Monday, December 31, 2012

ಮದ್ರಸ ದ ನೋಟೀಸ್ ಬೋರ್ಡ್ ಗೆ ಹಾನಿ :ದೂರು

Dec-31-2012
ಕುಂಜತ್ತೂರು:ಮದ್ರಸವೊಂದರ  ನೋಟಿಸ್ ಬೋರ್ಡಿಗೆ ಹಾನಿ ಗೊಳಿಸಿದ ಬಗ್ಗೆ ಇಲ್ಲಿಗೆ ಸಮೀಪದ ಉದ್ಯಾವರ ಬಿ.ಎಸ್ .ನಗರದಿಂದ ವರದಿಯಾಗಿದೆ.ನಿನ್ನೆ ರಾತ್ರಿ ಉದ್ಯಾವರದ ಬಿ.ಎಸ್ ನಗರದಲ್ಲಿರುವ ಬಿಲಾಲ್ ಮಸೀದಿಯ ನೇತೃತ್ವದಲ್ಲಿರುವ ಮದ್ರಸತುಲ್ ಹುದಾ ಕ್ಕೆ 5 ಜನರ ಗುಂಪೊಂದು ನುಗ್ಗಿ ಮದ್ರಸದ ನೋಟೀಸ್ ಬೋರ್ಡನ್ನು ಹಾನಿಗೊಳಿಸಿರುವುದಾಗಿ ದೂರಲಾಗಿದೆ.ಉದ್ಯಾವರದ ಬಿ.ಎಸ್ . ನಗರ ನಿವಾಸಿಗಳಾದ  ಸತ್ತಾರ್(22) ಅಹ್ಮದ್ ರವರ ಪುತ್ರ ಅನ್ಸಾರ್(18) ಹಾಗು ಕಂಡರೆ ಗುರುತು ಪತ್ತೆಹಚ್ಚಬಹುದಾದಂತಹ ಇತರ ಮೂವರ ವಿರುದ್ದ ಮಸೀದಿಯ ಆಡಳಿತ ನಿರ್ಧೇಶಕ ಎ.ಕೆ.ಮೊಯಿದಿನ್ ಹಾಜಿಯವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿರುತ್ತಾರೆ.
ಇದಕ್ಕೆ ಮೊದಲು ಕೂಡಾ ಇದೇ ತಂಡ 2 ಸಲ ಇದೇ ತಂಡ ನೋಟೀಸ್ ಬೋರ್ಡ್ ನ ಬೀಗವನ್ನು ಮುರಿದು ನೋಟೀಸುಗಳನ್ನು ಚಲ್ಲಾಪಿಲ್ಲಿಗೊಳಿಸಿರುದಾಗಿ ಕೊಡಾ ದೂರಿನಲ್ಲಿ ತಿಳಿಸಿದ್ದಾರೆ 

No comments:

Post a Comment