿ ನಿರ್ಮಾಣ ಕಂಪೆನಿ ಮತ್ತು ಸೆಟಲೈಟ್ ಪೂರೈಕೆದಾರನ ವಿರುದಟಛಿ ಹಲವು ಕಾನೂನು ಮೊಕದ್ದಮೆಗಳು ದಾಖಲಾಗಿದ್ದವು.
ಆದಾಗ್ಯೂ, ಇಂಥದೇ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿರುವ ಕುವೈತ್ ಇಸ್ಲಾಮಿಕ್ ವಿದ್ವಾಂಸ ಹಾಗೂ ಸಲಹಾ ತಂಡದ ಮುಖ್ಯಸ್ಥ ತಾರಿಕ್ ಅಲ್ ಝೈದಾನ್, ಹೊಸ ತಲೆಮಾರುಗಳ ಜನರು ಮಾಹಿತಿ ಕಲೆ ಹಾಕಲು ಹೊಸ ವಿಧಾನಗಳನ್ನು ಅನುಸರಿಸುತ್ತಾರೆ ಹಾಗೂ ಅವರು ಈಗ ಸಾಂಪ್ರದಾಯಿಕ ಮಾಧ್ಯಮಗಳನ್ನು ಅವಲಂಬಿಸಿಲ್ಲ ಎಂಬುದಾಗಿ ಇತ್ತೀಚಿನ ಅಂತಾರಾಷ್ಟ್ರೀಯ ಅಧ್ಯಯನಗಳು ತೋರಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಾಶ್ಚಾತ್ಯ ವೀಕ್ಷಕರಿಗೆ ರವಾನಿಸಲು ಚಿತ್ರದಲ್ಲಿ 57 ಸಂದೇಶಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಕತಾರಿ ಮಾಧ್ಯಮಗಳು ಪ್ರಕಟಿಸಿದ ಲೇಖನಗಳು ಹೇಳಿವೆ.‘‘ಇತರ ಜನರ ಮಾನಸಿಕ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ’’ ಎಂದರು.ಚಿತ್ರವು ಮೂಲತಃ ಇಂಗ್ಲಿಷ್‌ನಲ್ಲಿ ತಯಾರಾಗುತ್ತದೆ. ಆದರೆ, ವಿಶ್ವದ ಎಲ್ಲ ಭಾಗಗಳಿಗೆ ಅದು ತಲುಪುವಂತೆ ನೋಡಿಕೊಳ್ಳಲು ಅದನ್ನು ವಿವಿಧ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುವುದು ಎಂದು ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದರು.
ಇಸ್ಲಾಂ ಅಥವಾ ಪ್ರವಾದಿ ಮುಹಮ್ಮದ್(ಸ.ಅ.)ರ ಬಗ್ಗೆ ಋಣಾತ್ಮಕ ಸಂದೇಶಗಳನ್ನು ಹೊಂದಿರುವ ಸುಮಾರು 750 ಚಿತ್ರಗಳು ಕಳೆದ ದಶಕದಲ್ಲಿ ಹಾಲಿವುಡ್‌ನಲ್ಲಿ ನಿರ್ಮಾಣಗೊಂಡಿವೆ ಎಂದು ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್) ಸಹ ಸ್ಥಾಪಕ ಹಾಗೂ ಅದರ ಕಾರ್ಯಕಾರಿ ನಿರ್ವಾಹಕ ನಿಹಾದ್ ಅವದ್ ಹೇಳಿದರು.ಮುಸ್ಲಿಮರು ಮತ್ತು ಇಸ್ಲಾಂ ಬಗ್ಗೆ ಪಾಶ್ಚಿಮಾತ್ಯರಲ್ಲಿ ನೆಲೆಸಿರುವ ಋಣಾತ್ಮಕ ಭಾವನೆಯನ್ನು ಹೋಗಲಾಡಿಸುವ ಪ್ರಮುಖ ಉದ್ದೇಶವನ್ನು ಚಿತ್ರ ಹೊಂದಿದೆ ಎಂದು ಅವರು ಹೇಳಿರುವುದಾಗಿ ‘ಅಲ್ ಶಾರ್ಕ್’ ವರದಿ ಮಾಡಿದೆ

No comments:

Post a Comment